ಆ್ಯಪ್ನಗರ

ಆರೋಗ್ಯ ತಪಾಸಣೆಗೆ ಕಾಳಜಿ ವಹಿಸಿ

ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ತಡಮಾಡದೆ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಹೆಚ್ಚು ಪ್ರಯೋಜನಕಾರಿ ಎಂದು ಹೃದಯ ರೋಗ ತಜ್ಞ ಡಾ. ನವೀನ್‌ ಹೇಳಿದರು.

Vijaya Karnataka 2 Feb 2019, 5:00 am
ಶಿರಾಳಕೊಪ್ಪ: ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ತಡಮಾಡದೆ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಹೆಚ್ಚು ಪ್ರಯೋಜನಕಾರಿ ಎಂದು ಹೃದಯ ರೋಗ ತಜ್ಞ ಡಾ. ನವೀನ್‌ ಹೇಳಿದರು.
Vijaya Karnataka Web take care of health checkups
ಆರೋಗ್ಯ ತಪಾಸಣೆಗೆ ಕಾಳಜಿ ವಹಿಸಿ


ಪಟ್ಟಣದ ಶ್ರೀಧರ ನರ್ಸಿಂಗ್‌ ಹೋಂನಲ್ಲಿ ಬುಧವಾರ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶಿವಮೊಗ್ಗ ಮತ್ತು ಶ್ರೀಧರ ನರ್ಸಿಂಗ್‌ ಹೋಂ ಹಾಗೂ ಲಯನ್ಸ್‌ ಕ್ಲಬ್‌ ಶಿರಾಳಕೊಪ್ಪದ ಸಹಯೊಗದಲ್ಲಿ ಏರ್ಪಡಿಸಿದ್ದ ಉಚಿತ ಹೃದಯ ಮತ್ತು ನರರೋಗ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ನರಗಳ ಸೆಳತ, ನರಗಳ ದೌರ್ಬಲ್ಯ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಬಗ್ಗೆ ಮೊದಲು ಸ್ಕ್ರೀನಿಂಗ್‌ ಮಾಡಿ ರೋಗ ಪತ್ತೆ ಹಚ್ಚುವುದು ಈ ಶಿಬಿರದ ಮುಖ್ಯ ಉದ್ದೇಶ. ಪ್ರಾಥಮಿಕ ತಪಾಸಣೆ ಬಳಿಕ ಕಂಡು ಬಂದ ರೋಗಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೆ ಚಿಕಿತ್ಸೆ ಪಡೆಯಲು ಸಲಹೆ ನೀಡಲಾಗುತ್ತದೆ. ಬಿಪಿಎಲ್‌ ಕಾರ್ಡ್‌ದಾರರಿಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಇದರ ಸದುಪಯೋಗಕ್ಕೆ ಮುಂದಾಗಬೇಕೆಂದರು.

ಮಕ್ಕಳ ತಜ್ಞ ಡಾ.ಶ್ರೀನಾಥ್‌ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಇಂತಹ ಶಿಬಿರದ ಪ್ರಯೋಜನ ಪಡೆಯಬೇಕೆಂದರು.

ಲಯನ್ಸ್‌ಕ್ಲಬ್‌ ಮಾಜಿ ಅಧ್ಯಕ್ಷ ಎಂ.ಶಿವಕುಮಾರ ಮಾತನಾಡಿದರು. ಡಾ. ಸೃಜನ ಶೆಟ್ಟಿ ಮತ್ತು ಶಿವಯೋಗಿ ಗೌಡ್ರು ಮಾತನಾಡಿದರು. ಲಯನ್ಸ್‌ ಜಿಲ್ಲಾ ಸಂಯೋಜಕ ಎಂ.ಆರ್‌. ಗಿರೀಶ್‌, ವೇದಮೂರ್ತಿ, ಆಡಳಿತ ಅಧಿಕಾರಿ ಜಗದೀಶ್‌ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ