ಆ್ಯಪ್ನಗರ

ತಾಳಮದ್ದಲೆ ಉತ್ಕೃಷ್ಟ ಕಲಾ ಮಾಧ್ಯಮ

ಯಕ್ಷ ಗಾನ ತಾಳಮದ್ದಲೆ ಉತ್ಕೃಷ್ಟ ಕಲಾಮಾಧ್ಯಮವಾಗಿದೆ. ಅನ್ಯ ರಂಗಭೂಮಿಯ ಅಭ್ಯಾಸಿಗಳಿಗೆ ಯಕ್ಷ ಗಾನ,ತಾಳಮದ್ದಲೆಯ ಪರಿಚಯ ವಿಭಿನ್ನ ದೃಷ್ಟಿಕೋನ ನೀಡುತ್ತದೆ ಎಂದು ಕರ್ನಾಟಕ ಯಕ್ಷ ಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಹೇಳಿದರು.

Vijaya Karnataka 3 Aug 2019, 5:00 am
ಸಾಗರ: ಯಕ್ಷ ಗಾನ ತಾಳಮದ್ದಲೆ ಉತ್ಕೃಷ್ಟ ಕಲಾಮಾಧ್ಯಮವಾಗಿದೆ. ಅನ್ಯ ರಂಗಭೂಮಿಯ ಅಭ್ಯಾಸಿಗಳಿಗೆ ಯಕ್ಷ ಗಾನ,ತಾಳಮದ್ದಲೆಯ ಪರಿಚಯ ವಿಭಿನ್ನ ದೃಷ್ಟಿಕೋನ ನೀಡುತ್ತದೆ ಎಂದು ಕರ್ನಾಟಕ ಯಕ್ಷ ಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಹೇಳಿದರು.
Vijaya Karnataka Web talamaddale fine art media
ತಾಳಮದ್ದಲೆ ಉತ್ಕೃಷ್ಟ ಕಲಾ ಮಾಧ್ಯಮ


ಹೆಗ್ಗೋಡಿನ ನೀನಾಸಮ್‌ ಸಭಾಂಗಣದಲ್ಲಿ ನೀನಾಸಮ್‌ ಮತ್ತು ಅಕಾಡೆಮಿ ಮಂಗಳವಾರ ಹಮ್ಮಿಕೊಂಡಿದ್ದ ತಾಳಮದ್ದಲೆ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಂಗಕರ್ಮಿ ಕೆ.ವಿ.ಅಕ್ಷ ರ ಮಾತನಾಡಿ, ಆಧುನಿಕ ರಂಗಭೂಮಿ ಇಂದು ರಕ್ತಹೀನತೆಯಿಂದ ಬಳಲುತ್ತಿದೆ. ಸಾಂಪ್ರದಾಯಿಕ ರಂಗಭೂಮಿಯ ಶಕ್ತಿ, ಸಾಮರ್ಥ್ಯ‌ವನ್ನು ರಂಗಾಸಕ್ತರು ಗಮನಿಸಬೇಕಾಗಿದೆ. ಸಾಂಪ್ರದಾಯಿಕ ಕಲೆಗಳ ಪರಿಚಯದ ದೃಷ್ಟಿಯಿಂದ ತಾಳಮದ್ದಲೆ, ಕೂಡಿಯಟ್ಟಂ, ಸಮರಕಲೆ ಮುಂತಾದವುಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ಅಗತ್ಯ ಎಂದರು.

ಅಕಾಡೆಮಿ ಸದಸ್ಯರಾದ ಲಕ್ಷ್ಮೀನಾರಾಯಣ ಕಾಶಿ, ನಾಗರಾಜ ಜೋಶಿ ಸೋಂದಾ, ನೀನಾಸಮ್‌ನ ಶ್ರೀಧರ ಭಟ್ಟ , ನಾರಾಯಣ ಭಟ್ಟ ಪುರಪ್ಪೇಮನೆ, ಶಿಶಿರ, ಪಿ.ಕೆ.ರಮೇಶ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ