ಆ್ಯಪ್ನಗರ

ಶಿವಮೊಗ್ಗ: ಮನೆಯೊಳಗೆ ಆಟವಾಡುತ್ತಿದ್ದ ಮಗು ನಾಪತ್ತೆ, ಪೋಷಕರಿಗೆ ಟೆನ್ಷನ್‌; ಕೊನೆಗೆ ಎಲ್ಲಿತ್ತು ಗೊತ್ತಾ?

ಮಗು ಕಾಣಿಸದ ಹಿನ್ನೆಲೆಯಲ್ಲಿ ಮಗುವಿನ ತಾಯಿ ಹಾಗೂ ಅಜ್ಜ ,ಅಜ್ಜಿ ಒಮ್ಮೆಲೆ ಗಾಬರಿ ಅನುಭವಿಸಿದ್ದಾರೆ. ಗಂಟೆಗಳ ಕಾಲ ಪರದಾಡಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಆದರೆ ಇಂಟ್ರೆಸ್ಟಿಂಗ್‌ ಸಂಗತಿ ಎಂದರೆ ಮಗು ಕೊನೆಗೂ ಪತ್ತೆಯಾಗಿದೆ. ಹೇಗೆ? ಇಲ್ಲಿದೆ ಮಾಹಿತಿ.

Vijaya Karnataka Web 4 Nov 2020, 8:34 am
ಸಾಗರ: ಮನೆಯೊಳಗೆ ಆಟವಾಡಿಕೊಂಡಿದ್ದ ಪುಟ್ಟ ಮಗುವೊಂದು ತಾಸುಗಳ ಕಾಲ ಕಾಣಿಸದೇ ಪೋಷಕರು ಪರದಾಡಿದ ಪ್ರಕರಣ ಸೋಮವಾರ ನಡೆದಿದ್ದು ಸುಖಾಂತ್ಯ ಕಂಡಿದೆ. ಇಲ್ಲಿನ ಅಣಲೆಕೊಪ್ಪದ ಪತ್ರಿಕಾಭವನದ ಸಮೀಪದ ಮನೆಯೊಂದಲ್ಲಿ ಆಟವಾಡಿಕೊಂಡಿದ್ದ ಪುಟ್ಟ ಬಾಲಕಿ ಏಕಾಏಕಿ ಮನೆಯಲ್ಲಿ ಕಾಣಿಸಿಲ್ಲ.
Vijaya Karnataka Web child


ಆತಂಕದಿಂದ ಮಗುವಿನ ತಾಯಿ ಮತ್ತು ಅಜ್ಜ, ಅಜ್ಜಿ ಗಾಬರಿ ಬಿದ್ದು, ಆಕ್ಕಪಕ್ಕ ಮಗುವನ್ನು ಅರಸತೊಡಗಿದ್ದರು. ತಾಸುಗಳ ಕಾಲ ಹುಡುಕಿದರೂ ಮಗು ಕಾಣಿಸಿಲ್ಲ. ಮಗುವಿನ ಅಪಹರಣ ಆಗಿರಬಹುದೆಂದು ಸ್ಥಳೀಯರು ಮಾತನಾಡಿಕೊಳ್ಳತೊಡಗಿದರು. ತಕ್ಷಣ ಸುದ್ದಿ ತಿಳಿದ ಪೇಟೆ ಠಾಣೆಯ ನಗರ ಗಸ್ತು ವಾಹನ ಹೊಯ್ಸಳದಲ್ಲಿ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಮಾರ್ಗ ಮಧ್ಯದಲ್ಲಿಯೇ ಮಗುವಿನ ಕುಟುಂಬದವರು ದೂರವಾಣಿ ಮೂಲಕ ಮಗು ಮನೆಯಲ್ಲಿಯೇ ಕಾಣಿಸಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಡವಾಡಿಕೊಂಡಿದ್ದ ಮಗು ಟಿವಿ ಬಾಕ್ಸ್‌ನ ಪಕ್ಕದ ಪುಟ್ಟ ಜಾಗದಲ್ಲಿನಿದ್ದೆ ಮಾಡಿದೆ. ಮಗು ಕಾಣಿಸದ ಹಿನ್ನೆಲೆಯಲ್ಲಿ ಮಗುವಿನ ತಾಯಿ ಹಾಗೂ ಅಜ್ಜ ,ಅಜ್ಜಿ ಒಮ್ಮೆಲೆ ಗಾಬರಿ ಅನುಭವಿಸಿದ್ದಾರೆ. ಗಂಟೆಗಳ ಕಾಲ ಪರದಾಡಿದ್ದಾರೆ. ಕೊನೆಗೆ ಮಗು ಮನೆಯೊಳಗೇ ಪತ್ತೆಯಾದಾಗ ನಿಟ್ಟಿಸಿರು ಬಿಟ್ಟಿದ್ದಾರೆ. ಪರಸ್ಥಳದಲ್ಲಿ ಉದ್ಯೋಗದಲ್ಲಿರುವ ಪತಿಯೊಂದಿಗೆ ವಾಸವಾಗಿರುವ ಮಗಳು ತನ್ನ ಮಗುವಿನೊಂದಿಗೆ ತವರು ಮನೆಗೆ ಬಂದಾಗ ಈ ಘಟನೆ ನಡೆದಿದೆ. ಮಗು ಕಾಣೆ ಪ್ರಕರಣ ಸುಖಾಂತ್ಯ ಕಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ