ಆ್ಯಪ್ನಗರ

ರಾಷ್ಟ್ರೀಯ ಹೆದ್ದಾರಿಯಲ್ಲಿಮರಗಳ ಕಡಿತಲೆ ಆರಂಭ

ರಾಷ್ಟ್ರೀಯ ಹೆದ್ದಾರಿ 169 (ಎ) ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ತೀರ್ಥಹಳ್ಳಿ ಪಟ್ಟಣ- ಆಗುಂಬೆ ಸಂಪರ್ಕದ ರಸ್ತೆ ವಿಸ್ತರಣೆ ಕಾಮಗಾರಿ ಮಾರ್ಗದಲ್ಲಿಮರಗಳ ತೆರವಿಗೆ ಅರಣ್ಯ ಇಲಾಖೆ ಚಾಲನೆ ನೀಡಿದೆ.

Vijaya Karnataka 11 Oct 2019, 5:00 am
ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ 169 (ಎ) ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ತೀರ್ಥಹಳ್ಳಿ ಪಟ್ಟಣ- ಆಗುಂಬೆ ಸಂಪರ್ಕದ ರಸ್ತೆ ವಿಸ್ತರಣೆ ಕಾಮಗಾರಿ ಮಾರ್ಗದಲ್ಲಿಮರಗಳ ತೆರವಿಗೆ ಅರಣ್ಯ ಇಲಾಖೆ ಚಾಲನೆ ನೀಡಿದೆ.
Vijaya Karnataka Web 10TTH4_46


ಮೂರ್ನಾಲ್ಕು ದಿನಗಳಿಂದ ಮೇಗರವಳ್ಳಿ, ಅಣ್ಣುವಳ್ಳಿ, ಗೋವಿನಹಳ್ಳಿ, ಲಕ್ಕುಂದ, ಕಲ್ಮನೆ ಭಾಗದಲ್ಲಿ ರಸ್ತೆ ಇಕ್ಕೆಲಗಳಲ್ಲಿರುವ ಬೃಹತ್‌ ಮರಗಳನ್ನು ಧರೆಗೆ ಉರುಳಿಸುತ್ತಿದೆ. ಸುಮಾರು 97 ಮರಗಳ ಕಡಿತಲೆಗೆ ಅರಣ್ಯ ಇಲಾಖೆ ಗುರುತಿಸಿದ್ದು, ಕೆಲ ದಿನಗಳಲ್ಲೇ ನಾಮಾವಶೇಷವಾಗಲಿವೆ.

--------
ದೂಪ, ಹಲಸು, ರಂಜ, ಬೆಳಾಲೆ ಸೇರಿದಂತೆ ಅನೇಕ ಅಪರೂಪದ ಜಾತಿಯ ಮರಗಳು ಕಡಿತಲೆಗೊಳ್ಳಲಿವೆ. ತೀರ್ಥಹಳ್ಳಿ ಪಟ್ಟಣದ ಬಾಳೇಬೈಲಿನಿಂದ ಮೇಗರವಳ್ಳಿವರೆಗೆ ಮಾತ್ರ ಕಡಿತಲೆ ಮರಗಳನ್ನು ಗುರುತಿಸಲಾಗಿದೆ. ಕೆಲ ದಿನಗಳಲ್ಲಿಇನ್ನಷ್ಟು ಸಂಖ್ಯೆ ಮರಗಳ ಕಡಿತಲೆಗೊಳ್ಳುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ