ಆ್ಯಪ್ನಗರ

ಸುಳ್ಳು ಸುದ್ದಿ ಬಗ್ಗೆ ಜಾಗರೂಕತೆ ಅಗತ್ಯ

ಸಮಾಜಕ್ಕೆ ತಪ್ಪು ಸಂದೇಶ ನೀಡುವ ಸುಳ್ಳು ಸುದ್ದಿಗಳಿಂದ ಎಲ್ಲರೂ ಜಾಗರೂಕರಾಗಿರಬೇಕೆಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಸಲಹೆ ನೀಡಿದರು.

Vijaya Karnataka 29 Jun 2019, 5:00 am
ಶಿವಮೊಗ್ಗ: ಸಮಾಜಕ್ಕೆ ತಪ್ಪು ಸಂದೇಶ ನೀಡುವ ಸುಳ್ಳು ಸುದ್ದಿಗಳಿಂದ ಎಲ್ಲರೂ ಜಾಗರೂಕರಾಗಿರಬೇಕೆಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಸಲಹೆ ನೀಡಿದರು.
Vijaya Karnataka Web SMG-2806-2-15-28SMG7


ನಗರದ ಪ್ರೆಸ್‌ ಟ್ರಸ್ಟ್‌ ವತಿಯಿಂದ ಶುಕ್ರವಾರ ಆಯೋಜಿಸಿದ್ದ 'ಗೂಗಲ್‌ ಫ್ಯಾಕ್ಟ್ ಚೆಕ್ಕಿಂಗ್‌ ವರ್ಕ್‌ಶಾಪ್‌ (ಸುಳ್ಳು ಸುದ್ದಿಗಳ ವಾಸ್ತವಾಂಶ ಪತ್ತೆ ಮಾಡುವ ಕಾರ್ಯಾಗಾರ)' ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣಗಳು ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಿಗೂ ಮೀರಿ ಬೆಳೆಯುತ್ತಿದೆ. ಇವುಗಳ ಮಧ್ಯೆ ಯಾವುದೇ ನಿಜ ಹಾಗೂ ಸುಳ್ಳು ಸುದ್ದಿ ಎಂಬುದನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಪ್ರಚೋದನಾಕಾರಿ ಮಾಹಿತಿಗಳನ್ನು ಹರಿಬಿಟ್ಟು ದಾರಿತಪ್ಪಿಸಲಾಗುತ್ತಿದೆ ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಸತ್ಯದ ಸುದ್ದಿಗಳಿಗಿಂತ ಸುಳ್ಳಿನ ಮಾಹಿತಿಗಳೇ ಹೆಚ್ಚು ಹರಿದಾಡುತ್ತಿವೆ. ಕಿರು ಬೆರಳಿನಲ್ಲಿ ಎಲ್ಲ ಸುದ್ದಿಗಳನ್ನು ನೀಡುವ ಮೊಬೈಲ್‌ನಿಂದಾಗಿ ಇದರ ಸಂಕಟ ಇನ್ನಷ್ಟು ಹೆಚ್ಚಾಗಿದೆ. ಹೀಗಾಗಿ, ಎಲ್ಲರೂ ಬಹಳ ಎಚ್ಚರಿಕೆಯಿಂದ ಸೋಶಿಯಲ್‌ ಮೀಡಿಯಾಗಳನ್ನು ಬಳಸಬೇಕು. ಅದರಲ್ಲೂ ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿದ್ದಷ್ಟು ಒಳಿತು. ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಬಹುದಾದ ಎಲ್ಲ ಅಂಶಗಳಿಂದ ಅಂತರ ಕಾಪಾಡಿಕೊಳ್ಳುವಂತೆ ಕಿವಿ ಮಾತು ಹೇಳಿದರು.

ಗೂಗಲ್‌ ಸಂಸ್ಥೆಯ ಕುಮಾರ್‌ ಅವರು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚುವ ಬಗ್ಗೆ ಮಾಹಿತಿ ನೀಡಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಪತ್ರಕರ್ತರು ಕಾರ್ಯಾಗಾರದ ಲಾಭ ಪಡೆದರು. ಸಂಸದ ಬಿ.ವೈ.ರಾಘವೇಂದ್ರ, ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ