ಆ್ಯಪ್ನಗರ

ವಿದ್ಯುತ್‌ ಕಂಬಕ್ಕೆ ಗುದ್ದಿದ ಸ್ಕೂಲ್‌ ಬಸ್‌

ಶಾಲೆ ಮಕ್ಕಳನ್ನು ಸಾಗಿಸುವ ಬಸ್‌ ರಸ್ತೆ ಪಕ್ಕದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕಂಬ ಮುರಿದು ಬಿದ್ದ ಘಟನೆ ಇಲ್ಲಿಗೆ ಸಮೀಪದ ಹೊಸಕೊಪ್ಪದಲ್ಲಿ ಸೋಮವಾರ ನಡೆದಿದೆ. ವಿದ್ಯುತ್‌ ಲೈನ್‌ನಲ್ಲಿ ಪವರ್‌ ಇಲ್ಲದ ಕಾರಣ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದ್ದು, ಚಾಲಕ ಮತ್ತು ಶಾಲೆ ಮಕ್ಕಳೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

Vijaya Karnataka 2 Jul 2019, 5:00 am
ಆನಂದಪುರಂ: ಶಾಲೆ ಮಕ್ಕಳನ್ನು ಸಾಗಿಸುವ ಬಸ್‌ ರಸ್ತೆ ಪಕ್ಕದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಕಂಬ ಮುರಿದು ಬಿದ್ದ ಘಟನೆ ಇಲ್ಲಿಗೆ ಸಮೀಪದ ಹೊಸಕೊಪ್ಪದಲ್ಲಿ ಸೋಮವಾರ ನಡೆದಿದೆ. ವಿದ್ಯುತ್‌ ಲೈನ್‌ನಲ್ಲಿ ಪವರ್‌ ಇಲ್ಲದ ಕಾರಣ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದ್ದು, ಚಾಲಕ ಮತ್ತು ಶಾಲೆ ಮಕ್ಕಳೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
Vijaya Karnataka Web school bus accident current poll fall
ವಿದ್ಯುತ್‌ ಕಂಬಕ್ಕೆ ಗುದ್ದಿದ ಸ್ಕೂಲ್‌ ಬಸ್‌


ಮುರುಘಾಮಠದ ಬಳಿ ಇರುವ ಕ್ರಿಯೇಟಿವ್‌ ಖಾಸಗಿ ಶಾಲೆಯ ಬಸ್‌ ಇದಾಗಿದೆ. ತಂಗಳವಾಡಿ ಮೂಲಕ ಹೊಸಕೊಪ್ಪಕ್ಕೆ ಬರುವ ಮಾರ್ಗದಲ್ಲಿ ಗ್ರಾಮದ ಶ್ರೀಶನೇಶ್ವರ ದೇಗುಲ ಸಮೀಪ ಈ ಘಟನೆ ನಡೆದಿದೆ. ಬೆಳಗ್ಗೆ ಇದೇ ಲೈನ್‌ ಮೇಲೆ ಮರದ ರೆಂಬೆ ಬಿದ್ದ ಕಾರಣ ಬಸ್‌ ಡಿಕ್ಕಿ ಹೊಡೆಯುವ ಸಂದರ್ಭದಲ್ಲಿ ವಿದ್ಯುತ್‌ ಇರಲಿಲ್ಲ. ಮಾಮೂಲಿನಂತೆ ವಿದ್ಯುತ್‌ ಇದ್ದರೆ ಬಸ್‌ಗೆ ಬೆಂಕಿ ತಗಲುವ ಸಾಧ್ಯತೆಯಿತ್ತು. ವಿವಿಧೆಡೆಯಿಂದ ಶಾಲೆಗೆ ಹೊರಟ 20ಕ್ಕೂ ಅಧಿಕ ಮಕ್ಕಳು ಬಸ್‌ನಲ್ಲಿ ಕುಳಿತಿದ್ದರು. 2 ವರ್ಷದ ಹಿಂದೆ ಇದೇ ಶಾಲೆಯ ಬಸ್‌ ದಾಸಕೊಪ್ಪದಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಸಾಗುವಾಗ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿತ್ತು. ಶಾಲೆ ಮಕ್ಕಳನ್ನು ಸಾಗಿಸುವ ಸಂದರ್ಭ ಅತ್ಯಂತ ಜಾಗರೂಕರಾಗಿ ಬಸ್‌ ಚಲಾಯಿಸಬೇಕೆಂದು ಹೊಸಕೊಪ್ಪ ಗ್ರಾಮಸ್ಥರಾದ ಡಿಎಸ್‌ಎಸ್‌ ಮುಖಂಡ ರೇವಪ್ಪ ಹೊಸಕೊಪ್ಪ, ನಾಗಪ್ಪ, ಚೆಲುವಪ್ಪ ಇತರರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ