ಆ್ಯಪ್ನಗರ

ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಕಳ್ಳತನ

ಇಲ್ಲಿನ ಗಾಂಧೀನಗರದಲ್ಲಿನ ತೋಟಗಾರಿಕೆ ಇಲಾಖೆ ಮುಂಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಿದ ಸಂಬಂಧ ಶನಿವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vijaya Karnataka 5 Aug 2019, 5:00 am
ಸಾಗರ: ಇಲ್ಲಿನ ಗಾಂಧೀನಗರದಲ್ಲಿನ ತೋಟಗಾರಿಕೆ ಇಲಾಖೆ ಮುಂಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಿದ ಸಂಬಂಧ ಶನಿವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Vijaya Karnataka Web theft at the horticulture department office
ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಕಳ್ಳತನ


ಕಚೇರಿ ಮುಖ್ಯಸ್ಥರ ಕೊಠಡಿಯೊಳಗಿನ ಗಾಡ್ರೇಜ್‌ ಬೀರು ಒಡೆದು ದಾಖಲೆಗಳನ್ನು ಜಾಲಾಡಿದ್ದಾರೆ. ಈ ಬೀರುವಿನಲ್ಲಿದ್ದ ಬೀಗದ ಕೈಗಳ ಸಹಾಯದಿಂದ ಸೇಫ್ಟಿಲಾಕರ್‌ ತೆಗೆದು ಅದರಲ್ಲಿದ್ದ ರೂ.3 ಲಕ್ಷ ದ 11 ಸಾವಿರ, ರೂ 35 ಸಾವಿರ ಹಾಗೂ ರೂ 7000 ಮೊತ್ತದ 3ಚೆಕ್‌ಗಳನ್ನು, ಕಂಪ್ಯೂಟರ್‌ನ ಒಂದು ಕೀಬೋರ್ಡ್‌, ಪವರ್‌ ಬ್ಯಾಂಕ್‌, ಮೊಬೈಲ್‌ ಫೋನ್‌ ಹಾಗೂ ಅಧೀಕ್ಷ ಕರ ಟೇಬಲ್‌ ಮೇಲಿದ್ದ ಡೆಲ್‌ ಕಂಪನಿಯ ಒಂದು ಲ್ಯಾಪ್‌ ಟಾಪ್‌ ಕಳ್ಳತನ ಮಾಡಲಾಗಿದೆ. ಬೆಂಗಳೂರಿನ ದಿ.ನರ್ಸರಿ ಮೆನ್‌ ಕೋ ಆಪರೇಟೀವ್‌ ಸೊಸೈಟಿ ಹೆಸರಿಗೆ ಇದ್ದ ಚೆಕ್‌ಗಳು ಹಾಗೂ ರೂ 12.150 ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೆ.ಎಲ್‌.ರಮೇಶ ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಚೇರಿಯ ಬಹುತೇಕ ಕೊಠಡಿ ಬೀಗ ಒಡೆಯಲಾಗಿದೆ. ಇದ್ದ ಎಲ್ಲ ಬೀರುಗಳಲ್ಲಿನ ಕಾಗದಪತ್ರ, ಕಡತ ಹರಡಲಾಗಿದೆ. ಅಲ್ಲದೇ ಕಾಗದಪತ್ರ ಹಾಕಿಡುವ ಸಲುವಾಗಿ ತಂದಿಟ್ಟಿದ್ದ ಬಟ್ಟೆ ಚೀಲಗಳನ್ನು ಸಹ ಕಳ್ಳರು ಹೊತ್ತೊಯ್ಯಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ