ಆ್ಯಪ್ನಗರ

ಶಿವಾಜಿಯ ಶೌರ‍್ಯ, ಸಾಧನೆ ಚೈತನ್ಯದಾಯಕ

ಶಿವಾಜಿ ಮಹಾರಾಜರ ಶೌರ‍್ಯ, ಸಾಧನೆ ಚೈತನ್ಯದಾಯಕ ಎಂದು ವಾಗ್ಮಿ ಅಜಿತ್‌ ನಾಡಿಗ್‌ ತಿಳಿಸಿದರು.

Vijaya Karnataka 21 Feb 2019, 5:00 am
ಹೊಸನಗರ: ಶಿವಾಜಿ ಮಹಾರಾಜರ ಶೌರ‍್ಯ, ಸಾಧನೆ ಚೈತನ್ಯದಾಯಕ ಎಂದು ವಾಗ್ಮಿ ಅಜಿತ್‌ ನಾಡಿಗ್‌ ತಿಳಿಸಿದರು.
Vijaya Karnataka Web SMR-20HOSP1


ಹಿಂದೂ ಜಾಗರಣಾ ವೇದಿಕೆ ಮತ್ತು ವಿಶ್ವ ಹಿಂದೂ ಪರಿಷತ್‌ ಸಂಯುಕ್ತವಾಗಿ ಇಲ್ಲಿನ ನೆಹರೂ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿವಾಜಿ ಜಯಂತಿ ಕಾರ‍್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ದೇಶ ಕಾಯುವ ಯೋಧರನ್ನು ಕಳೆದುಕೊಂಡಿರುವ ದೇಶದಲ್ಲಿ ಪ್ರಸ್ತುತ ಸೂತಕದ ಛಾಯೆ ಆವರಿಸಿದೆ. ಈ ಪರಿಸ್ಥಿತಿಯ ನಡುವೆಯೂ ಅಪ್ರತಿಮ ವೀರ ಶಿವಾಜಿ ಜಯಂತಿ ಆಚರಣೆ ಮಾಡಬೇಕಾಗಿರುವ ಅನಿವಾರ‍್ಯತೆ ಇದೆ. ಶಿವಾಜಿಯ ಜೀವನ, ಸಾಧನೆಗಳ ಕುರಿತು ತಿಳಿಸಲು ಜಯಂತಿ ಆಚರಿಸುತ್ತಿಲ್ಲ. ಬದಲಾಗಿ ವರ್ಷಕ್ಕೊಮ್ಮೆ ಶಿವಾಜಿಯ ಜಯಂತಿ ಆಚರಣೆ ಮೂಲಕ ಪ್ರತಿಯೊಬ್ಬರಲ್ಲಿಯೂ ನವ ಉತ್ಸಾಹ ಮೂಡಬೇಕು ಹಾಗೂ ಸಂಘಟನೆಗೆ ಒತ್ತು ನೀಡುವ ಉದ್ದೇಶ ಆಚರಣೆಯ ಹಿಂದಿದೆ ಎಂದರು.

ಹಿಂದೂ ಧರ್ಮ ಯಾವಾಗ ಆರಂಭವಾಯಿತು ಎಂದು ನಮಗೆ ತಿಳಿದಿಲ್ಲ, ಆದರೆ ಇಂದಿಗೂ ಅದು ಜೀವಂತಿಕೆ ಹೊಂದಿರುವುದು ಹೆಮ್ಮೆಯ ವಿಷಯ. ಆದರ್ಶನೀಯ ಶಿವಾಜಿಯ ಧೈರ್ಯೋತ್ಸಾಹಗಳನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದರು.

ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಸತೀಶ ಪೂಜಾರಿ, ಆರ್‌ಎಸ್‌ಎಸ್‌ ಮುಖಂಡ ರಮೇಶ ಹಲಸಿನಕಟ್ಟೆ, ವಿಹಿಂಪ ತಾಲೂಕು ಘಟಕದ ಸುಧೀಂದ್ರ ಪಂಡಿತ್‌ ಮತ್ತಿತರರು ಇದ್ದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಶಿವಾಜಿಯ ಭಾವಚಿತ್ರದ ಮೆರವಣಿಗೆ ನಡೆಸಿ, ಶಿವಾಜಿ ಪರ ಘೋಷಣೆಗಳನ್ನು ಕೂಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ