ಆ್ಯಪ್ನಗರ

ತರಗತಿ ವೇಳೆಯಲ್ಲೇ ಶಾಲೆ ಚಾವಣಿ ಕುಸಿತ

ವಿದ್ಯಾರ್ಥಿಗಳು ಶಾಲೆ ಕೊಠಡಿಯಲ್ಲಿರುವ ವೇಳೆಯಲ್ಲೇ ಕಟ್ಟಡದ ಚಾವಣಿ ಕುಸಿತಗೊಂಡ ಘಟನೆ ತಾಲೂಕಿನ ನಗರ ಹೋಬಳಿ ಕೀಳಂದೂರಿನಲ್ಲಿ ಬುಧವಾರ ಸಂಭವಿಸಿದೆ.

Vijaya Karnataka 22 Aug 2019, 5:00 am
ಹೊಸನಗರ: ವಿದ್ಯಾರ್ಥಿಗಳು ಶಾಲೆ ಕೊಠಡಿಯಲ್ಲಿರುವ ವೇಳೆಯಲ್ಲೇ ಕಟ್ಟಡದ ಚಾವಣಿ ಕುಸಿತಗೊಂಡ ಘಟನೆ ತಾಲೂಕಿನ ನಗರ ಹೋಬಳಿ ಕೀಳಂದೂರಿನಲ್ಲಿ ಬುಧವಾರ ಸಂಭವಿಸಿದೆ.
Vijaya Karnataka Web SMR-21HOSP4

ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂದಿನಂತೆ ಪ್ರಾರ್ಥನೆ ನಂತರ ಮಕ್ಕಳು ಕೊಠಡಿಗೆ ತೆರಳಿ ತರಗತಿ ಕೇಳಲು ಸನ್ನದ್ಧರಾಗಿದ್ದರು. ಕಲಿಕೆಯಲ್ಲಿ ನಿರತರಾಗಿದ್ದ ವೇಳೆ ಚಾವಣಿ ದಿಢೀರ್‌ ಕುಸಿತಗೊಂಡಿದೆ. ಪಕಾಸಿ, ರೀಪುಗಳು ಮುರಿದು, ಕೊಠಡಿಯೊಳಗೆ ಬಿದ್ದಿದೆ. ಮುರಿವ ಸದ್ದು ಕೇಳುತ್ತಿದ್ದಂತೆ ಮಕ್ಕಳು ಒಮ್ಮೆಲೆ ಕೂಗಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಕೂಡಲೇ ಶಿಕ್ಷಕರಿಗೆ ಮಾಹಿತಿ ಕೊಟ್ಟಿದ್ದಾರೆ. ಇದರಿಂದ ಅವಘಡ ಕೂದಲೆಳೆಯ ಅಂತರದಿಂದ ತಪ್ಪಿದೆ. ಆದರೆ ಮಕ್ಕಳ ಆತಂಕ ಮಾತ್ರ ಹಾಗೆ ಉಳಿದಿದೆ.

ಚಾವಣಿಗೆ ಅಳವಡಿಸಿದ್ದ ಗುಜ್ಜು(ಕಂಬ)ಕುಸಿದಿದ್ದರಿಂದ ಚಾವಣಿ ಸುಮಾರು 2ಅಡಿ ಕೆಳಕ್ಕೆ ಜಾರಿದೆ. ವಿಷಯ ತಿಳಿದ ಸಮೀಪದ ಗ್ರಾಮಸ್ಥರು ಹಾಗೂ ಶಿಕ್ಷ ಕರು ತಕ್ಷ ಣದಲ್ಲೇ ಭಾಗಶಃ ಮುರಿದ ಚಾವಣಿಗೆ ತಾತ್ಕಾಲಿಕ ಕಂಬವನ್ನು ಆಸರೆಯಾಗಿ ಕೊಟ್ಟು ಸಂಪೂರ್ಣವಾಗಿ ಕುಸಿಯುವುದನ್ನು ತಡೆದಿದ್ದಾರೆ.

====
ಒಬ್ಬನಿಗೆ ಗಾಯ:
ಚಾವಣಿ ಕುಸಿತದಿಂದ ಹೆಂಚಿನ ಚೂರು ವಿದ್ಯಾರ್ಥಿಯೊಬ್ಬನ ಮೇಲೆ ಬಿದ್ದಿದ್ದರಿಂದ ಅಲ್ಪ ಪ್ರಮಾಣದ ಗಾಯವಾಗಿದೆ. ವಿದ್ಯಾರ್ಥಿಗಳೆಲ್ಲ ಹೊರಗೆ ಓಡಿ ಬಂದು ಶಿಕ್ಷ ಕರಿಗೆ ಮಾಹಿತಿ ನೀಡಿದ್ದು, ಅಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ಶಾಲೆಯಲ್ಲಿ 9 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಒಬ್ಬ ಶಿಕ್ಷ ಕರಿದ್ದಾರೆ. ಶಾಲೆಗೆ ಸಂಬಂಧಿಸಿದಂತೆ ಒಟ್ಟು 2 ಕೊಠಡಿಗಳಿವೆ. ಈ ಪೈಕಿ ಒಂದು ಕೊಠಡಿ ಶಿಥಿಲಗೊಂಡಿದ್ದ ಕಾರಣಕ್ಕೆ ಬಳಸುತ್ತಿರಲಿಲ್ಲ. ಈಗ ಇನ್ನೊಂದು ಕೊಠಡಿ ಸಹ ಜಖಂಗೊಂಡಿದೆ.

===
ಅಧಿಕಾರಿಗಳ ಭೇಟಿ:
ಘಟನಾ ಸ್ಥಳಕ್ಕೆ ಕ್ಷೇತ್ರ ಶಿಕ್ಷ ಣಾಧಿಕಾರಿ ರಾಮಪ್ಪಗೌಡ, ನೋಡಲ್‌ ಅಧಿಕಾರಿ ಶಿವಕುಮಾರ್‌, ಸಿಆರ್‌ಪಿ ಮಂಜನಾಯ್ಕ್‌ ಭೇಟಿ ನೀಡಿ ಪರಿಶೀಲಿಸಿದರು.

====
ಚಾವಣಿ ಸಂಪೂರ್ಣ ಶಿಥಿಲಗೊಂಡಿದೆ. ಕೊಠಡಿ ಗೋಡೆಗಳು ಸಹ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ದುರಸ್ತಿ ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ. ಹೊಸ ಕಟ್ಟಡ ನಿರ್ಮಾಣ ಆಗದೇ ಅನ್ಯ ಮಾರ್ಗವಿಲ್ಲ. ಸಂಬಂಧಪಟ್ಟವರು ತುರ್ತು ಗಮನ ಹರಿಸಬೇಕಿದೆ.
-ಎನ್‌.ವೈ.ಸುರೇಶ್‌, ಗ್ರಾಪಂ ಸದಸ್ಯ

=====
ಮಳೆಯಿಂದ ತೇವಗೊಂಡಿರುವ ಕಾರಣಕ್ಕೆ ಚಾವಣಿಯ ಗುಜ್ಜು ಕುಸಿದಿದೆ. ಚಾವಣಿ ಜಖಂ ಹಿನ್ನೆಲೆಯಲ್ಲಿ ಸಮೀಪದ ಅಂಗನವಾಡಿಯಲ್ಲಿ ತರಗತಿ ನಡೆಸಲು ಸೂಚಿಸಲಾಗಿದೆ. ಎಂಜಿನಿಯರ್‌ ಸಮೇತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಚಾವಣಿ ಮಾತ್ರ ಶಿಥಿಲಗೊಂಡಿದ್ದು, ಉಳಿದಂತೆ ಕಟ್ಟಡ ಚನ್ನಾಗಿದೆ, ದುರಸ್ತಿ ಮಾಡಿದಲ್ಲಿ ತರಗತಿಗಳನ್ನು ನಡೆಸಬಹುದು.
- ರಾಮಪ್ಪಗೌಡ, ಬಿಇಓ, ಹೊಸನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ