ಆ್ಯಪ್ನಗರ

ಹುಲಿ ದಾಳಿಗೆ ಹಸು ಬಲಿ

ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಚ್ಚಿಗೆಬೈಲಿನಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ.

Vijaya Karnataka Web 21 Mar 2019, 5:00 am
ಹೊಸನಗರ (ಶಿವಮೊಗ್ಗ) : ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಚ್ಚಿಗೆಬೈಲಿನಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ.
Vijaya Karnataka Web tiger attack ox death
ಹುಲಿ ದಾಳಿಗೆ ಹಸು ಬಲಿ


ಇಲ್ಲಿನ ದುರ್ಗಪ್ಪ ಎಂಬುವವರು ತಮ್ಮ ಹಸುವನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ದಾಳಿ ನಡೆಸಿದ ಹುಲಿ ಹಸುವನ್ನು ಕಾಡಿನ ನಡುವೆ ಎಳೆದುಕೊಂಡು ಹೋಗಿದೆ. ಹುಲಿ ಹಸುವಿನ ಕಳೇಬರವನ್ನು ಕಾಡಿನ ನಡುವೆ ಪೊದೆಯೊಂದರ ಪಕ್ಕದಲ್ಲಿ ಬಿಟ್ಟು ಹೋಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಹುಲಿಯ ಹೆಜ್ಜೆಯ ಗುರುತು ಮೂಡಿವೆ. ಅಲ್ಲದೇ ಹಸುವನ್ನು ಕಾಡಿನಲ್ಲಿ ಎಳೆದುಕೊಂಡು ಹೋಗಿರುವ ಗುರುತುಗಳನ್ನು ಗ್ರಾಮಸ್ಥರು ಗಮನಿಸಿದ್ದಾರೆ.

ಸ್ಥಳಕ್ಕೆ ಪಶುವೈದ್ಯರು, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ವಾರ ಇದೇ ಗ್ರಾಮದ ಕೆ.ಪಿ.ಕೃಷ್ಣಮೂರ್ತಿ ಎಂಬುವವರ ಹಸುವನ್ನು ಮೇಯಲು ಬಿಟ್ಟ ವೇಳೆ ಹುಲಿ ದಾಳಿ ನಡೆಸಿ, ಹಸು ಗಾಯಗೊಂಡಿತ್ತು. ನಾಗರಿಕ ಪ್ರದೇಶದ ಸಮೀಪದಲ್ಲಿಯೇ ಹುಲಿ ದಾಳಿ ನಡೆದಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಹುಲಿಯನ್ನು ಇಲ್ಲಿಂದ ಸ್ಥಳಾಂತರಗೊಳಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ