ಆ್ಯಪ್ನಗರ

ಸಾವೆಹಕ್ಲು ಡ್ಯಾಂ ಭರ್ತಿ, ಬೆಳೆಗೆ ಹಾನಿ

ತಾಲೂಕಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ ಬುಧವಾರವೂ ಮುಂದುವರಿದಿದೆ. ಗ್ರಾಮೀಣ ಪ್ರದೇಶದ ಹಳ್ಳಕೊಳ್ಳ ತುಂಬಿ ಹರಿಯುತ್ತಿದ್ದು, ಹಲವಾರು ಕಡೆ ಜಮೀನಿಗೆ ನೀರು ನುಗ್ಗಿ ಬೆಳೆಗಳಿಗೆ ಹಾನಿಯಾಗಿದೆ. ಶುಂಠಿ, ಭತ್ತದ ಬೆಳೆಗಳು ಕೊಚ್ಚಿ ಹೋಗಿದ್ದು, ಮರಳು, ಕೆಸರು ಮಣ್ಣು ಜಮೀನಲ್ಲಿ ರಾಶಿ ಬಿದ್ದಿದೆ.

Vijaya Karnataka 8 Aug 2019, 5:00 am
ಹೊಸನಗರ: ತಾಲೂಕಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ ಬುಧವಾರವೂ ಮುಂದುವರಿದಿದೆ. ಗ್ರಾಮೀಣ ಪ್ರದೇಶದ ಹಳ್ಳಕೊಳ್ಳ ತುಂಬಿ ಹರಿಯುತ್ತಿದ್ದು, ಹಲವಾರು ಕಡೆ ಜಮೀನಿಗೆ ನೀರು ನುಗ್ಗಿ ಬೆಳೆಗಳಿಗೆ ಹಾನಿಯಾಗಿದೆ. ಶುಂಠಿ, ಭತ್ತದ ಬೆಳೆಗಳು ಕೊಚ್ಚಿ ಹೋಗಿದ್ದು, ಮರಳು, ಕೆಸರು ಮಣ್ಣು ಜಮೀನಲ್ಲಿ ರಾಶಿ ಬಿದ್ದಿದೆ.
Vijaya Karnataka Web SMR-7ANPP2 NEAR POLICE STATION


ವಿಶೇಷವಾಗಿ ನಗರ ಹೋಬಳಿಯಲ್ಲಿ ಅತಿ ಹೆಚ್ಚಿನ ಹಾನಿಯಾಗಿದೆ. ತಾಲೂಕಿನ ಬಿದನೂರು ನಗರ ಸಮೀಪದ ಚಿಕ್ಕಪೇಟೆಯಲ್ಲಿ ಧರೆ ಕುಸಿತಗೊಂಡು ಮನೆಗೆ ಹಾನಿಯಾಗಿದೆ. ಸೋಮವಾರಪೇಟೆಯ ಶಿಕ್ಷ ಕಿಯೊಬ್ಬರ ಮನೆ ಮೇಲೆ ಅಡಕೆ ಮರ ಬಿದ್ದು, ಚಾವಣಿಗೆ ಹಾನಿಯಾಗಿದೆ. ಯಡೂರು ಸರಕಾರಿ ಪ್ರೌಢಶಾಲೆ ರಂಗಮಂದಿರದ ಚಾವಣಿ ಹಾರಿಹೋಗಿದೆ. ಹೆಬ್ಬಳಬೈಲು ಗ್ರಾಮದ ಗಫೂರ್‌ಸಾಬ್‌ ಅವರ ಮನೆ ಚಾವಣಿ ಕುಸಿತಗೊಂಡಿದೆ. ಮಾಸ್ತಿಕಟ್ಟೆಯಿಂದ ತೀರ್ಥಹಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ಸುಣ್ಣದ ಮನೆ ಬಳಿ ಧರೆ ಕುಸಿತಗೊಂಡು, ಚರಂಡಿಯಲ್ಲಿ ಮಣ್ಣಿನ ರಾಶಿ ಬಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ನಗರದಿಂದ ತೀರ್ಥಹಳ್ಳಿ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ರಾರ‍ಯವೆ ಗ್ರಾಮದ ಸಮೀಪ ರಸ್ತೆ ಮೇಲೆ ನೀರು ನುಗ್ಗಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಹೆಚ್ಚಿದ ಮಳೆ ಪ್ರಮಾಣ: ಕಳೆದ 24 ಗಂಟೆಗಳಲ್ಲಿ ಹೊಸನಗರ ಪಟ್ಟಣದಲ್ಲಿ 248.80 ಮಿ.ಮೀ. ಮಳೆಯಾಗಿದೆ. ನಗರ 324 ಎಂ.ಎಂ., ಯಡೂರು 312 ಎಂ.ಎಂ., ಮಾನಿ 254 ಎಂ.ಎಂ. ಮಾಸ್ತಿಕಟ್ಟೆ 263 ಎಂ.ಎಂ., ಹುಲಿಕಲ್‌ 248 ಎಂ.ಎಂ., ಸೊನಲೆ 240 ಎಂ.ಎಂ., ರಾಮಚಂದ್ರಾಪುರ 224 ಎಂ.ಎಂ, ತ್ರಿಣಿವೆ 225 ಎಂ.ಎಂ, ಹುಂಚಾ 226 ಎಂ.ಎಂ ಮಳೆ ದಾಖಲಾಗಿದೆ.

ವಿದ್ಯುತ್‌ ಸಂಪರ್ಕ ಕಡಿತ: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಕಡೆ ವಿದ್ಯುತ್‌ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ತಾಲೂಕು ಕೇಂದ್ರದಲ್ಲೇ 24 ಗಂಟೆಗಳಿಂದ ವಿದ್ಯುತ್‌ ಸಂಪರ್ಕವಿಲ್ಲದಂತಾಗಿದೆ. ವಿದ್ಯುತ್‌ ವ್ಯತ್ಯಯದಿಂದ ಗ್ರಾಮೀಣ ಪ್ರದೇಶದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇಲ್ಲದೇ ಗ್ರಾಹಕರು ಪರದಾಡುವಂತಾಗಿದೆ.

ಡ್ಯಾಂ ಭರ್ತಿ: ನಗರ ಹೋಬಳಿಯ ಸಾವೆಹಕ್ಲು ಡ್ಯಾಂ ಭರ್ತಿಯಾಗಿದ್ದು, ನೀರನ್ನು ಹೊರಬಿಡಲಾಗಿದೆ. ಮಾನಿ ಜಲಾಶಯದಲ್ಲಿ 14775 ಕ್ಯೂಸೆಕ್ಸ್‌ ನೀರಿನ ಒಳಹರಿವಿದ್ದು, ನೀರಿನ ಮಟ್ಟ 581.96 (ಗರಿಷ್ಟ ಮಟ್ಟ 595 ಮೀ.)ಕ್ಕೇರಿದೆ. ಪಿಕ್‌ಡ್ಯಾಂನಲ್ಲಿ 563.32 (ಗರಿಷ್ಟ ಮಟ್ಟ 563.88) ನೀರಿನ ಮಟ್ಟ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ