ಆ್ಯಪ್ನಗರ

ಪಕ್ಷೇತರ ಅಭ್ಯರ್ಥಿಯಾಗಿ ಶಶಿಕುಮಾರ್‌ ಕಣಕ್ಕೆ

ಒಂದಲ್ಲ ಒಂದು ದಿನ ಶಿವಮೊಗ್ಗ ಕ್ಷೇತ್ರ ಸಂಸದನಾಗುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಶಶಿಕುಮಾರ್‌ ಎಸ್‌.ಗೌಡ ಹೇಳಿದರು.

Vijaya Karnataka 2 Apr 2019, 5:00 am
ಶಿವಮೊಗ್ಗ: ಒಂದಲ್ಲ ಒಂದು ದಿನ ಶಿವಮೊಗ್ಗ ಕ್ಷೇತ್ರ ಸಂಸದನಾಗುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಶಶಿಕುಮಾರ್‌ ಎಸ್‌.ಗೌಡ ಹೇಳಿದರು.
Vijaya Karnataka Web shashikumar is the independent candidate
ಪಕ್ಷೇತರ ಅಭ್ಯರ್ಥಿಯಾಗಿ ಶಶಿಕುಮಾರ್‌ ಕಣಕ್ಕೆ


ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿ, ಮೂರು ಬಾರಿ ವಿಧಾನಸಭಾ ಚುನಾವಣೆ, ಎರಡೂ ಬಾರಿ ಲೋಕಸಭಾ ಚುನಾವಣೆ ಸ್ಪರ್ಧೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆ. ಕಳೆದ ಬಾರಿ ನಡೆದ ಉಪಚುನಾವಣೆಯಲ್ಲಿ 17ಕ್ಕೂ ಅಧಿಕ ಮತ ಪಡೆದು ಮೂರನೇ ಸ್ಥಾನದಲ್ಲಿದ್ದೆ, ಮುಂದೊಂದು ದಿನ ಈ ಕ್ಷೇತ್ರ ಸಂಸದನಾಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ತಂದೆ, ತಾತ ಎಲ್ಲಾರೂ ವಿಐಎಸ್‌ಎಲ್‌ ಉದ್ಯೋಗಿಗಳಾಗಿದ್ದರು. ಆದರೆ ಇಂದು ವಿಐಎಸ್‌ಎಲ್‌ ಮುಚ್ಚುವ ಹಂತ ತಲುಪಿದೆ. ಯಾವ ರಾಜಕಾರಣಿಗಳೂ ಕಾರ್ಖಾನೆ ಉಳಿಸುವ ಪ್ರಯತ್ನ ಮಾಡಿಲ್ಲ. ಹೀಗಾಗಿ ನಾನು ಸಂಸದನಾಗಿ ಆಯ್ಕೆಯಾದರೆ ಕಾರ್ಖಾನೆ ಅಭಿವೃದ್ಧಿಗೊಳಿಸಬಹುದು ಎಂಬ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತೀದ್ದೇನೆ ಎಂದರು. ದೇಶದಲ್ಲಿ ಚುನಾವಣೆಯಲ್ಲಿ ಬಡವರು ಮತ್ತು ವಿದ್ಯಾವಂತರು ಸ್ಪರ್ಧೆ ಮಾಡಬಹುದು ಎಂಬ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದೇನೆ. ದೇಶದಲ್ಲಿ ಬದಲಾವಣೆ ತರಬಹುದು ಎಂಬ ಉದ್ದೇಶದಿಂದ ಸ್ಪರ್ಧಿಸುತ್ತಿದ್ದು, ಎಲ್ಲೂ ಜಾತಿಯ ಹೆಸರು ಹೇಳಿಕೊಂಡು ಮತ ಕೇಳುತ್ತಿಲ್ಲ. ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಗೋಷ್ಠಿಯಲ್ಲಿ ಜಗನ್ನಾಥ್‌ ಶೆಟ್ಟಿ, ದೀಪಕ್‌ ಗೌಡ, ಸತೀಶ್‌ ರೆಡ್ಡಿ, ರವಿಕಿಶನ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ