ಆ್ಯಪ್ನಗರ

‘ಪರಿಶ್ರಮದಿಂದ ಯಶಸ್ಸಿನ ಹಾದಿ ಸನಿಹ’

ಸಾಧನೆಗೆ ಪರಿಶ್ರಮವೇ ಸೋಪಾನ. ಸಾಧನೆ ಹಿಂದೆ ಪರಿಶ್ರಮ ಇದ್ದರೆ ಯಶಸ್ಸಿನ ಹಾದಿ ಸನಿಹವಾಗುತ್ತದೆ ಎಂದು ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌ ಹೇಳಿದರು.

Vijaya Karnataka 30 Dec 2018, 5:00 am
ಶಿವಮೊಗ್ಗ: ಸಾಧನೆಗೆ ಪರಿಶ್ರಮವೇ ಸೋಪಾನ. ಸಾಧನೆ ಹಿಂದೆ ಪರಿಶ್ರಮ ಇದ್ದರೆ ಯಶಸ್ಸಿನ ಹಾದಿ ಸನಿಹವಾಗುತ್ತದೆ ಎಂದು ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‌ ಹೇಳಿದರು.
Vijaya Karnataka Web SMR-29GANESH2


ನಗರದ ಕಸ್ತೂರಬಾ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿನಿ ಸಂಘ, ಕ್ರೀಡೆ, ಎನ್‌ಎಸ್‌ಎಸ್‌ ಘಟಕ, ಅಡ್ವೆಂಚರ್ಸ್‌ ಕ್ಲಬ್‌ ಮತ್ತು ಇಕೊಕ್ಲಬ್‌ ಚಟುವಟಿಕೆಗಳ ಬಹುಮಾನ ವಿತರಣೆ ಹಾಗೂ ಸಮಾರೋಪದಲ್ಲಿ ಅವರು ಮಾತನಾಡಿದರು.

ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ. ಪ್ರತಿಯೊಬ್ಬ ವಿದ್ಯಾರ್ಥಿಗೆ ಗುರಿ, ಆತ್ಮವಿಶ್ವಾಸ ಹಾಗೂ ಸಾಧಿಸುವ ಛಲ ಇದ್ದರೆ ಅವನ ಕನಸು ನನಸಾಗುವುದು ಖಂಡಿತ. ಗುರಿ ಹಾಗೂ ದೃಢ ನಿರ್ಧಾರ ಇದ್ದರೆ ಸಾಧನೆ ನಿಶ್ಚಿತ. ಜೀವನದಲ್ಲಿ ಒಮ್ಮೆ ಯಶಸ್ಸು ಗಳಿಸಿದರೆ ಹಿತೈಷಿಗಳು ಶಕ್ತಿ ತುಂಬಿ ಪ್ರೋತ್ಸಾಹಿಸುತ್ತಾರೆ ಎಂದರು.

ಸಾಧನೆ ಅಥವಾ ಯಶಸ್ಸು ರಾತೋರಾತ್ರಿ ಸಿಗುವುದಲ್ಲ. ಅದಕ್ಕೆ ನಿರಂತರವಾದ ಕಠಿಣ ಪರಿಶ್ರಮ ಇರಬೇಕು. ಕೇವಲ ಪಠ್ಯ ಪುಸ್ತಕ ಓದಿ ಅಂಕ ಗಳಿಸಿ ರಾರ‍ಯಂಕ್‌ ಪಡೆದರೆ ಸಾಲದು. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ವಿದ್ಯಾರ್ಥಿಗಳಿಗೆ ಓದಿನ ವಿಶ್ಲೇಷಣೆ, ಅನ್ವೇಷಣೆ ಜತೆಗೆ ದೇಶದ ಪರಂಪರೆ, ಇತಿಹಾಸ ಹಾಗೂ ಭೌಗೋಳಿಕ ಅಂಶಗಳ ಅರಿವು ಬಹಳ ಮುಖ್ಯ ಎಂದರು. ಎನ್‌ಇಎಸ್‌ ಕಾರ್ಯದರ್ಶಿ ಎಸ್‌.ಎನ್‌.ನಾಗರಾಜ್‌, ಕಮಲಾನೆಹರೂ ಕಾಲೇಜಿನ ಪ್ರಾಂಶುಪಾಲರಾದ ಪಾರ್ವತಮ್ಮ, ಕಸ್ತೂರಿಬಾ ಕಾಲೇಜಿನ ಪ್ರಾಂಶುಪಾಲ ಫಜ್ಲುಲ್ಲಾ ಖಾನ್‌ ಮತ್ತು ಉಪಪ್ರಾಂಶುಪಾಲ ಕೆ.ಆರ್‌.ಉಮೇಶ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ