ಆ್ಯಪ್ನಗರ

ಶಿವಮೊಗ್ಗದಲ್ಲಿ ಸರಕಾರದ ಮಸೂದೆಗಳ ವಿರುದ್ಧ ಬೀದಿಗಳಿದ ಎಸ್‌ಡಿಪಿಐ, ಜೆಡಿಎಸ್‌ ಹಾಗೂ ರೈತ ಸಂಘ!

ಜೆಡಿಎಸ್‌ ಕಾರ್ಯಕರ್ತರು ಶಿವಮೊಗ್ಗ ನಗರದಲ್ಲಿ ಬೈಕ್‌ ರ‍್ಯಾಲಿ ನಡೆಸಿದರು. ಇನ್ನು ಜೆಡಿಎಸ್‌ ಕಾರ್ಯಕರ್ತರನ್ನು ಲಕ್ಷ್ಮೀ ಸಿನಿಮಾ ಮಂದಿರದ ಬಳಿ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಕಾರರು ರಾಜ್ಯ ಸರಕಾರ, ಸಿಎಂ ಬಿಎಸ್‌ ಯಡಿಯೂರಪ್ಪ ಸೇರಿ ಮಸೂದೆಯ ವಿರುದ್ಧ ಕಿಡಿಕಾರಿದ್ದಾರೆ. ಜಾರಿಗೆ ತಂದು ಜನರಿಗೆ ಮೋಸ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಎಸ್‌ಡಿಪಿಐ ಕೂಡ ಪ್ರತಿಭಟನೆ ಕೈಗೊಂಡಿತ್ತು.

Vijaya Karnataka Web 28 Sep 2020, 1:42 pm
ಬೆಂಗಳೂರು: ಭೂಸುಧಾರಣಾ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ, ದಲಿತ ಹಾಗೂ ಕಾರ್ಮಿಕ ಸಂಘಟನೆಗಳು ಕರ್ನಾಟಕ ಬಂದ್ ಕರೆ ಕೊಟ್ಟಿವೆ. ರಾಜ್ಯಾದ್ಯಂತ ಬಂದ್ ನಡೆಯುತ್ತಿದ್ದು ಶಿವಮೊಗ್ಗದಲ್ಲಿಯು ಪ್ರತಿಭಟನೆ ನಡೆದಿದೆ. ಎಸ್‌ಡಿಪಿಐ, ಜೆಡಿಎಸ್‌ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಯಿತು.
Vijaya Karnataka Web sdpi raitha sanga protests aganist state govt farm bill in shimoga
ಶಿವಮೊಗ್ಗದಲ್ಲಿ ಸರಕಾರದ ಮಸೂದೆಗಳ ವಿರುದ್ಧ ಬೀದಿಗಳಿದ ಎಸ್‌ಡಿಪಿಐ, ಜೆಡಿಎಸ್‌ ಹಾಗೂ ರೈತ ಸಂಘ!


ಇನ್ನು ಜೆಡಿಎಸ್‌ ಕಾರ್ಯಕರ್ತರು ಶಿವಮೊಗ್ಗ ನಗರದಲ್ಲಿ ಬೈಕ್‌ ರ‍್ಯಾಲಿ ನಡೆಸಿದರು. ಇನ್ನು ಜೆಡಿಎಸ್‌ ಕಾರ್ಯಕರ್ತರನ್ನು ಲಕ್ಷ್ಮೀ ಸಿನಿಮಾ ಮಂದಿರದ ಬಳಿ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಕಾರರು ರಾಜ್ಯ ಸರಕಾರ, ಸಿಎಂ ಬಿಎಸ್‌ ಯಡಿಯೂರಪ್ಪ ಸೇರಿ ಮಸೂದೆಯ ವಿರುದ್ಧ ಕಿಡಿಕಾರಿದ್ದಾರೆ. ಜಾರಿಗೆ ತಂದು ಜನರಿಗೆ ಮೋಸ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಎಸ್‌ಡಿಪಿಐ ಕೂಡ ಪ್ರತಿಭಟನೆ ಕೈಗೊಂಡಿತ್ತು.

ಏನಿದು ಎಪಿಎಂಸಿ ಕಾಯಿದೆ?
ಎಪಿಎಂಸಿ ಕಾಯ್ದೆಯ ಪ್ರಕಾರ ರೈತರು ತಾವು ಬೆಳೆದ ಬೆಳೆಗಳನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಬೇಕಾಗಿತ್ತು ಹಾಗೂ ಉತ್ಪನ್ನವನ್ನು ಖರೀದಿ ಮಾಡುವವರು ಅನುಮತಿ ಪಡೆಯಬೇಕಾಗಿತ್ತು. ಇದನ್ನು ಮೀರಿ ನಡೆದರೆ ಅಂತಹ ಖರೀದಿದಾರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವ ಅವಕಾಶವಿತ್ತು.

ನೇಗಿಲ ಯೋಗಿಯ ಹಾಡಿಗೆ ಕುಣಿದು, ರೈತರ ಹೋರಾಟಕ್ಕೆ ಸಾಥ್ ನೀಡಿದ ವಿಕಲಚೇತನ ಯುವಕ

ಆದರೆ ಇದಕ್ಕೆ ತಿದ್ದುಪಡಿ ತರಲಾಗಿದ್ದು ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದುದಾಗಿದೆ. ಪರಿಣಾಮ ಎಪಿಎಂಸಿಗಳು ಬಲಹೀನಗೊಳ್ಳಲಿದೆ ಹಾಗೂ ಕೃಷಿ ಕ್ಷೇತ್ರದಲ್ಲೂ ಕಾರ್ಪೊರೇಟರ್‌ ಕಂಪನಿಗಳ ನೇರ ಭಾಗಿದಾರಿಕೆಗೆ ಅವಕಾಶ ಕಲ್ಪಿಸಿಕೊಟ್ಟಂತ್ತಾಗಲಿದೆ ಎಂಬುವುದು ಪ್ರತಿಭಟನಾಕಾರರ ಆಕ್ಷೇವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ