ಆ್ಯಪ್ನಗರ

ಮಹಿಳೆಯ ಆರ್ಥಿಕ ಸ್ವಾವಲಂಬನೆಯಿಂದ ಸದೃಢ

ಕುಟುಂಬ ನಿರ್ವಹಣೆ ನಡುವೆ ಮಹಿಳೆ ಉಳಿಸಿದ ಹಣ ರಿಸರ್ವ್‌ ಬ್ಯಾಂಕ್‌ ಉಳಿತಾಯದ ಹಣದಷ್ಟೇ ಪ್ರಾವಿತ್ರ್ಯತೆ ಹೊಂದಿರುತ್ತದೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್‌ ಅಭಿಪ್ರಾಯಪಟ್ಟರು.

Vijaya Karnataka 4 Aug 2019, 5:00 am
ಶಿವಮೊಗ್ಗ : ಕುಟುಂಬ ನಿರ್ವಹಣೆ ನಡುವೆ ಮಹಿಳೆ ಉಳಿಸಿದ ಹಣ ರಿಸರ್ವ್‌ ಬ್ಯಾಂಕ್‌ ಉಳಿತಾಯದ ಹಣದಷ್ಟೇ ಪ್ರಾವಿತ್ರ್ಯತೆ ಹೊಂದಿರುತ್ತದೆ ಎಂದು ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್‌ ಅಭಿಪ್ರಾಯಪಟ್ಟರು.
Vijaya Karnataka Web SMG-0208-2-15-2SMG5


ನಗರದ ಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಮನೆ ನಿರ್ವಹಣೆಗಷ್ಟೆ ಸೀಮಿತವಾಗಿದ್ದ ಮಹಿಳೆಯರು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಆರ್ಥಿಕ ಚಟುವಟಿಕೆಯನ್ನೂ ನಡೆಸುತ್ತಿದ್ದಾರೆ. ಗಂಡ ಮನೆ ನಿರ್ವಹಣೆಗಾಗಿ ಕೊಟ್ಟ ಹಣವನ್ನು ಕಷ್ಟಪಟ್ಟು ಉಳಿಸಿ ಅದನ್ನು ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಸುವುದು ಉತ್ತಮವಾದ ಬೆಳವಣಿಗೆ. ದೊಡ್ಡ ಕುಟುಂಬದಲ್ಲಿ ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಹೋಗುವ ಮಹಿಳೆ ಸಮಾಜದಲ್ಲಿ ಸಂಘ ಸಂಸ್ಥೆಗಳನ್ನೂ ಮುನ್ನಡೆಸಬಲ್ಲಳು ಎಂಬುದು ಈ ಸಂಘದ ಬೆಳವಣಿಗೆ ಮೂಲಕ ಗುರುತಿಸಬಹುದು ಎಂದರು.

ಮಹಿಳೆ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಸ್ವಾವಲಂಬನೆ ಸಾಧಿಸದ ಹೊರತು ಶಕ್ತಿ ಬರಲು ಸಾಧ್ಯವಿಲ್ಲ. ಬ್ಯಾಂಕಿಂಗ್‌ ವ್ಯವಸ್ಥೆಗೆ ಒಗ್ಗಿಕೊಂಡಿರುವುದರಿಂದ ಹಳೆಯ ಕಾಲಕ್ಕಿಂತ ಈಗ ಉತ್ತಮವಾಗಿದೆ. ತಾವು 80 ಕೋಟಿ ವಹಿವಾಟು ಇರುವ ಸಂಸ್ಥೆಯೊಂದರ ಅಧ್ಯಕ್ಷೆಯಾಗಿದ್ದನ್ನು ನೆನಪಿಸಿಕೊಂಡ ಅವರು, ಸಹಕಾರ ಕ್ಷೇತ್ರಗಳು ಪಾರದರ್ಶಕವಾಗಿದ್ದಾಗ ಮಾತ್ರ ಭ್ರಷ್ಟಾಚಾರ ಮುಕ್ತವಾಗುತ್ತದೆ ಎಂದರು. ಠೇವಣಿ ಲಾಭ ತರುತ್ತದೆ. ಆದರೆ ಸಾಲ ಬಡ್ಡಿ ಹೆಚ್ಚಿಸುತ್ತದೆ. ಬಡ್ಡಿ ಹೆಚ್ಚಾದಂತೆ ಸಾಲ ಮರುಪಾವತಿ ಮಾಡಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಬೇಕು. ರಾಜಕೀಯ ಹಸ್ತಕ್ಷೇಪ ನಿಲ್ಲಬೇಕು. ಸಹಕಾರ ಸಂಘಗಳು ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಸ್ವಾವಲಂಬಿಯಾಗಬೇಕು ಎಂದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಬ್ಯಾಂಕ್‌ ಅಧ್ಯಕ್ಷೆ ಪಿ.ವೀರಮ್ಮ ಅಧ್ಯಕ್ಷ ತೆ ವಹಿಸಿದ್ದರು. ನಿರ್ದೇಶಕಿ ಸುನೀತಾ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ