ಆ್ಯಪ್ನಗರ

ಶಿವಮೊಗ್ಗ: ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಕಾವೇರಿ 2.0 ಸೇವೆ ಅವಾಂತರ

ಸುಧಾರಿತ ಮಾದರಿಯಲ್ಲಿ ಕಾವೇರಿ -2.0 ತಂತ್ರಾಂಶ ಆವಿಷ್ಕಾರಗೊಂಡಿದ್ದು ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ನೋಂದಣಿ, ದಾಖಲೆಗಳ ವಿತರಣೆ ಕ್ರಮ ಕ್ಷಣಾರ್ಧದಲ್ಲಿ ಸಾಧ್ಯ ಎಂದು ಕೊಂಡಿರುವುದು ಈಗ ಸುಳ್ಳಾಗಿದೆ. ದಿನ, ವಾರವಾದರೂ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಸಾರ್ವಜನಿಕರ ಅಗತ್ಯ ಕೆಲಸ ಆಗುತ್ತಿಲ್ಲ.

Edited byಶ್ರೀಲಕ್ಷ್ಮೀ ಎಚ್ಎಲ್ | Vijaya Karnataka Web 4 Aug 2023, 11:19 am

ಹೈಲೈಟ್ಸ್‌:

  • ಮಾದರಿ ತಂತ್ರಾಂಶದ ರಗಳೆಗೆ ಸಾರ್ವಜನಿಕರು ಸುಸ್ತು
  • ಸಬ್‌ರಿಜಿಸ್ಟರ್‌ ಕಚೇರಿಯಲ್ಲಿಕಾವೇರಿ ಅವಾಂತರ
  • ವಾರವಾದರೂ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಸಾರ್ವಜನಿಕರ ಅಗತ್ಯ ಕೆಲಸ ಆಗುತ್ತಿಲ್ಲ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Kaveri 2.0
ಕಾವೇರಿ- 2.0 ತಂತ್ರಾಂಶ.
  • ರಾಘವೇಂದ್ರ ಮೇಗರವಳ್ಳಿ ತೀರ್ಥಹಳ್ಳಿ
ಶಿವಮೊಗ್ಗ: ಅಗತ್ಯ ದಾಖಲಾತಿ ಕೆಲಸವನ್ನು ಸರಳಗೊಳಿಸುವ ಮಹತ್ವದ ಉದ್ದೇಶದಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ನೂತನವಾಗಿ ಅನುಷ್ಠಾನಗೊಂಡ ಕಾವೇರಿ-2.0 ಸೇವೆ ಸಾರ್ವಜನಿಕರನ್ನು ಸಂಕಟಕ್ಕೆ ತಳ್ಳಿದೆ.
ಸಕಾಲ ಯೋಜನೆಯ ಸೇವೆ ಕೂಡ ಇಲಾಖೆಯಲ್ಲಿ ದುರ್ಬಲಗೊಂಡಿದ್ದು, ಸಬ್‌ರಿಜಿಸ್ಟರ್‌ ಕಚೇರಿಗೆ ಹತ್ತಾರು ಬಾರಿ ಅಲೆದರೂ ಅಗತ್ಯ ದಾಖಲಾತಿಗಳು ಸಾರ್ವಜನಿಕರ ಕೈ ಸೇರುತ್ತಿಲ್ಲ. ತಂತ್ರಾಂಶದಲ್ಲಿನ ತಾಂತ್ರಿಕ ಅಡಚಣೆ ಕಚೇರಿಯ ಅಧಿಕಾರಿ, ಸಿಬ್ಬಂದಿಯನ್ನು ಹೈರಾಣ ಮಾಡಿದೆ.

ಸುಧಾರಿತ ಮಾದರಿಯಲ್ಲಿ ಕಾವೇರಿ -2.0 ತಂತ್ರಾಂಶ ಆವಿಷ್ಕಾರಗೊಂಡಿದ್ದು ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ನೋಂದಣಿ, ದಾಖಲೆಗಳ ವಿತರಣೆ ಕ್ರಮ ಕ್ಷಣಾರ್ಧದಲ್ಲಿ ಸಾಧ್ಯ ಎಂದು ಕೊಂಡಿರುವುದು ಈಗ ಸುಳ್ಳಾಗಿದೆ. ದಿನ, ವಾರವಾದರೂ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ಸಾರ್ವಜನಿಕರ ಅಗತ್ಯ ಕೆಲಸ ಆಗುತ್ತಿಲ್ಲ.

ಕೆಇಎ ನೇಮಕಾತಿ 2023: 4 ಸರ್ಕಾರಿ ಸಂಸ್ಥೆ ಹುದ್ದೆಗಳ ಅರ್ಜಿಗೆ ಮತ್ತೊಮ್ಮೆ ಕೊನೆ ದಿನಾಂಕ ವಿಸ್ತರಣೆ

ತಂತ್ರಾಂಶದಲ್ಲಿ ಭಾರೀ ಅಡಚಣೆ

ಆಸ್ತಿ ಕ್ರಯ ಪತ್ರ, ವಿವಾಹ ನೋಂದಣಿ, ಋುಣಭಾರ ರಹಿತ್ಯ ಪ್ರಮಾಣ ಪತ್ರ (ಇ.ಸಿ), ಪ್ರಮಾಣೀಕೃತ ಪ್ರತಿ ಸೇರಿದಂತೆ ಅನೇಕ ದಾಖಲೆಗಳ ಕೆಲಸಕ್ಕೆ ಸಾರ್ವಜನಿಕರು ಇದೀಗ ಕಾವೇರಿ-2.0 ತಂತ್ರಾಂಶದ ಆನ್‌ಲೈನ್‌ ಸೇವೆಯನ್ನೇ ಅವಲಂಬಿಸಬೇಕಾಗಿದೆ. ಜುಲೈ ತಿಂಗಳ 2ನೇ ವಾರದಿಂದ ತಂತ್ರಾಂಶದಲ್ಲಿ ಭಾರೀ ಅಡಚಣೆ ಉಂಟಾಗಿದ್ದು, ತಾಂತ್ರಿಕ ವಿಭಾಗಕ್ಕೆ ದೂರು ಸಲ್ಲಿಕೆ ಆಗಿದ್ದರೂ ಈವರೆಗೂ ಸಮಸ್ಯೆ ಬಗೆಹರಿದಿಲ್ಲ. ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸುವ ಸಾರ್ವಜನಿಕರಿಗೆ ನಿರಾಸೆ ಕಟ್ಟಿಟ್ಟ ಬುತ್ತಿಯಂತಿದೆ.

ಶುಲ್ಕ ಪಾವತಿಸಿದ ನಂತರ ತಂತ್ರಾಂಶದಲ್ಲಿಉಂಟಾಗುತ್ತಿರುವ ತಾಂತ್ರಿಕ ಅಡಚಣೆ ಕಾರಣಕ್ಕೆ ಅರ್ಜಿದಾರರು ಸಾವಿರಾರು ರೂ. ನಷ್ಟ ಅನುಭವಿಸಿ ಜೇಬಿಗೆ ಕತ್ತರಿ ಹಾಕಿಸಿಕೊಳ್ಳುವಂತಾಗಿದೆ. ಸಬ್‌ ರಿಜಿಸ್ಟರ್‌ ಕಚೇರಿ ಅಧಿಕಾರಿ, ಸಿಬ್ಬಂದಿಗೆ ತಾಂತ್ರಿಕ ಅಡಚಣೆ ವಿಷಯ ಹೇಳಿದ ನಂತರ ಅರ್ಜಿದಾರರ ಪ್ರಶ್ನೆಗೆ ಉತ್ತರಿಸಲಾಗದೆ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದಾರೆ. ಸುಧಾರಿತ ಕಾವೇರಿ-2.0 ತಂತ್ರಾಂಶದಲ್ಲಿನಿರೀಕ್ಷೆಗೂ ಮೀರಿದ ಸಮಸ್ಯೆ ಎದುರಾಗಿದ್ದು ಅವಾಂತರ ಸೃಷ್ಟಿಸಿದೆ.

ಬದಲಾದ ಆಧಾರ್‌ ಲಿಂಕ್‌ ವರ್ಶನ್‌, ಗ್ರಾಹಕರಿಗೆ ಟೆನ್ಶನ್‌! ಗೃಹಲಕ್ಷ್ಮೀ ಪ್ರಕ್ರಿಯೆ ವಿಳಂಬ

1 ದಿನದಲ್ಲಿಅರ್ಜಿ ವಿಲೇವಾರಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ವಿಭಾಗ) ಕಾವೇರಿ-2.0 ತಂತ್ರಾಂಶ ಅಭಿವೃದ್ಧಿಪಡಿಸಿದೆ. ಚಿಂಚೋಳಿ, ಬೆಳಗಾವಿ ದಕ್ಷಿಣ ಕಚೇರಿ, ಉಡುಪಿ, ಬಳ್ಳಾರಿ, ದೊಡ್ಡಬಳ್ಳಾಪುರ ಕಚೇರಿಯಲ್ಲಿ ಪ್ರಾಯೋಗಿಕವಾಗಿ 2023 ಫೆಬ್ರವರಿ ತಿಂಗಳಲ್ಲಿಅನುಷ್ಠಾನ ಮಾಡಲಾಗಿದೆ. 2023 ಏಪ್ರಿಲ್‌ 1ರಿಂದ ರಾಜ್ಯದ ಎಲ್ಲಜಿಲ್ಲೆಗಳ ಸಬ್‌ರಿಜಿಸ್ಟರ್‌ ಕಚೇರಿಯಲ್ಲಿ ವಿವಿಧ ದಿನಾಂಕಗಳಲ್ಲಿ ಕಾವೇರಿ -2.0 ತಂತ್ರಾಂಶದ ಸೇವೆ ಆರಂಭಗೊಂಡಿದೆ.

ಕಂದಾಯ ಇಲಾಖೆಯ ಅಧೀನದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಕಾವೇರಿ-2.0 ತಂತ್ರಾಂಶದ ಸೇವೆ ತಾಂತ್ರಿಕತೆಯಲ್ಲಿಅನೇಕ ಎಡವಟ್ಟುಗಳನ್ನು ಜೀವಂತ ಇಟ್ಟುಕೊಂಡಿದ್ದು, ನಿರೀಕ್ಷಿತ ಯಶಸ್ಸು ಪಡೆದಿಲ್ಲ. ಆನ್‌ಲೈನ್‌ನಲ್ಲಿತಂತ್ರಾಂಶದ ಮೂಲಕ ಸಲ್ಲಿಕೆಯಾಗುವ ಅರ್ಜಿಯನ್ನು ಒಂದು ದಿನದ ಅವಧಿಯೊಳಗೆ ವಿಲೇವಾರಿ ಮಾಡಬೇಕು ಎಂದು ಸರಕಾರ ಕಡ್ಡಾಯ ಆದೇಶ ಹೊರಡಿಸಿರುವುದು ಇನ್ನಷ್ಟು ಗೊಂದಲ ಮೂಡಿಸಿದೆ.

ಐಬಿಪಿಎಸ್‌ನಿಂದ 3049 ಬ್ಯಾಂಕ್‌ ಪಿಒ, ಎಂಟಿ ಹುದ್ದೆ ಪರೀಕ್ಷೆಗೆ ಅಧಿಸೂಚನೆ ಪ್ರಕಟ: ಅರ್ಜಿ ಆಹ್ವಾನ
ನೋಂದಣಿ, ವಿಭಾಗ ಪತ್ರ, ಅದಲು ಬದಲು ದಾಖಲೆಗಳ ಕೆಲಸ ನಿಗದಿತ ಅವಧಿಯಲ್ಲಿಆಗುತ್ತಿಲ್ಲ. ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸಿ ಸಮಯ ಪಡೆದು ಸಬ್‌ರಿಜಿಸ್ಟರ್‌ ಕಚೇರಿಗೆ ತೆರಳಿದರೆ ತಂತ್ರಾಂಶದ ತಾಂತ್ರಿಕ ಅಡಚಣೆ ಮಾಹಿತಿ ಕೇಳಿ ಸಾರ್ವಜನಿಕರು ವಾಪಸಾಗುತ್ತಿದ್ದಾರೆ.

ಸಾಲ ಇದ್ದರು ಇಲ್ಲಎಂಬ ಮಾಹಿತಿಯ ಇ.ಸಿ.ದಾಖಲೆ..!

ಕ್ರಯ, ವಿಭಾಗ ಪತ್ರ ನೋಂದಣಿಗೆ ಸರಕಾರ ನಿಗದಿಪಡಿಸಿದಕ್ಕಿಂತ ಹೆಚ್ಚು ಮೊತ್ತದ ಶುಲ್ಕ ಪಾವತಿಸಬೇಕು ಎಂಬ ಮಾಹಿತಿಯನ್ನು ತಂತ್ರಾಂಶ ತೋರಿಸುತ್ತಿದೆ. ಉದಾ-1 ವಿಭಾಗ ಪತ್ರ ನೋಂದಣಿಗೆ 25 ಸಾವಿರ ರೂ.ಗೂ ಹೆಚ್ಚು ಮೊತ್ತದ ಶುಲ್ಕ ಪಾವತಿಗೆ ತಂತ್ರಾಂಶ ಸೂಚಿಸುತ್ತಿರುವುದು ಸಾರ್ವಜನಿಕರನ್ನು ಕಂಗಾಲು ಮಾಡಿದೆ.

ಎಸ್‌ಎಸ್‌ಸಿ ಇಂದ 1324 ಜೆಇ ನೇಮಕ: ಅರ್ಜಿ ಸಲ್ಲಿಸುವ ವಿಧಾನ, ಲಿಂಕ್ ಇಲ್ಲಿದೆ..
ತಂತ್ರಾಂಶದಲ್ಲಿ ಋುಣಭಾರ ರಹಿತ್ಯ ಪ್ರಮಾಣ ಪತ್ರ (ಇ.ಸಿ) ಮತ್ತಷ್ಟು ರಗಳೆ ಹುಟ್ಟಿಸಿದೆ. ಸಾಲ ಪಡೆದ ವಿವರ ದಾಖಲೆಯಲ್ಲಿನಮೂದಾಗಿದ್ದರೂ ಸಾಲ ಇಲ್ಲಎಂಬ ಮಾಹಿತಿಯುಳ್ಳ ಇ.ಸಿ. ದಾಖಲೆ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ. ಸಾರ್ವಜನಿಕರು ಹಣತೆತ್ತು ಪುನಾ ಅರ್ಜಿ ಸಲ್ಲಿಸಿ ಕ್ರಮಬದ್ದ ಇ.ಸಿ. ದಾಖಲೆ ಪಡೆಯಬೇಕಾದ ಅನಿವಾರ‍್ಯತೆ ಎದುರಾಗಿದೆ.

ಕಾವೇರಿ-2.0 ತಂತ್ರಾಂಶದಲ್ಲಿದೊಡ್ಡಮಟ್ಟದ ಯಾವುದೇ ದೋಷ ಇಲ್ಲ. ಅರ್ಜಿಯಲ್ಲಿವಿವರವಾದ ಮಾಹಿತಿ ನೀಡದ ಸಂದರ್ಭ ಅಗತ್ಯ ದಾಖಲೆ ವಿತರಣೆ ಆಗದು. ವಿಭಾಗ ಪತ್ರಕ್ಕೆ ಹೆಚ್ಚು ಶುಲ್ಕ ಪಾವತಿಸುವ, ಇ.ಸಿ. ದಾಖಲೆ ಕುರಿತಂತೆ ತೊಂದರೆ ಎದುರಾದರೆ ಸಬ್‌ ರಿಜಿಸ್ಟರ್‌ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಿ ಕೊಳ್ಳಬಹುದು.

- ಗಿರೀಶ್‌, ಉಪ ನಿರ್ದೇಶಕರು

ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಶಿವಮೊಗ್ಗ
ಲೇಖಕರ ಬಗ್ಗೆ
ಶ್ರೀಲಕ್ಷ್ಮೀ ಎಚ್ಎಲ್
ಶ್ರೀಲಕ್ಷ್ಮೀ ಅವರು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯವರು. ಕಳೆದ 5 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ವಿಜಯ ಕರ್ನಾಟಕ ಆನ್‌ಲೈನ್‌ ನಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶೀಯ ಸುದ್ದಿಗಳು, ಲೈಫ್‌ಸ್ಟೈಲ್ ಸುದ್ದಿಗಳನ್ನು ಬರೆಯುವುದು ಅಚ್ಚುಮೆಚ್ಚು. ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುವುದು, ಕಲಿಯುವುದು, ಹೊಸ ಜಾಗಗಳಿಗೆ ಭೇಟಿ ನೀಡುವುದು ಇಷ್ಟದ ವಿಚಾರ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ