ಆ್ಯಪ್ನಗರ

‘ತಂಬಾಕು ಸೇವನೆಗೆ ಹೇಳಿ ಗುಡ್‌ಬೈ’

ಯುವ ಜನತೆ ಸ್ವಯಂ ಪ್ರೇರಿತವಾಗಿ ತಂಬಾಕು ಸೇವನೆಯಿಂದ ದೂರವಿದ್ದು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಹರ್ಷ ಪಾಟೀಲ್‌ ಹೇಳಿದರು.

Vijaya Karnataka 5 Jan 2019, 5:00 am
ಸೊರಬ: ಯುವ ಜನತೆ ಸ್ವಯಂ ಪ್ರೇರಿತವಾಗಿ ತಂಬಾಕು ಸೇವನೆಯಿಂದ ದೂರವಿದ್ದು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಹರ್ಷ ಪಾಟೀಲ್‌ ಹೇಳಿದರು.
Vijaya Karnataka Web SMR-04SRBP1


ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್‌ ಕ್ರಾಸ್‌ ಯುವ ಘಟಕ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕು ಸೇವನೆ ಕ್ಯಾನ್ಸರ್‌ ರೋಗಕ್ಕೆ ಕಾರಣ. ಯುವಜನತೆ ಸಿಗರೇಟು, ಬೀಡಿ, ಗುಟುಕ, ತಂಬಾಕು ಸೇವನೆಯಿಂದ ಆರೋಗ್ಯ ಹಾಳುಮಾಡಿಕೊಳ್ಳುವುದರ ಜತೆಗೆ ಭವಿಷ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ತಂಬಾಕು ಮುಕ್ತ ಜೀವನ ಕಟ್ಟಿಕೊಳ್ಳಬೇಕೆಂದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮಾಲೋಚಕ ಹೇಮಂತರಾಜ್‌ ಅರಸ್‌ ಉಪನ್ಯಾಸ ನೀಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್‌ ಬರುವುದಲ್ಲದೇ ಆರ್ಥಿಕ ಹೊರೆ ಉಂಟಾಗಿ ಬಡತನ ಎದುರಾಗುತ್ತದೆ. ಭಾರತದಲ್ಲಿ ಶೇ.35ರಷ್ಟು ಜನರು ತಂಬಾಕು ಸೇವನೆ ಮಾಡುತ್ತಿದ್ದು, ವರ್ಷಕ್ಕೆ 10 ಲಕ್ಷ ಜನ ಸಾಯುತ್ತಿದ್ದಾರೆ. ರಾಜ್ಯದಲ್ಲಿ ಶೇ.28ರಷ್ಟು ಜನರು ಸೇವನೆ ಮಾಡುತ್ತಿರುವುದು ವಿಪರಾರ‍ಯಸ ಎಂದರು.

ತಂಬಾಕು ಸೇವನೆಯಿಂದ ಪ್ರಪಂಚದಲ್ಲಿ ಪ್ರತಿ 6 ಸೆಕೆಂಡ್‌ಗೆ ಒಬ್ಬರು ಮೃತಪಡುತ್ತಿದ್ದಾರೆ. ಯುವಜನತೆ ಸ್ವಯಂಪ್ರೇರಿತವಾಗಿ ದೂರವಾಗಿ, ಕುಟುಂಬದಲ್ಲೂ ಸೇವನೆ ಮಾಡುವವರಿಗೆ ಜಾಗೃತಿ ಮೂಡಿಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಂ.ಎಚ್‌.ರಾಜಪ್ಪ ಮಾತನಾಡಿದರು. ಮಾನಸ ಪ್ರಾರ್ಥಿಸಿ, ಎಸ್‌.ಎಸ್‌.ನೀಲೇಶ್‌ ಸ್ವಾಗತಿಸಿ, ಎಂ.ಎಸ್‌.ಮೋಹನ್‌ಕುಮಾರ್‌ ವಂದಿಸಿ, ಮೇಘರಾಜ್‌ ನಿರೂಪಿಸಿದರು. ತಾಲೂಕು ಆರೋಗ್ಯ ಶಿಕ್ಷ ಣಾಧಿಕಾರಿ ಅರುಂಧತಿ, ಸಾಮಾಜಿಕ ಕಾರ್ಯಕರ್ತ ರವಿರಾಜ್‌, ಆರೋಗ್ಯ ನಿರೀಕ್ಷ ಕ ಹರೀಶ್‌, ಡಾ.ವಿಶ್ವನಾಥ್‌, ಮಂಜುಳ, ರವಿ ಕಲ್ಲಂಬಿ, ಸೀಮಾ ಕೌಸರ್‌, ನಾರಾಯಣ್‌, ದಿಲೀಪ್‌, ಮಧುರಾ ಯಾದವ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ