ಆ್ಯಪ್ನಗರ

ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ: ಭಟ್‌

ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿದಾಗ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಎಂದು ಶಿವಮೊಗ್ಗದ ಕಮಲಾ ನೆಹರು ಕಾಲೇಜು ಸಂಸ್ಕೃತ ಉಪನ್ಯಾಸಕ ಮಂಜುನಾಥ ಭಟ್‌ ಹೇಳಿದರು.

Vijaya Karnataka 11 Jun 2019, 5:00 am
ಭದ್ರಾವತಿ: ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿದಾಗ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಎಂದು ಶಿವಮೊಗ್ಗದ ಕಮಲಾ ನೆಹರು ಕಾಲೇಜು ಸಂಸ್ಕೃತ ಉಪನ್ಯಾಸಕ ಮಂಜುನಾಥ ಭಟ್‌ ಹೇಳಿದರು.
Vijaya Karnataka Web take responsibility bhat
ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ: ಭಟ್‌


ಅವರು ಭಾನುವಾರ ಸಂಜೆ ನಗರದ ಜನ್ನಾಪುರದ ಏಕದಂತ ಸಭಾಭವನದಲ್ಲಿ ವೇದಾಂತ ಭಾರತೀ ಆಯೋಜಿಸಿದ್ದ 'ಭಾಷ್ಯಾಮೃತ ವಾಹಿನಿ' ತೈತ್ತರೀಯ ಉಪನಿಷತ್‌ ಭಾಷ್ಯಾ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಲೌಕಿಕ ಜೀವನದಲ್ಲಿ ಪ್ರತಿಯೊಬ್ಬರು ತಮ್ಮ ಕರ್ತವ್ಯವನ್ನು ಸರಿಯಾದ ಮಾರ್ಗದಲ್ಲಿ ಸರಿದೂಗಿಸಿಕೊಂಡು ಹೋಗುವುದರಿಂದ ತಾನಾಗಿ ಗೌರವ ಹೆಚ್ಚುತ್ತದೆ. ಆದರೆ, ತನ್ನ ಕರ್ತವ್ಯ ತಿಳಿಯದೆ ಬೇರೆ ಯಾವ ಕೆಲಸ ಮಾಡಿದರೂ ಮನ್ನಣೆ ಸಿಗಲಾರದು ಎಂದರು.

ವೇದಾಂತ ಭಾರತಿ ಸಂಚಾಲಕ ಕೃಷ್ಣಮೂರ್ತಿ ಸೋಮಯಾಜಿ ಮಾತನಾಡಿ, ಆಧ್ಯಾತ್ಮ ಚಿಂತನೆ ಹಾಗೂ ಧಾರ್ಮಿಕ ವಿಚಾರಗಳನ್ನು ತಿಳಿಸಿಕೊಡುವ ವೇದಾಂತ ಭಾರತಿಯು ಹಲವಾರು ಕಾರ್ಯಕ್ರಮಗಳನ್ನು ತಾಲೂಕಿನಲ್ಲಿ ನಡೆಸಿಕೊಂಡು ಬರುತ್ತಿದೆ. ಹಲವಾರು ಧರ್ಮಗ್ರಂಥಗಳಲ್ಲಿನ ಉಲ್ಲೇಖ, ವೇದ ಉಪನಿಷತ್ತಿನ ಪರಿಚಯ ಮಾಡಿಕೊಡಲು ಪ್ರವಚನಗಳು ಪೂರಕ ಎಂದರು. ಡಾ.ಕೃಷ್ಣಭಟ್‌, ಟ್ರಸ್ಟ್‌ ನ ಕೃಷ್ಣಮೂರ್ತಿ, ನಾಗರಾಜ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ