ಆ್ಯಪ್ನಗರ

ಪಿತ್ತಕೋಶದಲ್ಲಿ ಕಲ್ಲು ತಪಾಸಣೆ ಶಿಬಿರ ನಾಳೆ

ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜು.31ರಂದು ರಿಯಾಯಿತಿ ದರದಲ್ಲಿ ಪಿತ್ತಕೋಶದಲ್ಲಿ ಕಲ್ಲು ಮತ್ತು ಬೊಜ್ಜು ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.

Vijaya Karnataka 30 Jul 2019, 5:00 am
ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜು.31ರಂದು ರಿಯಾಯಿತಿ ದರದಲ್ಲಿ ಪಿತ್ತಕೋಶದಲ್ಲಿ ಕಲ್ಲು ಮತ್ತು ಬೊಜ್ಜು ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.
Vijaya Karnataka Web NH LOGO


ಕಿಬ್ಬೊಟೆಯಲ್ಲಿ ನೋವು, ಜ್ವರ, ವಾಕರಿಕೆ, ಹೊಟ್ಟೆ ನೋವು, ಕಣ್ಣು ಮತ್ತು ಚರ್ಮದ ಬಣ್ಣ ಹಳದಿ ಆಗುವುದು ಮತ್ತಿತರ ಸಮಸ್ಯೆಗಳಿರುವವರು ಪಿತ್ತಕೋಶ ಕಲ್ಲಿನ ಪರೀಕ್ಷೆಗೆ ಒಳಪಡಬಹುದು.

ಸ್ಥೂಲಕಾಯ, ಅತಿಯಾದ ದೇಹದ ತೂಕ, ಹೆಚ್ಚಿದ ಬೊಜ್ಜು ಇತ್ಯಾದಿ ಸಮಸ್ಯೆ ಇರುವವರು ಬೊಜ್ಜು ಚಿಕಿತ್ಸೆ ಪಡೆಯಬಹುದು. ಶಿಬಿರದಲ್ಲಿ ಪಾಲ್ಗೊಂಡು ವಿಶೇಷ ರಿಯಾಯಿತಿ ದರದಲ್ಲಿ ತಜ್ಞ ವೈದ್ಯರೊಂದಿಗೆ ಸಲಹೆ ಮತ್ತು ತಪಾಸಣೆ ಮಾಡಿಸಿಕೊಳ್ಳಬಹುದಾಗಿದೆ. ಶಿಬಿರದಲ್ಲಿ ಪಾಲ್ಗೊಂಡ ಅವಶ್ಯಕತೆ ಇರುವ ರೋಗಿಗಳಿಗೆ ಮಾತ್ರ ವೈದ್ಯರ ಸಲಹೆ ಮೇರೆಗೆ ಇತರೆ ತಪಾಸಣೆಗಳನ್ನು (ಅಲ್ಟ್ರಾಸೌಂಡ್‌ ಮತ್ತು ಎಲ್‌.ಎಫ್‌.ಟಿ) ಶೇ.30 ವಿಶೇಷ ರಿಯಾಯಿತಿ ದರದಲ್ಲಿ ಮಾಡಲಾಗುತ್ತದೆ ಎಂದು ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್‌ ಪವನ್‌ ಕುಮಾರ ತಿಳಿಸಿದ್ದಾರೆ.

ಮಾಹಿತಿಗಾಗಿ 9739038205, 9538897698, 18602080208 ಸಂಖ್ಯೆಗಳಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಕರೆ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ