ಆ್ಯಪ್ನಗರ

ಪೌಷ್ಟಿಕ ಆಹಾರದಿಂದ ಸದೃಢತೆ

ಗರ್ಭಿಣಿಯರು ಮತ್ತು ಬಾಣಂತಿಯರು ಹೆಚ್ಚು ಪೌಷ್ಟಿಕಾಂಶ ಹೊಂದಿರುವ ಆಹಾರ ಸೇವಿಸಬೇಕು. ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ವೃದ್ಧಿಸಿ ಮಾನಸಿಕ, ದೈಹಿಕ ಸದೃಢತೆ ಉಂಟಾಗುತ್ತದೆ ಎಂದು ಸಾಗರ ತಾಲೂಕು ಸಿಡಿಪಿಒ ನಾಗರತ್ನ ನಾಯ್ಕ ಹೇಳಿದರು.

Vijaya Karnataka 11 Oct 2019, 5:00 am
ಆನಂದಪುರಂ : ಗರ್ಭಿಣಿಯರು ಮತ್ತು ಬಾಣಂತಿಯರು ಹೆಚ್ಚು ಪೌಷ್ಟಿಕಾಂಶ ಹೊಂದಿರುವ ಆಹಾರ ಸೇವಿಸಬೇಕು. ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ವೃದ್ಧಿಸಿ ಮಾನಸಿಕ, ದೈಹಿಕ ಸದೃಢತೆ ಉಂಟಾಗುತ್ತದೆ ಎಂದು ಸಾಗರ ತಾಲೂಕು ಸಿಡಿಪಿಒ ನಾಗರತ್ನ ನಾಯ್ಕ ಹೇಳಿದರು.
Vijaya Karnataka Web sustainability from nutritious food
ಪೌಷ್ಟಿಕ ಆಹಾರದಿಂದ ಸದೃಢತೆ

ಅವರು ಸಮೀಪದ ಹೊಸೂರಿನ ಅಂಗನವಾಡಿ ಕೇಂದ್ರದಲ್ಲಿಇತ್ತೀಚೆಗೆ ಏರ್ಪಡಿಸಿದ್ದ ಪೋಷಣೆ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಮೊಳಕೆ ಕಾಳು, ಬೆಲ್ಲ, ಹಸಿರುಸೊಪ್ಪು, ದ್ವಿದಳ ಧಾನ್ಯ, ಮೊಟ್ಟೆ ಇತ್ಯಾದಿ ಪೌಷ್ಟಿಕ ಆಹಾರ ಕುರಿತು ವಿವರಿಸಿದರು. ಹೊಸೂರು ಗ್ರಾ.ಪಂ. ಉಪಾಧ್ಯಕ್ಷ ಭಾಸ್ಕರ ಅಧ್ಯಕ್ಷತೆ ವಹಿಸಿದ್ದರು. ಗೌತಮಪುರ ವಲಯದ ಮೇಲ್ವಿಚಾರಕಿ ವಿ.ರೇಖಾ, ಆರೋಗ್ಯ ಇಲಾಖೆಯ ಬಿ.ಎಚ್‌.ಸುಶೀಲಮ್ಮ, ಸುತ್ತಮುತ್ತಲ ವಿವಿಧ ಅಂಗನವಾಡಿಗಳ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಮುಖ್ಯ ಶಿಕ್ಷಕ ತಿಮ್ಮಪ್ಪ ಇತರರು ಇದ್ದರು. ಗರ್ಭಿಣಿಯರಿಗೆ ಸೀಮಂತ, ಆರು ತಿಂಗಳ ವಯೋಮಾನದ ಮಕ್ಕಳಿಗೆ ಅನ್ನ ಪ್ರಾಶನ, ಪ್ಲಾಸ್ಟಿಕ್‌ ಮುಕ್ತ ಆಂದೋಲನ ಪ್ರತಿಜ್ಞೆ ಇತ್ಯಾದಿ ಕಾರ್ಯಕ್ರಮ ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ