ಆ್ಯಪ್ನಗರ

ವಿಜೃಂಭಣೆಯ ಶ್ರೀಹುಚ್ಚರಾಯ ಸ್ವಾಮಿ ರಥೋತ್ಸವ

ಪಟ್ಟಣದ ಕ್ಷೇತ್ರದೇವತೆ ಶ್ರೀಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Vijaya Karnataka 20 Apr 2019, 5:00 am
ಶಿಕಾರಿಪುರ: ಪಟ್ಟಣದ ಕ್ಷೇತ್ರದೇವತೆ ಶ್ರೀಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
Vijaya Karnataka Web SMG-1904-2-15-19SKP3


ಬೆಳಗ್ಗೆ 6ಗಂಟೆಯಿಂದಲೇ ಧಾರ್ಮಿಕ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. 7-30ಕ್ಕೆ ಶ್ರೀಸ್ವಾಮಿಯ ರಥಾರೋಹಣ ನಂತರ ನೆರೆದಿದ್ದ ಭಕ್ತರು, ಗಣ್ಯರ ಜಯಘೋಷ, ವೇದಘೋಷ, ಸಕಲ ವಾದ್ಯಘೋಷಗಳೊಂದಿಗೆ ರಥ ಎಳೆದು ತೇರುಬೀದಿಯ ಮಾರಿಗುಡಿ ಬಳಿ ನಿಲ್ಲಿಸಲಾಯಿತು. ಈ ಬಾರಿ ರಥಾರೋಹಣ ಮುಹೂರ್ತದ ವೇಳೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ರಥೋತ್ಸವ ಅಂಗವಾಗಿ ರಾಜ್ಯದ ಹಲವೆಡೆಗಳಿಂದ ಆಗಮಿಸಿದ್ದ ಭಕ್ತರು ಸರತಿಯಲ್ಲಿ ನಿಂತು ಹಣ್ಣು-ಕಾಯಿ ಒಡೆಸಿ, ಹರಕೆ ಸಲ್ಲಿಸಿ, ಶ್ರೀಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಭಕ್ತಾದಿಗಳ ಸೇವೆ:
ಋುಗ್ವೇದ ಸಂಸ್ಥೆ ವತಿಯಿಂದ ಪಾನಕ ವಿತರಣೆ ಜತೆಗೆ ಸೇವಾ ಕಾರ‍್ಯದಲ್ಲಿ ನೂರಾರು ಯುವಕರು ಪಾಲ್ಗೊಂಡಿದ್ದರು. ಜಯಕರ್ನಾಟಕ ವೇದಿಕೆ, ಚಂದನ ನವಚೇತನ ಕಲಾಸಂಘ, ಭ್ರಾಂತೇಶ ವಾಯುವಿಹಾರ ವೇದಿಕೆ, ಸರಳ ಯೋಗ ವೇದಿಕೆಯಿಂದ ಭಕ್ತಾದಿಗಳಿಗೆ ಮಜ್ಜಿಗೆ ವಿತರಿಸಲಾಯಿತು.

ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಕ್ಷೇತ್ರದ ಶಾಸಕ ಬಿ.ಎಸ್‌.ಯಡಿಯೂರಪ್ಪ ರಥವೇರಿ ಪೂಜೆ ಸಲ್ಲಿಸದೆ ದೇವಸ್ಥಾನಕ್ಕೆ ಕುಟುಂಬ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸಿ, ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್‌ ಕವಿರಾಜ್‌, ವಿವಿಧ ಇಲಾಖೆ ಅಧಿಕಾರಿಗಳು, ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ