ಆ್ಯಪ್ನಗರ

ಹಿಂದೂಗಳಿಗೆ ‘ಸುಪ್ರೀಂ’ ನ್ಯಾಯ

ಹಿಂದೂಗಳಿಗೆ ಆಗಿದ್ದ ಐತಿಹಾಸಿಕ ಅನ್ಯಾಯವನ್ನು ಸುಪ್ರೀಂ ಕೋರ್ಟ್‌ ಸರಿಪಡಿಸಿ ನ್ಯಾಯ ಒದಗಿಸಿರುವುದು ಶ್ಲಾಘನೀಯ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಹೇಳಿದರು.

Vijaya Karnataka 22 Nov 2019, 5:00 am
ಶಿರಾಳಕೊಪ್ಪ: ಹಿಂದೂಗಳಿಗೆ ಆಗಿದ್ದ ಐತಿಹಾಸಿಕ ಅನ್ಯಾಯವನ್ನು ಸುಪ್ರೀಂ ಕೋರ್ಟ್‌ ಸರಿಪಡಿಸಿ ನ್ಯಾಯ ಒದಗಿಸಿರುವುದು ಶ್ಲಾಘನೀಯ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಹೇಳಿದರು. ಪಟ್ಟಣದಲ್ಲಿಮಂಗಳವಾರ ಅಯೋಧ್ಯಾ ರಾಮಜನ್ಮ ಭೂಮಿ ಹೋರಾಟದಲ್ಲಿಭಾಗವಹಿಸಿ ಕರಸೇವೆ ಮಾಡಿದ್ದ ಕರಸೇವಕರನ್ನು ಸನ್ಮಾನಿಸಿ ಮಾತನಾಡಿದರು. 150 ವರ್ಷಗಳ ಹಿಂದಿನ ರಾಮಜನ್ಮ ಭೂಮಿ ಹೋರಾಟ ವಿವಾದವನ್ನು ವಿಶ್ವ ಹಿಂದೂ ಪರಿಷತ್‌ 36 ವರ್ಷಗಳ ಹಿಂದೆ ಅಶೋಕ ಸಿಂಘಾಲ್‌ ನೇತೃತ್ವದಲ್ಲಿಹಮ್ಮಿಕೊಂಡಿತು. 1982ರಲ್ಲಿಅಶೋಕ್‌ ಸಿಂಘಾಲ್‌ ಅವರು ದೇಶಾದ್ಯಂತ ಮೂವತ್ತು
Vijaya Karnataka Web supreme justice for hindus
ಹಿಂದೂಗಳಿಗೆ ‘ಸುಪ್ರೀಂ’ ನ್ಯಾಯ


ಸಾವಿರ ದೇವಸ್ಥಾನ ಧ್ವಂಸ ಮಾಡಿ ಅದರ ಮೇಲೆ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ದಾಖಲೆ ಸಹಿತ ಸರಕಾರಕ್ಕೆ ವರದಿ ನೀಡಿದ್ದರು. ಅದರಲ್ಲಿಹಿಂದೂಗಳ ಪವಿತ್ರ ಸ್ಥಳವಾದ

ಅಯೋಧ್ಯೆ, ಕಾಶಿ, ಮಥುರಾವನ್ನು ಮಾತ್ರ ಹಿಂದೂಗಳಿಗೆ ಬಿಡಿಸಿ ಕೊಡಿ ಎಂದು ಸರಕಾರಕ್ಕೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಸರಕಾರ ಸ್ಪಂದಿಸಲಿಲ್ಲ. ಹಾಗಾಗಿ, ದೇಶಾದ್ಯಂತ ಹೋರಾಟ ನಡೆಸಬೇಕಾಯಿತು ಎಂದರು. ಪಟ್ಟಣದ ನಿವಾಸಿಗಳಾದ ಪಟ್ಟಣ ಪಂಚಾಯಿತಿ ಮಾಜಿ

ಅಧ್ಯಕ್ಷ ಎಚ್‌.ಎಂ.ಚಂದ್ರಶೇಖರ್‌, ಸುರೇಶ್‌ಬಾಬು, ಟೈಲರ್‌ ರಮೇಶ್‌, ಹಿಂದೂ ಪ್ರತಿಷ್ಠಾನದ ವಿನೋದ ಅವರನ್ನು ಸನ್ಮಾನಿಸಲಾಯಿತು. ವಕೀಲ ಸಿದ್ದಲಿಂಗೇಶ್‌, ಬೆನ್ನೂರು ಪ್ರಶಾಂತ್‌, ಎಬಿವಿಪಿ ಚಿನ್ಮಯ, ರಾಘು ಸೀನಣ್ಣ, ಅಣ್ಣಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ