ಆ್ಯಪ್ನಗರ

ಶಿವು ಉಪ್ಪಾರ್‌ ಹತ್ಯೆ ಪ್ರಕರಣ ಸಿಬಿಐಗೆ ವಹಿಸಿ

ಬೆಳಗಾವಿಯ ಗೋರಕ್ಷ ಕ ಶಿವು ಉಪ್ಪಾರ್‌ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಇಲ್ಲಿನ ಹಿಂದೂಪರ ಸಂಘಟನೆಗಳ ಕಾರ‍್ಯಕರ್ತರು ಸೋಮವಾರ ತಹಸೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

Vijaya Karnataka 11 Jun 2019, 5:00 am
ಹೊಸನಗರ: ಬೆಳಗಾವಿಯ ಗೋರಕ್ಷ ಕ ಶಿವು ಉಪ್ಪಾರ್‌ ಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಇಲ್ಲಿನ ಹಿಂದೂಪರ ಸಂಘಟನೆಗಳ ಕಾರ‍್ಯಕರ್ತರು ಸೋಮವಾರ ತಹಸೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
Vijaya Karnataka Web SMR-10HOSP3


ಬಜರಂಗ ದಳ ತಾಲೂಕು ಘಟಕದ ಅಧ್ಯಕ್ಷ ಸುಧೀಂದ್ರ ಪಂಡಿತ್‌ ಮಾತನಾಡಿ, ಶಿವು ಉಪ್ಪಾರ್‌ ಅವರನ್ನು ಕಿಡಿಗೇಡಿಗಳು ಹತ್ಯೆ ಮಾಡಿದ್ದಾರೆ. ಇದು ಆಕಸ್ಮಿಕವಲ್ಲ, ಇದೊಂದು ವ್ಯವಸ್ಥಿತ ಹತ್ಯೆ. ಗೋಪ್ರೇಮಿಗಳನ್ನು ಹತ್ತಿಕ್ಕುವ ಕಾರ‍್ಯ ಸರಕಾರದಿಂದ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋರಕ್ಷ ರನ್ನು ಗುರಿಯಾಗಿಸಿಕೊಂಡು ಇಂತಹ ಹಲವು ಪ್ರಕರಣಗಳು ಈ ಹಿಂದೆ ನಡೆದಿವೆ. ಸರಕಾರ ನಿಷ್ಪಕ್ಷ ಪಾತ ತನಿಖೆಗೆ ಮುಂದಾಗುತ್ತಿಲ್ಲ. ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ಒಳಪಡಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿ.ಪಂ. ಸದಸ್ಯೆ ಎಸ್‌.ಸುರೇಶ ಮಾತನಾಡಿ, ತಾಲೂಕಿನಲ್ಲಿಯೂ ಗೋಹತ್ಯೆ ಹಾಗೂ ಅಪಹರಣ ಪ್ರಕರಣಗಳು ಆಗಾಗ್ಗೆ ನಡೆಯುತ್ತಿವೆ. ಪೊಲೀಸ್‌ ಇಲಾಖೆ ನಿರ್ಲಕ್ಷ ತೆ ತೋರುತ್ತಿದೆ ಎಂದು ಆಪಾದಿಸಿದರು. ಗೋ ಅಕ್ರಮ ಸಾಗಣೆ ಹಾಗೂ ಹತ್ಯೆ ಕುರಿತು ತಾಲೂಕು ಆಡಳಿತ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಸಂಘಟನೆ ಕಾರ‍್ಯಕರ್ತರಾದ ನಗರ ನಿತಿನ್‌, ದರ್ಶನ್‌, ನವೀನ್‌ ರಾಯ್ಕರ್‌, ರಮಿತ್‌ ಪೂಜಾರಿ, ವಿನಯ್‌ ಭಂಡಾರಿ, ಸತೀಶ, ಗಣೇಶ, ಸ್ವಯಂಪ್ರಕಾಶಾನಂದ ಸ್ವಾಮೀಜಿ, ಗುರುರಾಜ್‌, ಮೋಹನ ಮಂಡಾನಿ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ