ಆ್ಯಪ್ನಗರ

ಪ್ರಾಮಾಣಿಕ ಪರಿಶ್ರಮವಿದ್ದರೆ ಯಶಸ್ಸು ಖಚಿತ

ಇಂದಿನ ವಿದ್ಯಾರ್ಥಿಗಳು ಬಳಕೆಯಲ್ಲಿ ಕಳೆಯುವ ಸಮಯವನ್ನು ಓದಿಗಾಗಿ ಮೀಸಲಿಟ್ಟರೆ ಭವಿಷ್ಯದಲ್ಲಿ ಉನ್ನತ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎಂದು ಜಿಪಂ ಸಿಇಓ ಕೆ.ಶಿವರಾಮೇಗೌಡ ಹೇಳಿದರು.

Vijaya Karnataka 1 Apr 2019, 5:00 am
ಶಿವಮೊಗ್ಗ: ಇಂದಿನ ವಿದ್ಯಾರ್ಥಿಗಳು ಬಳಕೆಯಲ್ಲಿ ಕಳೆಯುವ ಸಮಯವನ್ನು ಓದಿಗಾಗಿ ಮೀಸಲಿಟ್ಟರೆ ಭವಿಷ್ಯದಲ್ಲಿ ಉನ್ನತ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎಂದು ಜಿಪಂ ಸಿಇಓ ಕೆ.ಶಿವರಾಮೇಗೌಡ ಹೇಳಿದರು.
Vijaya Karnataka Web SMR-31ganesh3


ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಕುರಿತು ಉಚಿತ ತರಬೇತಿ ಸಮಾರೋಪದಲ್ಲಿ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿನ ವಿಷಯವನ್ನು ಅಷ್ಟೇ ಸ್ಪರ್ಧಾತ್ಮಕವಾಗಿಯೇ ತೆಗೆದುಕೊಳ್ಳಬೇಕಿದೆ. ಇಂದಿನ ಯುವಪೀಳಿಗೆಗೆ ಉಜ್ವಲ ಭವಿಷ್ಯವಿದೆ. ಇದನ್ನು ಅರಿತು ಅತ್ಯಂತ ಪ್ರಾಮಾಣಿಕವಾಗಿ ಕಲಿಕೆಯಲ್ಲಿ ತೊಡಗಿಕೊಂಡು ಸಮಾಜದಲ್ಲಿ ಉತ್ತಮ ಅಧಿಕಾರಿಯಾಗಿ ರೂಪಗೊಳ್ಳಬೇಕಿದೆ ಎಂದರು.

ಮೊಬೈಲ್‌ ಬಳಕೆಯಲ್ಲಿ ತೋರಿಸುವ ಆಸಕ್ತಿಯನ್ನು ಓದಿನಲ್ಲಿ ತೋರಿಸಬೇಕು. ಅ ಮೂಲಕ ಉನ್ನತ ಅಧಿಕಾರಿಯಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು. ವಿದ್ಯಾರ್ಥಿ ಜೀವನದಲ್ಲೇ ಉದ್ಯೋಗ ಬಗ್ಗೆ ಗಮನಹರಿಸಬೇಕು. ಸ್ಪರ್ಧಾತ್ಮಕ ತರಬೇತಿ ಪ್ರಯೋಜನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ.ಹಿರೇಮಣಿ ನಾಯ್ಕ್‌, ಪ್ರಾಂಶುಪಾಲರಾದ ಪ್ರೊ.ಕೆ.ಆರ್‌.ಶಶಿರೇಖಾ, ಡಾ.ಟಿ ಪರಮೇಶ್ವರನಾಯ್ಕ್‌, ಸ್ಪರ್ಧಾ ಕರ್ನಾಟಕ ಸಂಸ್ಥೆಯ ಮೋಹನ್‌ ಮತ್ತು ನಂಜನಾಯ್ಕ್‌, ಕಾರ್ಯಕ್ರಮ ಸಂಚಾಲಕ ಡಾ.ಪಿ.ವೆಂಕಟೇಶ್‌, ಸಂಘಟನಾ ಕಾರ್ಯದರ್ಶಿ

ಡಾ. ನಾಗರಾಜ ಪರಿಸರ, ಡಾ.ಜಿ.ಎಂ.ಪವಿತ್ರ, ಡಾ.ಕೆ.ಸುಬ್ರಹ್ಮಣ್ಯ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ