ಆ್ಯಪ್ನಗರ

ರಸ್ತೆಗೆ ಬಿದ್ದ ಮರ, ಸಂಚಾರ ವ್ಯತ್ಯಯ, ರೆಂಬೆ ತೆರವು

ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಜೋರು ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಗಾಳಿ ಕಾರಣ ಹಲವೆಡೆ ರಸ್ತೆಯಲ್ಲಿ ಮರ ಉರುಳಿ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

Vijaya Karnataka 8 Aug 2019, 5:00 am
ಆನಂದಪುರಂ: ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬುಧವಾರ ಬೆಳಗ್ಗೆ ಜೋರು ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಗಾಳಿ ಕಾರಣ ಹಲವೆಡೆ ರಸ್ತೆಯಲ್ಲಿ ಮರ ಉರುಳಿ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು.
Vijaya Karnataka Web SMR-7ANPP1 HEBBODI ROAD


ಆನಂದಪುರಂ-ಹೆಬೈಲು ಸಂಪರ್ಕ ರಸ್ತೆಯಲ್ಲಿ ಹೆಬ್ಬೋಡಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಸಮೀಪ ಹುಣಾಲು ಮರ ಬುಡ ಸಹಿತ ಉರುಳಿ ಬಿದ್ದಿದೆ. ಬಳ್ಳೀಬೈಲು, ಅಡೂರು, ಕೊಂಗನಹೊಸಳ್ಳಿ, ಮಾದರಸನಕೊಪ್ಪ ಇತರ ಗ್ರಾಮಗಳ ಜನರು ಬುಧವಾರದ ವಾರದ ಸಂತೆಗೆ ಆನಂದಪುರಂಗೆ ಬರಲು ರಸ್ತೆ ಸಂಪರ್ಕ ಬಂದ್‌ ಆಗಿ ತೊಂದರೆ ಅನುಭವಿಸಿದರು. ಇಲ್ಲಿನ ಪೊಲೀಸ್‌ ಠಾಣೆ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಮರದ ರೆಂಬೆ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಅರಣ್ಯಾಧಿಕಾರಿ ಇಸ್ಮಾಯಿಲ್‌ ಮತ್ತು ಸಿಬ್ಬಂದಿ ಮರ ತೆರವು ಕಾರ‍್ಯ ನಡೆಸಿದರು. ಯಡೇಹಳ್ಳಿ-ಬಟ್ಟೆಮಲ್ಲಪ್ಪ ಸಂಪರ್ಕ ರಸ್ತೆಯಲ್ಲಿ ಹುಣಸವಳ್ಳಿ ಸಮೀಪ ಮತ್ತು ಸಾಗರ-ಶಿವಮೊಗ್ಗ ಹೆದ್ದಾರಿಯಲ್ಲಿ ಗಿಳಾಲಗುಂಡಿ ಬಳಿ ಮರದ ರೆಂಬೆ ಬಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ