ಆ್ಯಪ್ನಗರ

7ರಂದು ಗ್ರಾಮೀಣ ವಿದ್ಯಾರ್ಥಿಗಳಿಗೆ 12ನೇ ವರ್ಷದ ಪ್ರತಿಭಾ ಪುರಸ್ಕಾರ

ಬೆಂಗಳೂರಿನ ಕೆನರಾ ಬ್ಯಾಂಕ್‌ ಜ್ಯುಬಿಲಿ ಎಜುಕೇಷನ್‌ ಫಂಡ್‌ ಸಂಸ್ಥೆಯ ಸಾಗರ ವಿಭಾಗ ಆ.7ರಂದು ತಾಲೂಕಿನ ಮಡಸೂರು ಲಿಂಗದಹಳ್ಳಿಯ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಮಧ್ಯಾಹ್ನ 2-30ಕ್ಕೆ 2019ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿದೆ.

Vijaya Karnataka 5 Aug 2019, 5:00 am
ಸಾಗರ: ಬೆಂಗಳೂರಿನ ಕೆನರಾ ಬ್ಯಾಂಕ್‌ ಜ್ಯುಬಿಲಿ ಎಜುಕೇಷನ್‌ ಫಂಡ್‌ ಸಂಸ್ಥೆಯ ಸಾಗರ ವಿಭಾಗ ಆ.7ರಂದು ತಾಲೂಕಿನ ಮಡಸೂರು ಲಿಂಗದಹಳ್ಳಿಯ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಮಧ್ಯಾಹ್ನ 2-30ಕ್ಕೆ 2019ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿದೆ.
Vijaya Karnataka Web talent award for rural students
7ರಂದು ಗ್ರಾಮೀಣ ವಿದ್ಯಾರ್ಥಿಗಳಿಗೆ 12ನೇ ವರ್ಷದ ಪ್ರತಿಭಾ ಪುರಸ್ಕಾರ


ಈ ಸಮಾರಂಭದಲ್ಲಿ ಆಯುರ್ವೇದ ತಜ್ಞವೈದ್ಯ ಡಾ. ಪತಂಜಲಿ ಪುರಪ್ಪೇಮನೆ ಅವರು 'ಶೈಕ್ಷ ಣಿಕ ಪ್ರಗತಿಯಲ್ಲಿ ಆಹಾರ, ಆರೋಗ್ಯದ ಪಾತ್ರ' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ತಾಲೂಕಿನ ಗ್ರಾಮೀಣ ಭಾಗದ ಪ್ರೌಢಶಾಲೆಗಳಲ್ಲಿ 2019ರ ಏಪ್ರಿಲ್‌ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಹಾಗೂ ಪ್ರಥಮ ಭಾಷೆ ಕನ್ನಡದಲ್ಲಿ ಶಾಲೆಗೆ ಅತಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೆನರಾ ಬ್ಯಾಂಕ್‌ ಸಾಗರ ಶಾಖೆಯ ಮುಖ್ಯ ಪ್ರಬಂಧಕಿ ಹೆಚ್‌.ಎಸ್‌.ಪ್ರಭಾ, ಸಾಗರದ ಕ್ಷೇತ್ರ ಶಿಕ್ಷ ಣಾಧಿಕಾರಿ ಕೆ.ಆರ್‌. ಬಿಂಬ ಇತರರು ಪಾಲ್ಗೊಂಡು ಬೆಂಗಳೂರಿನ ಕೆನರಾ ಬ್ಯಾಂಕ್‌ ಜ್ಯುಬಿಲಿ ಎಜುಕೇಷನ್‌ ಫಂಡ್‌ ಸಂಸ್ಥೆ ನೀಡುವ ಪುರಸ್ಕಾರಗಳನ್ನು ವಿತರಿಸಲಿದ್ದಾರೆ.

ತಾಲೂಕಿನ 28 ಸರಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳ 56 ಮಕ್ಕಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಗುತ್ತಿದ್ದು ಸತತ ಹನ್ನೆರಡನೇ ವರ್ಷದಲ್ಲಿ ಈ ಪ್ರೋತ್ಸಾಹ ಕಾರ್ಯಕ್ರಮವನ್ನು ಮುಂದುವರಿಸಲಾಗಿದೆ. ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರದ ಜತೆಗೆ ವಿವಿಧ ಪುರಸ್ಕಾರಗಳು ಲಭ್ಯವಾಗಲಿದೆ. ಸಂಸ್ಥೆ ಈ ವರ್ಷದಿಂದ ಪ್ರತಿಭಾನ್ವಿತರ ನಗದು ಪುರಸ್ಕಾರದ ಮೊತ್ತವನ್ನೂ ಕೂಡ ವಿಶೇಷವಾಗಿ ಹೆಚ್ಚಿಸಿದೆ ಎಂದು ಸ್ಥಳೀಯ ಸಂಚಾಲಕ ಮಾ.ವೆಂ.ಸ.ಪ್ರಸಾದ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ