ಆ್ಯಪ್ನಗರ

ವಿಶೇಷ ಚೇತನರಿಗೆ ಸಾಂತ್ವನ ಬೇಡ, ಪ್ರೋತ್ಸಾಹ ನೀಡಿ

ಮಾನವ ಹಕ್ಕುಗಳ ಬಗ್ಗೆ ಸೂಕ್ತ ಮಾಹಿತಿ ಇದ್ದರೆ ಶೋಷಣೆಯ ಸಂದರ್ಭ ಕಾನೂನು ನೆರವು ಪಡೆದುಕೊಳ್ಳಲು ಸಾಧ್ಯ ಎಂದು ಹಿರಿಯ ಹೆಚ್ಚುವರಿ ನ್ಯಾಯಾಧೀಶೆ ಭಾಮಿನಿ ಹೇಳಿದರು.

Vijaya Karnataka 12 Dec 2018, 5:00 am
ಸಾಗರ: ಮಾನವ ಹಕ್ಕುಗಳ ಬಗ್ಗೆ ಸೂಕ್ತ ಮಾಹಿತಿ ಇದ್ದರೆ ಶೋಷಣೆಯ ಸಂದರ್ಭ ಕಾನೂನು ನೆರವು ಪಡೆದುಕೊಳ್ಳಲು ಸಾಧ್ಯ ಎಂದು ಹಿರಿಯ ಹೆಚ್ಚುವರಿ ನ್ಯಾಯಾಧೀಶೆ ಭಾಮಿನಿ ಹೇಳಿದರು.
Vijaya Karnataka Web SMR-11SGR1


ಇಲ್ಲಿನ ಎಂಡಿಎಫ್‌ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷಚೇತನರ ಮತ್ತು ಮಾನವ ಹಕ್ಕುಗಳ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಶೇಷಚೇತನರನ್ನು ಸಮಾಜ ನೋಡುವ ಮನೋಭಾವ ಬದಲಾಗಬೇಕು. ವಿಶೇಷಚೇತನರಿಗೆ ಸಾಂತ್ವನದ ಮಾತುಗಳಿಗಿಂತಲೂ, ಪ್ರೋತ್ಸಾಹದ ಕೆಲಸವನ್ನು ಮಾಡುವ ಮನೋಭಾವ ಹೆಚ್ಚಾಗಬೇಕು. ವಿದ್ಯಾರ್ಥಿಗಳು ತಮ್ಮ ನಡುವಿನ ವಿಶೇಷಚೇತರನ್ನು ಪ್ರತ್ಯೇಕವಾಗಿ ನೋಡುವ ಬದಲು, ತಮ್ಮೊಳಗಿನ ವ್ಯಕ್ತಿಯನ್ನಾಗಿ ಪರಿಗಣಿಸಬೇಕೆಂದರು.

ವಕೀಲೆ ಮಂಗಳಗೌರಿ ಮಾತನಾಡಿ, ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಒಳ್ಗೊಳ್ಳುವ ನಿಟ್ಟಿನಲ್ಲಿ ಸುಶಿಕ್ಷಿತ ಸಮಾಜ ಕೆಲಸ ಮಾಡಬೇಕು. ಸಾರ್ವಜನಿಕ ಕಟ್ಟಡಗಳಲ್ಲಿ ಸಹ ವಿಶೇಷಚೇತನರಿಗೆ ಅನುಕೂಲಕ ಸೌಲಭ್ಯ ಒದಗಿಸಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ರವೀಶ್‌ಕುಮಾರ್‌ ಮಾತನಾಡಿದರು. ಕಾಲೇಜಿನ ಪ್ರಾಚಾರ‍್ಯ ಜಿ.ಪಿ.ಶ್ರೀಪಾದ ಅಧ್ಯಕ್ಷ ತೆ ವಹಿಸಿದ್ದರು. ಆಕಾಶ್‌ ಸ್ವಾಗತಿಸಿ, ಬಿ.ಜಿ.ಮಂಜಪ್ಪ ವಂದಿಸಿ, ಅನ್ವಿತಾ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ