ಆ್ಯಪ್ನಗರ

ವೃದ್ಧರಿಗೆ ತಂಡದ ಆರೈಕೆ

ಇಲ್ಲಿನ ಕರ್ನಾಟಕ ಸೋಶಿಯಲ್‌ ಮೂವ್‌ಮೆಂಟ್‌ ಹಾಗೂ ಕರ್ನಾಟಕ ಮಾನವ ಹಕ್ಕು ಸಮಿತಿ ಸದಸ್ಯರು ನಿತ್ರಾಣ ಸ್ಥಿತಿಯಲ್ಲಿದ್ದ ನಿರ್ಗತಿಕ ವೃದ್ಧರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ ಮಾನವೀಯ ಘಟನೆ ಬುಧವಾರ ನಡೆದಿದೆ.

Vijaya Karnataka 21 Sep 2019, 5:00 am
ಸಾಗರ: ಇಲ್ಲಿನ ಕರ್ನಾಟಕ ಸೋಶಿಯಲ್‌ ಮೂವ್‌ಮೆಂಟ್‌ ಹಾಗೂ ಕರ್ನಾಟಕ ಮಾನವ ಹಕ್ಕು ಸಮಿತಿ ಸದಸ್ಯರು ನಿತ್ರಾಣ ಸ್ಥಿತಿಯಲ್ಲಿದ್ದ ನಿರ್ಗತಿಕ ವೃದ್ಧರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ ಮಾನವೀಯ ಘಟನೆ ಬುಧವಾರ ನಡೆದಿದೆ.
Vijaya Karnataka Web 130319SGR3_46


ಇಲ್ಲಿನ ಗಾಂಧಿನಗರದ ಕಂಬಳೇರ ಕೇರಿಯಲ್ಲಿಬುಧವಾರ ಕಾಣಿಸಿಕೊಂಡ ವೃದ್ಧರು ಅಶಕ್ತತೆಯಿಂದ ಬಳಲುತ್ತಿದ್ದರು. ಇದನ್ನು ಗಮನಿಸಿದ ಸಾಮಾಜಿಕ ಕಾರ‍್ಯಕರ್ತ ಶಶಿಕಾಂತ್‌ ಅವರು ಗೆಳೆಯ ಇಮ್ರಾನ್‌ಗೆ ಈ ವಿಷಯ ತಿಳಿಸಿದ್ದಾರೆ. ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್‌, ಡಿಎಸ್‌ಎಸ್‌ ನಾಗರಾಜ ಮತ್ತಿತರರು ಸ್ಥಳಕ್ಕೆ ಧಾವಿಸಿದ್ದಾರೆ. ಪೌರಕಾರ್ಮಿಕರನ್ನು ಕರೆಸಿ, ವೃದ್ಧರಿಗೆ ಸ್ನಾನ ಮಾಡಿಸಲಾಗಿದೆ. ಆ ನಂತರ ತುರ್ತುನಿಗಾ ವಾಹನದ ಮೂಲಕ ವೃದ್ಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಕನ್ನಡ, ತೆಲುಗು ಮಾತನಾಡುವ ವೃದ್ಧರು ಹೆಸರು, ವಿಳಾಸದ ಮಾಹಿತಿ ನೀಡುತ್ತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ