ಆ್ಯಪ್ನಗರ

ಧರ್ಮ ಬೆಳೆಯಲು ದೇವಸ್ಥಾನ ಬುನಾದಿ

ಹಿಂದೂ ಧರ್ಮ ಉಳಿದು ಬೆಳೆಯಬೇಕಾದರೆ ದೇವಸ್ಥಾನಗಳು ಬುನಾದಿ ಇದ್ದಂತೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

Vijaya Karnataka 8 Feb 2019, 5:00 am
ಶಿವಮೊಗ್ಗ: ಹಿಂದೂ ಧರ್ಮ ಉಳಿದು ಬೆಳೆಯಬೇಕಾದರೆ ದೇವಸ್ಥಾನಗಳು ಬುನಾದಿ ಇದ್ದಂತೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
Vijaya Karnataka Web SMG-0702-2-15-7SMG4


ಶಿವಮೊಗ್ಗ ಆರ್ಯವೈಶ್ಯ ವಾಸವಿ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಇಲ್ಲಿನ ವಿನಾಯಕ ನಗರದಲ್ಲಿ ಗುರುವಾರ ಆಯೋಜಿಸಿದ್ದ 'ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರು, ಶ್ರೀ ನಗರೇಶ್ವರ ಸ್ವಾಮಿ, ಶ್ರೀಗಣಪತಿ ಆಂಜನೇಯ ಸಹಿತವಾದ ಕೋದಂಡ ರಾಮ, ನವಗ್ರಹ, ನಾಗದೇವತೆ ದೇವರುಗಳ ಶಿಲಾನ್ಯಾಸ ಹಾಗೂ ಶ್ರೀ ವಾಸವಿ ವಿಶ್ವರೂಪ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕಾಲ ಯಾವುದೇ ಇರಲಿ, ಹಿಂದೂ ಧರ್ಮದ ಮೇಲೆ ಆಕ್ರಮಣವಾದಾಗ ಅಲ್ಲಲ್ಲಿ ಸ್ಥಾಪಿತಗೊಂಡ ದೇವಸ್ಥಾನಗಳೇ ಸಮಾಜದ ಸಂಘಟನೆಗೆ ಕಾರಣವಾಗಿತ್ತು. ಹೀಗಾಗಿ, ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿರುವ ಇವುಗಳಿಂದಾಗಿ ಧರ್ಮ ಉಳಿಯಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಮರ ಜೀವಂತವಾಗಿರಬೇಕಾದರೆ ಭಗವಂತನೆಂಬ ತಾಯಿ ಬೇರು ಮುಖ್ಯ. ಆ ಬೇರು ಗಟ್ಟಿಯಾಗಿ ನೆಲೆಗೊಳ್ಳಬೇಕಾದರೆ ಭಕ್ತಿಯೆಂಬ ನೀರೆರೆಯಬೇಕು. ಆಗ ಅದು ಫಲ ನೀಡುತ್ತದೆ. ಅದೇ ರೀತಿ ಮನುಷ್ಯನ ಜೀವನ ಫಲಪ್ರದವಾಗಬೇಕಾದರೆ, ದೇವಸ್ಥಾನಗಳ ಪಾತ್ರ ದೊಡ್ಡ ಪ್ರಮಾಣದಲ್ಲಿದೆ. ದೈವ ಆರಾಧನೆಯಿಂದ ಸಮಾಜಕ್ಕೆ ಕಲ್ಯಾಣವಾಗುತ್ತದೆ ಎಂದರು.

ಪ್ರತಿಯೊಬ್ಬರಲ್ಲೂ ದೇವರಿದ್ದಾರೆ. ದೇವರ ಮತ್ತು ಸಮಾಜದ ಸೇವೆ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಹೀಗಾಗಿ, ಜಗತ್ತಿನಲ್ಲಿರುವ ಪ್ರತಿಯೊಬ್ಬರ ಲೇಸನ್ನು ಬಯಸಬೇಕು ಎಂದು ತಿಳಿಸಿದರು.

ಶ್ರೀ ಸರಸ್ವತಿ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟ್‌ ಅಧ್ಯಕ್ಷ ಟಿ.ಎಸ್‌. ವೆಂಕಟಸುಬ್ಬಯ್ಯ ಶೆಟ್ಟಿ, ವಿಧಾನ ಪರಿಷತ್‌ ಮಾಜಿ ಸಭಾಪತಿ ಡಿ.ಎಚ್‌. ಶಂಕರ್‌ಮೂರ್ತಿ, ಡಿ.ಎಸ್‌. ಅರುಣ್‌, ಅ.ಪ.ರಾಮಭಟ್ಟ, ಎಚ್‌.ಎಸ್‌. ಮಂಜುನಾಥ್‌ ಇತರರಿದ್ದರು.

------
ವೈಶ್ಯ ಸಮಾಜ ಹಿಂದೂ ಧರ್ಮದ ಬಹುದೊಡ್ಡ ಶಕ್ತಿಯಾಗಿದೆ. ಬರುವ ದಿನಗಳಲ್ಲಿ ಜನರ ಸಹಕಾರದೊಂದಿಗೆ ಶಿವಮೊಗ್ಗದಲ್ಲಿ ಮಠ ಹಾಗೂ ಹಾಸ್ಟೆಲ್‌ಗಳನ್ನು ನಿರ್ಮಿಸಲಾಗುವುದು.
- ಶ್ರೀ ವಿಶ್ವೇಶ್ವರ ತೀರ್ಥರು, ಉಡುಪಿ ಪೇಜಾವರ ಮಠ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ