ಆ್ಯಪ್ನಗರ

ಶೀಘ್ರದಲ್ಲೇ ಶಿವಮೊಗ್ಗ ಸ್ಮಾರ್ಟ್‌ ಸಿಟಿ

ಕೆಲ ತಾಂತ್ರಿಕ ಕಾರಣ ಹಾಗೂ ಸ್ಥಳೀಯ ಟೆಂಡರ್‌ದಾರರ ಕೊರತೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗೆ ವಿಳಂಬವಾಗಿದೆ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಚಾರುಲತಾ ಸೋಮಲ್‌ ಹೇಳಿದರು.

Vijaya Karnataka 13 Jun 2019, 5:00 am
ಶಿವಮೊಗ್ಗ: ಕೆಲ ತಾಂತ್ರಿಕ ಕಾರಣ ಹಾಗೂ ಸ್ಥಳೀಯ ಟೆಂಡರ್‌ದಾರರ ಕೊರತೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾಗಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗೆ ವಿಳಂಬವಾಗಿದೆ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಚಾರುಲತಾ ಸೋಮಲ್‌ ಹೇಳಿದರು.
Vijaya Karnataka Web SMR-12GANESH2


ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಬುಧವಾರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸ್ಮಾರ್ಟ್‌ ಸಿಟಿ ಯೋಜನೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ಮಾರ್ಟ್‌ ಸಿಟಿ ಯೋಜನೆ ಸಣ್ಣ ಯೋಜನೆಯಲ್ಲ. ಇಂತಹ ಯೋಜನೆಗಳು ಜಾರಿಯಾದಾಗ ಆರಂಭದಲ್ಲಿ ವಿಳಂಬ ಸಹಜ. ಇದು ಶಿವಮೊಗ್ಗ ಜಿಲ್ಲೆಯೊಂದರ ಕಥೆಯಲ್ಲ, ಸ್ಮಾರ್ಟ್‌ಸಿಟಿಗೆ ಆಯ್ಕೆಯಾದ ಎಲ್ಲ ಜಿಲ್ಲೆಗಳ ಕಥೆಯೂ ಇದೆ. ತಾಂತ್ರಿಕ ಕಾರಣ ಹಾಗೂ ಸ್ಥಳೀಯ ಮಟ್ಟದ ಸಮಸ್ಯೆಗಳು ಕಾರಣವಾಗುತ್ತವೆ ಎಂದರು.

ಶಿವಮೊಗ್ಗದಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿ ಆರಂಭಕ್ಕೆ ಇದ್ದ ಅಡೆತಡೆಗಳೆಲ್ಲವೂ ಈಗ ಬಗೆಹರಿದಿವೆ. ಬಹುತೇಕ ಕಾಮಗಾರಿಗಳು ಟೆಂಡರ್‌ ಹಂತಕ್ಕೆ ಬಂದಿವೆ. 5 ಕೋಟಿ ರೂ.ಗೂ ಹೆಚ್ಚು ವೆಚ್ಚದ ಕಾಮಗಾರಿಗಳನ್ನು ಪೂರ್ಣ ಪರಿಶೀಲನೆ ನಡೆಸಿದ ನಂತರವೇ ಟೆಂಡರ್‌ ಕರೆಯಬೇಕಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುವಲ್ಲಿ ವಿಳಂಬವಾಗಿದ್ದರಿಂದ ಕೆಲ ಕಾಮಗಾರಿಗಳ ಆರಂಭದಲ್ಲಿ ವಿಳಂಬವಾಗಿದೆ ಎಂದರು.

ಹಿಂದಿನ ಪಾಲಿಕೆ ಆಯುಕ್ತರಾದ ರವಿ ಹಾಗೂ ಮುಲೈ ಮುಹಿಲನ್‌ ಅವರು ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಗೆ ಭದ್ರ ಬುನಾದಿ ಹಾಕಿದ್ದಾರೆ. ಒಟ್ಟು 965 ಕೋಟಿ ರೂ. ಯೋಜನೆಗಳಲ್ಲಿ 850 ಕೋಟಿ ರೂ.ಗಳ ಯೋಜನೆಗಳಿಗೆ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದೆ. ಕೆಲ ಯೋಜನೆಗಳಿಗೆ ಟೆಂಡರ್‌ದಾರರು ಮುಂದೆ ಬರುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಟೆಂಡರ್‌ದಾರರ ಸಭೆ ನಡೆಸಲಾಗಿದೆ ಎಂದರು.

220 ಕೋಟಿ ರೂ.ಗಳ ಬಜೆಟ್‌ನಲ್ಲಿ ವರ್ತುಲ ರಸ್ತೆ ನಿರ್ಮಾಣ ಹಾಗೂ ತುಂಗಾನದಿ ಕಾಮಗಾರಿಗಳನ್ನು ಸ್ಮಾರ್ಟ್‌ಸಿಟಿಯಡಿ ಕೈಗೊಳ್ಳಲಾಗಿದೆ. ಪ್ಯಾನ್‌ಸಿಟಿ ಯೋಜನೆಯಲ್ಲಿ ಎಲ್ಲ ಕಂಬಗಳಿಗೆ ಎಲ್‌ಇಡಿ ಲೈಟ್‌ ಅವಳವಡಿಕೆ ಮಾಡಲಾಗುವುದು. ಎಬಿಡಿ ವ್ಯಾಪ್ತಿಯಡಿ ಬರುವ ವಾರ್ಡ್‌ಗಳಲ್ಲಿ ರಸ್ತೆ ಕನ್ಸÜರ್‌ವæನ್ಸಿ ಪಾರ್ಕ್‌ ಅಭಿವೃದ್ಧಿ ಮಾಡಲಾಗುವುದು. ಸ್ಮಾರ್ಟ್‌ಸಿಟಿಯಲ್ಲಿ ಗಾಂಧಿ ಪಾರ್ಕ್‌ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುವುದು ಎಂದರು.

ಅಧಿಕಾರಿಗಳಲ್ಲಿ ಸಮನ್ವಯ ಕೊರತೆ:
ವಿವಿಧ ಇಲಾಖಾ ಅಧಿಕಾರಿಗಳ ನಡುವೆ ಸಮನ್ವಯ ಕೊರತೆಯಿಂದಾಗಿ ಸಾಕಷ್ಟು ಕಾಮಗಾರಿಗಳಿಂದ ಜನರು ಕಿರಿಕಿರಿ ಅನುಭವಿಸುವಂತಾಗಿದೆ. ಒಂದು ರಸ್ತೆ ನಿರ್ಮಾಣವಾಗಬೇಕಾದರೆ ಪೂರ್ವ ಯೋಜನೆಗಳೂ ಕೈಗೊಂಡು ರಸ್ತೆ ಮಾಡಬೇಕಾಗುತ್ತದೆ. ಆದರೆ, ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ರಸ್ತೆ ನಿರ್ಮಾಣ ಆದ ನಂತರ ಪದೇ ಪದೇ ಅಗೆಯುವಂತ ಕೆಲಸವಾಗುತ್ತಿದೆ. ಇದರಿಂದ ಜನರು ಕಿರಿಕಿರಿ ಅನುಭವಿಸುವಂತಾಗಿದೆ ಎಂದು ದೂರಿದರು.

ಕಳಪೆ ಕಾಮಗಾರಿಗಳು:
ಸ್ಮಾರ್ಟ್‌ಸಿಟಿ ಯೋಜನೆಯಡಿ ಬಹುತೇಕ ಕಾಮಗಾರಿಗಳು ಕಳಪೆಯಾಗಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಇದರ ಬಗ್ಗೆ ಗಮನಹರಿಸಿ ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ನಗರಕ್ಕೆ ನೀರು ಕೊಡಿ:
ನಗರದ ಮಧ್ಯೆಯೇ ತುಂಗಾ ನದಿ ಹರಿದು ಹೋಗಿದ್ದರೂ ಬೇಸಿಗೆ ಕಾಲದಲ್ಲಿ ನಗರದ ಜನತೆ ನೀರಿಗಾಗಿ ಹಾಹಾಕಾರ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ತುಂಗಾನದಿ ಕಾಮಗಾರಿ ಕೈಗೆತ್ತಿಕೊಂಡು ಶುದ್ಧ ನೀರಿನ ಘಟಕ ಸ್ಥಾಪಿಸುವುದರಿಂದ ತುಂಗಾ ಕಾಲುವೆ ಕಾಮಗಾರಿ ಕೈಗೊಂಡು, ಕಾಲುವೆ ಸ್ವಚ್ಛಗೊಳಿಸಿ, ನಗರದ ಶುದ್ಧ ಘಟಕ ನಿರ್ಮಾಣ ಮಾಡುವುದರಿಂದ ಉಲ್ಭಣಿಸಿರುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

-----------
ಸ್ಮಾರ್ಟ್‌ ಸಿಟಿ ಯೋಜನೆಗಳೂ ಬಹುಪಾಲು ಅನುಷ್ಠಾನ ಹಂತದಲ್ಲಿದೆ. ಇದರಲ್ಲಿ ಕೆಲವು ಈಗಾಗಲೇ ಆರಂಭವಾಗಿದ್ದು, ಇನ್ನೂ ಕೆಲವು ಆರಂಭವಾಗಬೇಕಿದೆ. ಗುಣಾತ್ಮಕವಾಗಿ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನಕ್ಕಾಗಿ ಇತರೆ ರಾಜ್ಯಗಳಿಗೆ ಪ್ರವಾಸ ಕೈಗೊಂಡು ಅಲ್ಲಿನ ಯೋಜನೆಗಳನ್ನು ಪರಿಶೀಲಿಸಲಾಗಿದೆ. ಅವೆಲ್ಲವುಗಳನ್ನು ಯೋಚಿಸಿ, ಸ್ಥಳೀಯವಾಗಿ ಯಾವ ರೀತಿ ಅದನ್ನು ಅನುಷ್ಠಾನಗೊಳಿಸಬಹುದು ಎಂಬುದನ್ನು ಚಿಂತನೆ ನಡೆಸಿ, ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

---
ಕಾಮಗಾರಿ ಕಳಪೆ ಬಗ್ಗೆ ಹಲವು ದೂರುಗಳು ಬಂದಿವೆ. ಕಾಮಗಾರಿ ಗುಣಮಟ್ಟ ಕುರಿತು ಈಗಾಗಲೇ ಪರಿಶೀಲನೆ ನಡೆಸುತ್ತಿದ್ದೇವೆ. ಕಳಪೆ ಎಂದು ಕಂಡುಬಂದರೆ ಕ್ರಮವನ್ನು ಜರುಗಿಸುತ್ತಿದ್ದೇವೆ. ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
-ಚಾರುಲತಾ ಸೋಮಲ್‌, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕರು.

-------
ಸಾರ್ವಜನಿಕರ ವಿಶ್ವಾಸ ಪಡೆಯಿರಿ
ಶಿವಮೊಗ್ಗವನ್ನು ಸ್ಮಾರ್ಟ್‌ಸಿಟಿ ನಗರವಾಗಿಸಬೇಕಾದರೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಸಾರ್ವಜನಿಕರಿಂದ ಅಭಿಪ್ರಾಯ ವ್ಯಕ್ತವಾಯಿತು.

ನಗರದಲ್ಲಿ ಯಾವುದೇ ಕಾಮಗಾರಿ ಆಗಬೇಕಾದರೆ ಅಲ್ಲಿಯ ಸ್ಥಳೀಯರನ್ನು ವಿಸ್ವಾಸಕ್ಕೆ ತೆಗೆದುಕೊಳ್ಳಬೇಕು. ನಗರದಲ್ಲಿ ನಡೆಯುತ್ತಿರುವ ಕಳಪೆ ಯುಜಿಡಿ ಕಾಮಗಾರಿಯಿಂದಾಗಿ ಜನರಿಗೆ ಸಮಸ್ಯೆಯಾಗಿದೆ. ಪಾಲಿಕೆ ಸದಸ್ಯರನ್ನು ಕೇಳಿದರೆ ಇದರ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಹಾಗಾದರೆ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಬೇಕು ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ