ಆ್ಯಪ್ನಗರ

ಅಂಗನವಾಡಿಯಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಿ

ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಿ, ವೇಳಾಪಟ್ಟಿಯಲ್ಲಿ3 ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜಯಲಕ್ಷ್ಮಿ ಒತ್ತಾಯಿಸಿದರು.

Vijaya Karnataka 30 Nov 2019, 5:00 am
ಶಿವಮೊಗ್ಗ: ಅಂಗನವಾಡಿಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಿ, ವೇಳಾಪಟ್ಟಿಯಲ್ಲಿ3 ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡುವಂತೆ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜಯಲಕ್ಷ್ಮಿ ಒತ್ತಾಯಿಸಿದರು.
Vijaya Karnataka Web start lkg ukg in anganawadi
ಅಂಗನವಾಡಿಯಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಿ


ಸಮಾಜ ಬದಲಾವಣೆ ಬಯಸುತ್ತಿವೆ. ಆದರೆ, ಅಂಗನವಾಡಿ ಕೇಂದ್ರಗಳು ಮಾತ್ರ ಹಳೆ ರೀತಿಯಲ್ಲೇ ಮುಂದುವರೆಯುತ್ತಿವೆ. 3ವರೆ ವರ್ಷ ಮೇಲ್ಪಟ್ಟ ಮಕ್ಳಳಿಗೆ ಸರಕಾರಿ ಶಾಲೆಗಳಲ್ಲಿಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲಾಗಿದೆ. ಇದರಿಂದ ಅಂಗನವಾಡಿ ಕೇಂದ್ರಗಳು ಮುಚ್ಚುವ ಅಪಾಯವಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿಅವರು ದೂರಿದರು.

ಡಿ.10 ರಿಂದ ಅನಿರ್ದಿಷ್ಟ ಮುಷ್ಕರ:


ಅಂಗನವಾಡಿ ಕೇಂದ್ರಗಳಲ್ಲಿಪೂರ್ವ ಪ್ರಾಥಮಿಕ ಶಿಕ್ಷಣ ಆರಂಭಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿಡಿ.10ರಿಂದ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಡಿ.2 ರಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಿಂದ ಜಾಥಾ ಏರ್ಪಡಿಸಲಾಗಿದೆ. ಈ ಜಾಥಾವು ಡಿ.3ರಂದು ಶಿವಮೊಗ್ಗಕ್ಕೆ ಪ್ರವೇಶಿಸಲಿದ್ದು, ಅಂದು ಇಲ್ಲಿನ ಸೈನ್ಸ್‌ ಮೈದಾನದಿಂದ ಡಿಸಿ ಕಚೇರಿವರೆಗೆ ಜಾಥಾ ನಡೆಯಲಿದೆ ಎಂದರು.

ಈ ಸಂದರ್ಭ ರಾಜ್ಯ ಸಿಐಟಿಯುನ ನಾಯಕರಾದ ಯಮುನಾ ಗಾಂವ್‌ಕರ್‌, ಸುಶೀಲನಾಡ ಪಾಲ್ಗೊಳ್ಳಲಿದ್ದಾರೆ. ಡಿ.10 ರಂದು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡು, ಫ್ರೀಡಂಪಾರ್ಕ್ನಲ್ಲಿಅನಿರ್ದಿಷ್ಟ ಕಾಲ ಮುಷ್ಕರ ನಡೆಸಲಾಗುವುದು. ರಾಜ್ಯದ ಎಲ್ಲಅಂಗನವಾಡಿ ಕಾರ್ಯಕರ್ತೆಯರು ಇದರಲ್ಲಿಪಾಲ್ಗೊಳ್ಳಲಿದ್ದಾರೆ ಎಂದರು.

ಸಿಐಟಿಯುನ ಜಿಲ್ಲಾಧ್ಯಕ್ಷ ಎಸ್‌.ಬಿ.ಶಿವಶಂಕರ್‌ ಮಾತನಾಡಿ, ಸರಕಾರಿ ಶಾಲೆಗಳಲ್ಲಿಈಗ ಆರಂಭವಾಗಿರುವ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಅಂಗನವಾಡಿಗೆ ವರ್ಗಾಯಿಸಬೇಕು, ಕನಿಷ್ಟ ವೇತನ ಜಾರಿ ಮಾಡಬೇಕು, ಖಾಲಿ ಇರುವ ಹುದ್ದೆ ತುಂಬಬೇಕು, ಸೇವಾ ನಿಯಮಾವಳಿ ರಚಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿಪ್ರಮುಖರಾದ ಮಂಜುಳಾ, ಶೈಲಾ, ಎಂ.ನಾರಾಯಣ್‌ ಮತ್ತಿತರರು ಇದ್ದರು.

==================
ಡಿ.10 ರಂದು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡು, ಫ್ರೀಡಂಪಾರ್ಕ್ನಲ್ಲಿಅನಿರ್ದಿಷ್ಟ ಕಾಲ ಮುಷ್ಕರ ನಡೆಸಲಾಗುವುದು. ರಾಜ್ಯದ ಎಲ್ಲಅಂಗನವಾಡಿ ಕಾರ್ಯಕರ್ತೆಯರು ಇದರಲ್ಲಿಪಾಲ್ಗೊಳ್ಳಲಿದ್ದಾರೆ.
-ಎಂ.ಜಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ, ಸಿಐಟಿಯು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ