ಆ್ಯಪ್ನಗರ

ಭರ್ಜರಿ ಮಳೆಯಿಂದ ಕೊಳೆರೋಗ

ತಾಲೂಕಿನ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಿಂದಾಗಿ ಅಡಕೆ ಬೆಳೆಗೆ ವ್ಯಾಪಕ ಕೊಳೆರೋಗ ತಗುಲಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ತೋಟಗಾರಿಕೆ ನಿರ್ದೇಶಕ ಜೆ.ಎಲ್‌. ರಮೇಶ್‌ ತಿಳಿಸಿದರು.

Vijaya Karnataka 15 Aug 2019, 5:00 am
ಸಾಗರ : ತಾಲೂಕಿನ ಕೆಲವು ಭಾಗಗಳಲ್ಲಿ ವಿಪರೀತ ಮಳೆಯಿಂದಾಗಿ ಅಡಕೆ ಬೆಳೆಗೆ ವ್ಯಾಪಕ ಕೊಳೆರೋಗ ತಗುಲಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ತೋಟಗಾರಿಕೆ ನಿರ್ದೇಶಕ ಜೆ.ಎಲ್‌. ರಮೇಶ್‌ ತಿಳಿಸಿದರು.
Vijaya Karnataka Web SMR-14SGR10


ತಾಲೂಕಿನ ಭೀಮನಕೋಣೆ ಗ್ರಾಪಂ ವ್ಯಾಪ್ತಿಯ ಶೆಡ್ತಿಕೆರೆ, ವರದಾಮೂಲ ಅಡಕೆ ತೋಟಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ತಾಲೂಕಿನ ಕೆಲವು ಭಾಗಗಳ ಅಡಕೆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಕೊಳೆರೋಗದಿಂದ ದೊಡ್ಡ ಪ್ರಮಾಣದಲ್ಲಿ ಬೆಳೆನಾಶವಾಗುವ ಲಕ್ಷ ಣ ಗೋಚರವಾಗಿದೆ.

ಬೆಳೆಗಾರರು ಹಲವು ಬಾರಿ ಔಷಧ ಸಿಂಪಡಿಸಿದರೂ ಕೊಳೆ ನಿಯಂತ್ರಣಕ್ಕೆ ಬಂದಿಲ್ಲ. ತಾಲೂಕಿನ ಕಲ್ಮನೆ, ಹೆಗ್ಗೋಡು, ಹಂಸಗಾರು, ಹೊಸಳ್ಳಿ, ಕೈತೋಟ, ಸಾಲೆಕೊಪ್ಪ ಭಾಗದಲ್ಲಿ ಸಂಚರಿಸಿ, ಅಡಕೆ ತೋಟಕ್ಕೆ ಭೇಟಿ ನೀಡಿದ್ದು ಕೊಳೆರೋಗದಿಂದ ಬೆಳೆಗಾರರು ಫಸಲು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಕೊಳೆ ರೋಗ ತಗುಲಿ ಉದುರಿದ ಅಡಕೆ ಹೆಕ್ಕಿ ತೆಗೆದು ತೋಟದಿಂದ ಹೊರಕ್ಕೆ ಹಾಕಬೇಕು. ಅಡಕೆ ಬೆಳೆಗಾರರಿಗೆ ಶೇ. 50ರಿಯಾಯಿತಿ ದರದಲ್ಲಿ ಮೈಲುತುತ್ತಾ ಮತ್ತು ಸುಣ್ಣ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಮಾಜಿ ಕಾರ‍್ಯದರ್ಶಿ ವ.ಶಂ.ರಾಮಚಂದ್ರಭಟ್‌ ಮಾತನಾಡಿ, ಈ ವರ್ಷ ವಿಪರೀತ ಮಳೆಯಿಂದಾಗಿ ಕೊಳೆರೋಗದ ಜತೆಗೆ ಅನೇಕ ತೋಟಗಳಲ್ಲಿ ಅಡಕೆ ಮರಗಳು ಮುರಿದು ಬಿದ್ದಿವೆ. ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ರಾಜ್ಯ ಸರಕಾರ ಗಮನ ಹರಿಸಬೇಕೆಂದರು. ಪಿಎಲ್‌ಡಿ ಬ್ಯಾಂಕ್‌ ಮಾಜಿ ನಿರ್ದೇಶಕ ಪಿ.ಮಂಜುನಾಥ್‌ , ಟಿ.ಆರ್‌.ಗಣಪತಿ, ಲಕ್ಷ್ಮೀನಾರಾಯಣ, ರಾಮಚಂದ್ರ, ಸಂತೋಷ್‌, ರಾಜು ಶೆಟ್ಟಿ , ತೋಟಗಾರಿಕೆ ಇಲಾಖೆಯ ರುದ್ರೇಶ್‌, ನಮಿತಾ, ಗ್ರಾಮ ಲೆಕ್ಕಿಗ ಭೀಮಣ್ಣ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ