ಆ್ಯಪ್ನಗರ

‘ವಿಜ್ಞಾನ ಕಲಿಕೆಯಿಂದ ಆಲೋಚನಾ ಶಕ್ತಿ ’

ಮಕ್ಕಳಲ್ಲಿ ಕುತೂಹಲ, ಆಲೋಚನಾ ಶಕ್ತಿ, ಸಂಶೋಧನಾ ಪ್ರವೃತ್ತಿ ಬೆಳೆಸಲು ವಿಜ್ಞಾನದ ಕಲಿಕೆ ಅತ್ಯವಶ್ಯಕ ಎಂದು ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಹೇಳಿದರು.

Vijaya Karnataka 2 Mar 2019, 5:00 am
ಸಾಗರ: ಮಕ್ಕಳಲ್ಲಿ ಕುತೂಹಲ, ಆಲೋಚನಾ ಶಕ್ತಿ, ಸಂಶೋಧನಾ ಪ್ರವೃತ್ತಿ ಬೆಳೆಸಲು ವಿಜ್ಞಾನದ ಕಲಿಕೆ ಅತ್ಯವಶ್ಯಕ ಎಂದು ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಹೇಳಿದರು.
Vijaya Karnataka Web SMR-01SGR8


ತಾಲೂಕಿನ ಕಾಗೆಹಳ್ಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಥಮಿಕ ಹಂತದಲ್ಲೇ ಸುತ್ತಲಿನ ಪರಿಸರದಲ್ಲಿನ ವಿಶೇಷತೆ ಗಮನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿಜ್ಞಾನ ಕೇವಲ ಒಂದು ವಿಷಯವಲ್ಲ, ವಿಷಯವನ್ನು ವಿವಿಧ ಮಗ್ಗಲುಗಳಲ್ಲಿ ಗ್ರಹಿಸುವ, ವಿಶ್ಲೇಷಿಸುವ ಮನೋಧರ್ಮ, ಅಂಥ ಮನೋಧರ್ಮವನ್ನು ಮಕ್ಕಳು ಬೆಳೆಸಿಕೊಂಡಾಗ ಮುಂದಿನ ಹಂತದ ಶಿಕ್ಷ ಣದ ಕಲಿಕೆ ಸುಲಭ ಎಂದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಕುಸುಮ, ಮುಖ್ಯಶಿಕ್ಷ ಕಿ ಭುವನೇಶ್ವರಿ ಹೆಗಡೆ , ಮೇಲಿನ ಮನೆ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷ ಕಿ ಗೌರಮ್ಮ, ಎಸ್‌ಡಿಎಂಸಿ ಸದಸ್ಯೆ ಮಮತ, ಶಾಲೆ ಶಿಕ್ಷ ಕಿಯರು ಇದ್ದರು. ಮಕ್ಕಳು ಸ್ಥಳದಲ್ಲೇ ತಯಾರಿಸಿದ ವಿಜ್ಞಾನದ ಮಾದರಿ ಹಾಗೂ ವಿಜ್ಞಾನದ ರಂಗವಲ್ಲಿಗಳು ಗಮನ ಸೆಳೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ