ಆ್ಯಪ್ನಗರ

ಗೋ ಮಾತೆಯ ಸಂರಕ್ಷ ಣೆಗೆ ಹೆಜ್ಜೆ

ಪಟ್ಟಣದ ವಿನಾಯಕ ವೃತ್ತದಲ್ಲಿ ಸೋಮವಾರ ಸಂಜೆ ಶಿವಮೊಗ್ಗ ಜಿಲ್ಲಾ ರೈತ ಮೋರ್ಚಾವತಿಯಿಂದ ರಾಷ್ಟ್ರೀಯ ಕಾಮಧೇನು ಆಯೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಸಂಭ್ರಮದ ಗೋ ಪೂಜಾ ಕಾರ್ಯಕ್ರಮ ಜರುಗಿತು.

Vijaya Karnataka 21 Feb 2019, 5:00 am
ರಿಪ್ಪನ್‌ಪೇಟೆ: ಪಟ್ಟಣದ ವಿನಾಯಕ ವೃತ್ತದಲ್ಲಿ ಸೋಮವಾರ ಸಂಜೆ ಶಿವಮೊಗ್ಗ ಜಿಲ್ಲಾ ರೈತ ಮೋರ್ಚಾವತಿಯಿಂದ ರಾಷ್ಟ್ರೀಯ ಕಾಮಧೇನು ಆಯೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಸಂಭ್ರಮದ ಗೋ ಪೂಜಾ ಕಾರ್ಯಕ್ರಮ ಜರುಗಿತು.
Vijaya Karnataka Web SMR-18rpt3


ಈ ಸಂದರ್ಭ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ದತ್ತಾತ್ರಿ ಮಾತನಾಡಿ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ದೇಶಿಯ ಗೋ ತಳಿ ಸಂರಕ್ಷ ಣೆ ಹಾಗೂ ರೈತರಿಗೆ ಹೈನುಗಾರಿಕೆಗೆ ಉತ್ತೇಜನ ನೀಡುವ ಸಲುವಾಗಿ ಈ ಬಾರಿಯ ಬಜೆಟ್‌ನಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗ ರಚಿಸಿ 850 ಕೋಟಿ ರೂ. ಮೀಸಲಿಡುವ ಮೂಲಕ ಗೋ ಮಾತೆ ಸಂರಕ್ಷ ಣೆಗೆ ಮುಂದಾಗಿದ್ದಾರೆ ಎಂದರು. ಜಿಲ್ಲಾ ರೈತ ಮೋರ್ಚಾ ಸಂಚಾಲಕಿ ನಾಗರತ್ನ ದೇವರಾಜ್‌, ಮುಖಂಡರಾದ ಆರ್‌.ಟಿ.ಗೋಪಾಲ್‌, ಎಂ.ಬಿ.ಮಂಜುನಾಥ್‌, ಮುಡುಬ ಧರ್ಮಪ್ಪ, ಎಂ.ಸುರೇಶ್‌ಸಿಂಗ್‌, ದೇವೇಂದ್ರಪ್ಪಗೌಡ, ತಾ.ಪಂ. ಸದಸ್ಯೆ ಸರಸ್ವತಿಗಣಪತಿ, ಕುಷನ್‌ ದೇವರಾಜ್‌, ಯೋಗೇಂದ್ರಗೌಡ, ಕಗ್ಗಲಿ ನಿಂಗಪ್ಪ, ಸರಸ್ವತಿ, ಶೈಲಾ ಪ್ರಭು, ಉಮಾಸುರೇಶ್‌, ರೇಣುಕಾ ಭೀಮರಾಜ್‌, ಲಕ್ಷ ್ಮಮ್ಮ, ಪದ್ಮಸುರೇಶ್‌ ಇತರರು ಇದ್ದರು.

---------
ಭಾರತದ ರೈತ ಸಮೂಹ ಸ್ವಾವಲಂಬಿ ಬದುಕಿಗೆ ದಿಟ್ಟ ಹೆಜ್ಜೆ ಇಡಲು ರೈತನಿಗೆ ಸಾಲ ತೀರಿಸುವ ಶಕ್ತಿ ನೀಡುವ ಸಲುವಾಗಿ ಪ್ರಧಾನ ಮಂತ್ರಿ ಕೃಷಿ ಸಮ್ಮಾನ ಯೋಜನೆ ಜಾರಿಗೆ ತಂದಿದ್ದಾರೆ. ರೈತರಿಗೆ ಜೀವನ ಪರ‍್ಯಂತ ಕೃಷಿ ಸಮ್ಮಾನ ಯೋಜನೆಯ ಸೌಲಭ್ಯ ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ.
- ದತ್ತಾತ್ರಿ. ರಾಜ್ಯ ರೈತ ಮೋರ್ಚಾ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ