ಆ್ಯಪ್ನಗರ

ಪಿಯು ಫಲಿತಾಂಶದಲ್ಲಿ ಶಿವಮೊಗ್ಗಕ್ಕೆ ನಿರಾಸೆ

ಪಿಯುಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯು ಶೇ.73.54 ಫಲಿತಾಂಶದೊಂದಿಗೆ ರಾಜ್ಯದಲ್ಲಿ 9ನೇ ಸ್ಥಾನಕ್ಕೆ ಕುಸಿದಿದ್ದು ತೀವ್ರ ನಿರಾಸೆ ಮೂಡಿಸಿದೆ.

Vijaya Karnataka 16 Apr 2019, 5:00 am
ಶಿವಮೊಗ್ಗ: ಪಿಯುಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯು ಶೇ.73.54 ಫಲಿತಾಂಶದೊಂದಿಗೆ ರಾಜ್ಯದಲ್ಲಿ 9ನೇ ಸ್ಥಾನಕ್ಕೆ ಕುಸಿದಿದ್ದು ತೀವ್ರ ನಿರಾಸೆ ಮೂಡಿಸಿದೆ.
Vijaya Karnataka Web shivamgga dissatisfaction at pu result
ಪಿಯು ಫಲಿತಾಂಶದಲ್ಲಿ ಶಿವಮೊಗ್ಗಕ್ಕೆ ನಿರಾಸೆ


ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಶೇಕಡವಾರು ಫಲಿತಾಂಶದಲ್ಲಿ ಅಲ್ಲದೇ ಸ್ಥಾನಗಳ ಲೆಕ್ಕದಲ್ಲೂ ಕುಸಿತ ಕಂಡಿದೆ. ಕಳೆದ ವರ್ಷ ಶೇ.75.77 ಫಲಿತಾಂಶದೊಂದಿಗೆ 5ನೇ ಸ್ಥಾನದಲ್ಲಿತ್ತು. ಈ ಬಾರಿ ಶೇ.2.23 ಫಲಿತಾಂಶ ಕಡಿಮೆಯಾಗಿರುವುದಲ್ಲದೆ 4ಸ್ಥಾನ ಕುಸಿತ ಕಂಡಿದೆ.

ಒಟ್ಟಾರೆ ಫಲಿತಾಂಶದಲ್ಲಿ ಅಲ್ಲದೆ ಕಲಾ, ವಾಣಿಜ್ಯ ಮತ್ತು ವಿಜ್ಞಾನಗಳ ವಿಭಾಗದಲ್ಲಿ ಶಿವಮೊಗ್ಗ ಜಲ್ಲೆಯ ವಿದ್ಯಾರ್ಥಿಗಳು 10 ಟೆನ್‌ ಪಟ್ಟಿಯಲ್ಲಿ ಇಲ್ಲ. ಪದವಿಪೂರ್ವ ಶಿಕ್ಷಣ ಇಲಾಖೆಯು ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸಿದ್ದು ಮಂಗಳವಾರ ಬೆಳಗ್ಗೆ ಆಯಾ ಕಾಲೇಜುಗಳಲ್ಲಿ ನೋಟಿಸ್‌ ಬೋರ್ಡ್‌ನಲ್ಲಿ ಸಂಪೂರ್ಣ ಫಲಿತಾಂಶ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ 18,582 ವಿದ್ಯಾರ್ಥಿಗಳಲ್ಲಿ 12,561 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. 8,204 ಬಾಲಕರಲ್ಲಿ 4,858, 10,978 ಬಾಲಕಿಯರಲ್ಲಿ 10,478 ಬಾಲಕಿಯರು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ ಶೇ.60.28, ವಾಣಿಜ್ಯ ವಿಭಾಗದಲ್ಲಿ ಶೇ.71.24 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ.69.58 ಫಲಿತಾಂಶ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ