ಆ್ಯಪ್ನಗರ

ಸಕಾಲಕ್ಕೆ ಸರ್ವೆ ಇಲಾಖೆ ಹೊರಗುತ್ತಿಗೆ ನೌಕರರ ಆಗ್ರಹ

ಸಕಾಲಕ್ಕೆ ವೇತನ ನೀಡುವಂತೆ ಒತ್ತಾಯಿಸಿ ಭೂಮಾಪನಾ ಇಲಾಖೆ ಸರ್ವೇಬಾಂದ್‌ ಜವಾನರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

Vijaya Karnataka 24 Jul 2019, 5:00 am
ಶಿವಮೊಗ್ಗ : ಸಕಾಲಕ್ಕೆ ವೇತನ ನೀಡುವಂತೆ ಒತ್ತಾಯಿಸಿ ಭೂಮಾಪನಾ ಇಲಾಖೆ ಸರ್ವೇಬಾಂದ್‌ ಜವಾನರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
Vijaya Karnataka Web SMR-23GANESH3-1


ಭೂಮಾಪನಾ ಇಲಾಖೆಯಿಂದ ಹೊರಗುತ್ತಿಗೆ ಆಧಾರದ ಮೇಲೆ ಸರ್ವೇಬಾಂದ್‌ ಜವಾನರ ನೌಕರರಾಗಿ ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಸೇವೆಗೆ ಹಾಜರಾಗಿ ಹಲವು ತಿಂಗಳುಗಳಿಂದ ವೇತನ ನೀಡಿಲ್ಲ. ಹೀಗಾಗಿ ಜೀವನ ಸಾಗಿಸುವುದೇ ಕಷ್ಟವಾಗಿದೆ ಪ್ರತಿಭಟನಾಕಾರರು ದೂರಿದರು.

ಸರ್ವೇಬಾಂದ್‌ ಜವಾನರಿಗೆ ಪ್ರತಿ ತಿಂಗಳು ನೀಡುತ್ತಿರುವ 9,220 ರೂ.ವೇತನದಿಂದ ಜೀವನ ಮಾಡುವುದೇ ಕಷ್ಟವಾಗಿದೆ. ಅದರಲ್ಲೂ ನಿಗದಿತ ವೇಳೆಗೆ ವೇತನ ಇಲ್ಲದೇ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಕೆಲವರಿಗೆ 16 ತಿಂಗಳಿಂದ ಸಂಬಳವಿಲ್ಲ. ಕೆಲವರಿಗೆ 5 ತಿಂಗಳಿಂದ ವೇತನವಿಲ್ಲ. ಪ್ರತಿದಿನ ನಮ್ಮ ಖರ್ಚಿಗೆ ಹಣ ಹೊಂದಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ಆದ್ದರಿಂದ ತಕ್ಷಣವೇ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ರವಿಕುಮಾರ್‌, ಸುರೇಶ್‌,ಅಶೋಕ್‌, ರಾಕೇಶ್‌, ಅವಿನಾಶ್‌, ಗೋಪಾಲ್‌, ಪ್ರಭು, ಪ್ರವೀಣ್‌, ರಾಘವೇಂದ್ರ, ವಸಂತ್‌ ರಾವ್‌, ಕುಮಾರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ