ಆ್ಯಪ್ನಗರ

7ರಂದು ಪ್ರತಿಭಾಪುರಸ್ಕಾರ

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾತಾಪಿತೃ ಬೇಗುವಳ್ಳಿ ರುಕ್ಮಿಣಿ, ಎಚ್‌.ಕೆ.ರಮಾನಂದ್‌ ಅವರ ಸ್ಮರಣಾರ್ಥ ಜನವರಿ7ರಂದು ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮ ಏರ್ಪಡಿಸಲಾಗಿದೆ ಎಂದು ರಾಜ್ಯ ಆರ‍್ಯ ಈಡಿಗರ ಸಂಘದ ನಿರ್ದೇಶಕ ಬೇಗುವಳ್ಳಿ ಸತೀಶ್‌ ಹೇಳಿದರು.

Vijaya Karnataka 5 Jan 2019, 5:00 am
ತೀರ್ಥಹಳ್ಳಿ: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾತಾಪಿತೃ ಬೇಗುವಳ್ಳಿ ರುಕ್ಮಿಣಿ, ಎಚ್‌.ಕೆ.ರಮಾನಂದ್‌ ಅವರ ಸ್ಮರಣಾರ್ಥ ಜನವರಿ7ರಂದು ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮ ಏರ್ಪಡಿಸಲಾಗಿದೆ ಎಂದು ರಾಜ್ಯ ಆರ‍್ಯ ಈಡಿಗರ ಸಂಘದ ನಿರ್ದೇಶಕ ಬೇಗುವಳ್ಳಿ ಸತೀಶ್‌ ಹೇಳಿದರು.
Vijaya Karnataka Web talent programme 0n 7th
7ರಂದು ಪ್ರತಿಭಾಪುರಸ್ಕಾರ


ಶುಕ್ರವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ನೀಡಲಾಗುತ್ತಿದೆ. ತೀರ್ಥಹಳ್ಳಿ, ಹೊಸನಗರ ತಾಲೂಕು ವ್ಯಾಪ್ತಿಯ 120 ವಿದ್ಯಾರ್ಥಿಗಳಿಗೆ ಪುರಸ್ಕಾರ ಗೌರವ ಪ್ರಧಾನ ಮಾಡಲಾಗುವುದು ಎಂದರು.

ಪಟ್ಟಣದ ಟಿಎಪಿಸಿಎಂಎಸ್‌ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ಶ್ರೀನಾರಾಯಣಗುರು ಮಹಾ ಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೋಟಾಶ್ರೀನಿವಾಸಪೂಜಾರಿ ಕಾರ‍್ಯಕ್ರಮ ಉದ್ಘಾಟಿಸುವರು. ಈಡಿಗ, ಇತರೆ ಸಮುದಾಯದ ವಿದ್ಯಾರ್ಥಿಗಳನ್ನು ಸಮಾನವಾಗಿ ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಸಂಸದ, ಶಾಸಕರನ್ನು ಈ ಸಂದರ್ಭ ಗೌರವಿಸಲಾಗುತ್ತದೆ. ಅಂತಾರಾಷ್ಟ್ರೀಯ ಯೋಗಾಸನಾ ಸ್ಪರ್ಧೆಯಲ್ಲಿ ಪಾಲ್ಗೊಂಡ 4ನೇತರಗತಿ ವಿದ್ಯಾರ್ಥಿ ಕಾವ್ಯ ಕಲ್ಲುಕೊಪ್ಪ, ಈಡಿಗ ಸಮುದಾಯ ಕುರಿತು ಸಂಶೋಧನೆ ಕಾರ‍್ಯ ಕೈಗೊಂಡ ಡಾ.ವೀಣಾ ಅವರನ್ನು ಗೌರವಿಸಲಾಗುವುದು ಎಂದರು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗಜ್ಞಾನೇಂದ್ರ, ಕುಮಾರಬಂಗಾರಪ್ಪ, ಹರತಾಳು ಹಾಲಪ್ಪ, ಸುನಿಲ್‌ನಾಯ್ಕ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಂದೇಶಜವಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಪ್ರದೇಶ ಆರ‍್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡರು ಪ್ರತಿಭಾ ಪುರಸ್ಕಾರ ಪ್ರದಾನ ಮಾಡುವರು. ಕರ್ನಾಟಕ ರಾಜ್ಯ ಉಗ್ರಾಣ ನಿಗಮ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎನ್‌.ವಿಜಯ ಪ್ರಕಾಶ್‌ ಮಾತನಾಡುವರು. ಮಾಜಿ ಸಚಿವ ಕಿಮ್ಮನೆರತ್ನಾಕರ್‌, ಮಾಜಿ ಶಾಸಕ ಬಿ.ಸ್ವಾಮಿರಾವ್‌, ಜಿ.ಪಂ.ಮಾಜಿ ಅಧ್ಯಕ್ಷ ಅಶೋಕಮೂರ್ತಿ, ಮಾಜಿ ಸದಸ್ಯ ಬಿ.ಎಸ್‌.ಪುರುಷೋತ್ತಮ ಭಾಗವಹಿಸುವರು ಎಂದು ಬೇಗುವಳ್ಳಿ ಸತೀಶ್‌ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡ ಮಂಜಪ್ಪ ಇದ್ದರು.


2011ರಿಂದ ಸತತವಾಗಿ ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ. ನೂರಾರು ವಿದ್ಯಾರ್ಥಿಗಳಿಗೆ ಕಾರ‍್ಯಕ್ರಮದಿಂದ ಉನ್ನತ ಶಿಕ್ಷಣ ಪಡೆಯಲು ಪ್ರೇರಣೆ ಸಿಕ್ಕಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಕ್ಕಾಗ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ. ತಂದೆ, ತಾಯಿ ಸ್ಮರಣಾರ್ಥ ಹಮ್ಮಿಕೊಳ್ಳಲಾಗುತ್ತಿರುವ ಪ್ರತಿಭಾಪುರಸ್ಕಾರ ಕಾರ‍್ಯಕ್ರಮ ಮನಸ್ಸಿಗೆ ಸಂತೋಷ ತಂದಿದೆ.

-ಬೇಗುವಳ್ಳಿ ಸತೀಶ್‌




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ