ಆ್ಯಪ್ನಗರ

ಶ್ರೇಷ್ಠ ಸಂಕಲ್ಪದಿಂದ ಯಶಸ್ಸು

ಸರಕಾರ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಹಲವು ಯೋಜನೆ ಪ್ರಯೋಜನ ಪಡೆದು ಉತ್ತಮ ಫಲಿತಾಂಶ ಪಡೆಯಬೇಕೆಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಮಹಾಸ್ವಾಮಿಗಳು ಹೇಳಿದರು.

Vijaya Karnataka 22 Sep 2019, 5:00 am
ಸೊರಬ: ಸರಕಾರ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಿರುವ ಹಲವು ಯೋಜನೆ ಪ್ರಯೋಜನ ಪಡೆದು ಉತ್ತಮ ಫಲಿತಾಂಶ ಪಡೆಯಬೇಕೆಂದು ಜಡೆ ಸಂಸ್ಥಾನ ಮಠದ ಡಾ.ಮಹಾಂತ ಮಹಾಸ್ವಾಮಿಗಳು ಹೇಳಿದರು.
Vijaya Karnataka Web success by great determination
ಶ್ರೇಷ್ಠ ಸಂಕಲ್ಪದಿಂದ ಯಶಸ್ಸು


ತಾಲೂಕಿನ ಜಡೆ ಗ್ರಾಮದ ಶ್ರೀಜಗದ್ಗುರು ಸಿದ್ದವೃಷಭೇಂದ್ರ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ವಿಭಾಗದಲ್ಲಿಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿ ಸಂಘ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಮೈಸೂರು ಟರ್ಪಾಲಿನ್ಸ್‌ ಅವರು ನೀಡಿದ ಬ್ಯಾಗ್‌ಗಳ ವಿತರಣೆ ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರಕಾರದ ಉಚಿತ ಸೈಕಲ್‌ ವಿತರಿಸಿ ಅವರು ಮಾತನಾಡಿದರು.

ಸಾಧಿಸಲು ಹಲವು ಕ್ಷೇತ್ರಗಳಿವೆ. ಎಲ್ಲರೂ ಎಲ್ಲಸಾಧನೆ ಮಾಡಲು ಸಾಧ್ಯವಿಲ್ಲ. ಆಸಕ್ತಿ ವಿಷಯ, ಕ್ಷೇತ್ರಗಳಲ್ಲಿಸಾಧಿಸುವ ಗುರಿ ಹಾಗೂ ಶ್ರೇಷ್ಠ ಸಂಕಲ್ಪ ಹೊಂದಿದಾಗ ಮಾತ್ರ ಸುಲಭವಾಗಿ ಯಶಸ್ಸು ಪಡೆಯಬಹುದು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಹಿತ್ಯ, ಕ್ರೀಡೆಗಳಲ್ಲಿಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಂಡಾಗ ವಿಕಾಸ ಸಾಧ್ಯ ಎಂದರು. ಮುಖ್ಯ ಶಿಕ್ಷಕ ಪಕ್ಕಿರಪ್ಪ, ಕೇಸರಿ, ನಾಗರಾಜಗೌಡ, ಎಲ್‌.ಆರ್‌.ಭಟ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ