ಆ್ಯಪ್ನಗರ

ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರ

12ನೇ ಶತಮಾನದಲ್ಲಿ ಕಾಯಕ ಮತ್ತು ವಚನ ಸಾಹಿತ್ಯದ ಮೂಲಕ ಹೊಸಹಾದಿ ಸೃಷ್ಟಿಸಿದ ಬಸವಣ್ಣ ನಿಜವಾದ ಸಾಮಾಜಿಕ ಕ್ರಾಂತಿಯ ಹರಿಕಾರರು ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್‌ಶಂಕರ್‌ ಅಭಿಪ್ರಾಯಪಟ್ಟರು.

Vijaya Karnataka 10 May 2019, 5:00 am
ಶಿವಮೊಗ್ಗ: 12ನೇ ಶತಮಾನದಲ್ಲಿ ಕಾಯಕ ಮತ್ತು ವಚನ ಸಾಹಿತ್ಯದ ಮೂಲಕ ಹೊಸಹಾದಿ ಸೃಷ್ಟಿಸಿದ ಬಸವಣ್ಣ ನಿಜವಾದ ಸಾಮಾಜಿಕ ಕ್ರಾಂತಿಯ ಹರಿಕಾರರು ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್‌ಶಂಕರ್‌ ಅಭಿಪ್ರಾಯಪಟ್ಟರು.
Vijaya Karnataka Web social reformer basavanna
ಬಸವಣ್ಣ ಸಾಮಾಜಿಕ ಕ್ರಾಂತಿಯ ಹರಿಕಾರ


ವಿವಿ ಬಸವ ಅಧ್ಯಯನ ಪೀಠದಿಂದ ಆಡಳಿತ ಭವನದಲ್ಲಿ ಗುರುವಾರ ಆಯೋಜಿಸಿದ್ದ ಬಸವ ಜಯಂತಿ ಉದ್ಘಾಟಿಸಿ ಅವರು ಮಾತನಾಡಿ, ಬಸವಣ್ಣ ಮಹಿಳೆಯರನ್ನು ಒಳಗೊಂಡಂತೆ ಸಮಾಜದ ಎಲ್ಲ ವರ್ಗಗಳನ್ನು ಒಟ್ಟುಗೂಡಿಸಿ ಅನುಭವ ಮಂಟಪ ನಿರ್ಮಿಸಿ ನೈಜ ಸಮಾನತೆಯ ಪರಿಕಲ್ಪನೆ ಜಾರಿಗೊಳಿಸಿದರು. ಅನುಭವ ಮಂಟಪದ ಮೂಲಕ ಸಾಹಿತ್ಯ, ರಾಜಕೀಯ, ಅಧ್ಯಾತ್ಮಿಕ, ಸಾಮಾಜಿಕ ಸುಧಾರಣೆಗಳನ್ನು ಒಟ್ಟೊಟ್ಟಿಗೆ ಕಾರ್ಯರೂಪಕ್ಕೆ ತಂದ ಕ್ರಾಂತಿಕಾರಿ ಬಸವಣ್ಣ ಎಂದು ಬಣ್ಣಿಸಿದರು.

ಬಸವಣ್ಣರಿಂದ ಸ್ಫೂರ್ತಿ ಪಡೆದ ಅನೇಕರು ಕಾಯಕದ ಜತೆಗೆ ವಚನ ಸಾಹಿತ್ಯದಲ್ಲಿ ತೊಡಗಿಕೊಂಡರು. ಹೆಸರು ಗುರುತಿಸದ ಅನೇಕ ವಚನಕಾರರು ವಚನಗಳನ್ನು ರಚಿಸಿದ್ದು, ಅವರ ಕುರಿತು ಸಂಶೋಧನೆ ಕೈಗೊಳ್ಳಬೇಕಿದೆ. ಶರಣರೆಂದರೆ ಎಲ್ಲರನ್ನೂ ಒಳಗೊಳ್ಳುವವರಾಗಿದ್ದು, ಬಸವಣ್ಣರಂತೆಯೇ ಸಮಾಜವನ್ನು ಪ್ರೇರೇಪಿಸಿದ ಬುದ್ಧ, ಅಂಬೇಡ್ಕರ್‌ರನ್ನು ಅವರೊಟ್ಟಿಗೆ ನೆನೆಯುವುದು ಪ್ರಸ್ತುತ ಎಂದರು.

ಕುಲಸಚಿವ ಪ್ರೊ.ಭೋಜ್ಯಾನಾಯ್ಕ್‌ ಮಾತನಾಡಿ, ಬಸವ, ಅಂಬೇಡ್ಕರ್‌ ಚಿಂತನೆ, ಕಾರ‍್ಯಗಳು ಒಂದೇ ಉದ್ದೇಶವನ್ನು ಒಳಗೊಂಡಿವೆ. 12ನೇ ಶತಮಾನದಲ್ಲಿ ಎಲ್ಲರನ್ನು ಒಳಗೊಂಡ ಸಾಮಾಜಿಕ ಸಮಾನತೆಯ ಅನುಭವ ಮಂಟಪ ರೂಪಿಸಿದವರು ಬಸವಣ್ಣ. 20ನೇ ಶತಮಾನದ ಆಧುನಿಕ ಕಾಲಘಟ್ಟದಲ್ಲಿ ಉತ್ಕೃಷ್ಟ ಸಂವಿಧಾನ ರಚಿಸುವ ಮೂಲಕ ಸಮಾನತೆ, ಸ್ವಾತಂತ್ರ್ಯ ಎತ್ತಿಹಿಡಿದವರು ಅಂಬೇಡ್ಕರ್‌ ಎಂದರು. ಈ ಸಂದರ್ಭ ಪರೀಕ್ಷಾಂಗ ಕುಲಸಚಿವ ಪ್ರೊ.ರಾಜಾನಾಯಕ, ಡಾ. ಚಂದ್ರಶೇಖರ್‌, ಡಾ.ಅಂಜನಪ್ಪ, ಡಾ.ಕುಮಾರಸ್ವಾಮಿ, ಡಾ.ವಿಜಯ್‌ಕುಮಾರ್‌, ಡಾ.ಸತ್ಯಪ್ರಕಾಶ್‌ ಸೇರಿದಂತೆ ವಿವಿಯ ಸಂಶೋಧನಾರ್ಥಿಗಳು, ಸಿಬ್ಬಂದಿ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ