ಆ್ಯಪ್ನಗರ

ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಿ

ಟಿಎಪಿಸಿಎಂಎಸ್‌ ಮೂಲಕ ಸಂಘದ ಸದಸ್ಯರಿಗೆ ಹಲವು ಸೌಲಭ್ಯ ನೀಡುವುದಕ್ಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿಆಡಳಿತ ಮಂಡಳಿ ಚಿಂತಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Vijaya Karnataka 20 Sep 2019, 5:00 am
ಶಿಕಾರಿಪುರ: ಟಿಎಪಿಸಿಎಂಎಸ್‌ ಮೂಲಕ ಸಂಘದ ಸದಸ್ಯರಿಗೆ ಹಲವು ಸೌಲಭ್ಯ ನೀಡುವುದಕ್ಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿಆಡಳಿತ ಮಂಡಳಿ ಚಿಂತಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
Vijaya Karnataka Web think about facilitating
ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಿ


ಪಟ್ಟಣದಲ್ಲಿಬುಧವಾರ ಟಿಎಪಿಸಿಎಂಎಸ್‌ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಿಎಸ್‌ವೈ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಟಿಎಪಿಸಿಎಂಎಸ್‌ ಮೂಲಕ ರೈತರಿಗೆ ಗೊಬ್ಬರ ವಿತರಣೆಗೆ ಅವಕಾಶ ನೀಡಿದ್ದರು. ಆ ನಂತರ ರಾಜ್ಯದ ಎಲ್ಲಸಂಘಗಳೂ ಆರ್ಥಿಕ ಪ್ರಗತಿ ಕಂಡುಕೊಳ್ಳಲು ಸಾಧ್ಯವಾಯಿತು ಎಂದರು.

ತಾಲೂಕಿನ ರೈತರಿಗೆ ಅನುಕೂಲ ಕಲ್ಪಿಸಲು ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗೆ ಸಂಪೂರ್ಣ ಅನುದಾನ ನೀಡಲಾಗಿದೆ. ತನ್ಮೂಲಕ ಜಾನುವಾರು, ಪ್ರಾಣಿ, ಪಕ್ಷಿಗಳಿಗೂ ಅನುಕೂಲ ಆಗಲಿದೆ. ಕಲ್ಲೊಡ್ಡು ಕುರಿತು ವಾಸ್ತವ ಮರೆಮಾಚುವ ಕೆಲಸ ಆಗುತ್ತಿದೆ, ರೈಲ್ವೆ ಇಲಾಖೆಯ ಹಲವು ಯೋಜನೆಗೆ ಮಂಜೂರು ನೀಡುವ ಮೂಲಕ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಲಾಗಿದೆ ಎಂದರು.

ಟಿಎಪಿಸಿಎಂಎಸ್‌ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಸಲು ಸಂಘ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದೆ, ಸಂಘದ ಆವರಣದಲ್ಲಿಪೆಟ್ರೋಲ್‌ ಬಂಕ್‌ ನಿರ್ಮಿಸುವ ಯೋಜನೆ ಇದ್ದು, ಶೀಘ್ರ ಕೆಲಸ ಆರಂಭಗೊಳ್ಳಲಿದೆ. ಪ್ರಸಕ್ತ ಸಾಲಿನಲ್ಲಿ2.93ಕೋಟಿ ರೂ. ಮೌಲ್ಯದ ರಸಗೊಬ್ಬರ ವಿತರಿಸಿ 6.32ಲಕ್ಷ ರೂ. ಲಾಭ ಪಡೆಯಲಾಗಿದೆ ಎಂದರು. ನಿರ್ದೇಶಕರಾದ ಜಯನಾಯ್ಕ, ಎಸ್‌.ಶಶಿಧರ್‌, ಬಿ.ಡಿ.

ಭೂಕಾಂತ್‌, ಅಗಡಿ ಅಶೋಕ್‌, ವೈ.ಆರ್‌.ಸುನಿತಾ, ಎಚ್‌.ಚನ್ನಪ್ಪ, ಬಿ.ಕೆ.ಗುರುರಾಜ್‌, ಕೆ.ಹಾಲಪ್ಪ, ಸುರೇಶಗೌಡ, ಅನ್ನಪೂರ್ಣಮ್ಮ, ಸದಸ್ಯರು ಇದ್ದರು.

**************************
ರೈತರಿಗೆ ಕೃಷಿ ಪರಿಕರ, ಮಾರುಕಟ್ಟೆ ಸೌಲಭ್ಯ, ಬಾಡಿಗೆ ಗೋದಾಮು ಸೌಕರ‍್ಯ ಸೇರಿ ಹಲವು ಅನುಕೂಲ ಕಲ್ಪಿಸುವುದಕ್ಕೆ ಸಂಘಕ್ಕೆ ಅವಕಾಶವಿದೆ.
ಈ ನಿಟ್ಟಿನಲ್ಲಿಸದಸ್ಯರು ಚಿಂತನೆ ನಡೆಸಬೇಕು.
-ಬಿ.ವೈ.ರಾಘವೇಂದ್ರ, ಸಂಸದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ