ಆ್ಯಪ್ನಗರ

ಇಂದಿನಿಂದ ಮೂರು ದಿನ ಹೊಸಗುಂದ ಉತ್ಸವ

ಹೊಸಗುಂದದ ಇತಿಹಾಸ ಪ್ರಸಿದ್ಧ ಶ್ರೀಉಮಾಮಹೇಶ್ವರ ದೇವಾ ಲಯ ಆವರಣದಲ್ಲಿನ.16ರಿಂದ 18ರ ವರೆಗೆ ನಡೆಯುವ ಹಂಪಿ ಉತ್ಸವ ಮಾದರಿಯಲ್ಲಿಹೊಸಗುಂದ ಉತ್ಸವಕ್ಕೆ ಹಲವು ಬಗೆಯ ಸಿದ್ಧತಾ ಕಾರ್ಯಗಳು ಬಿರುಸಿನಿಂದ ಸಾಗಿವೆ.

Vijaya Karnataka 16 Nov 2019, 5:00 am
ಆನಂದಪುರಂ: ಹೊಸಗುಂದದ ಇತಿಹಾಸ ಪ್ರಸಿದ್ಧ ಶ್ರೀಉಮಾಮಹೇಶ್ವರ ದೇವಾ ಲಯ ಆವರಣದಲ್ಲಿನ.16ರಿಂದ 18ರ ವರೆಗೆ ನಡೆಯುವ ಹಂಪಿ ಉತ್ಸವ ಮಾದರಿಯಲ್ಲಿಹೊಸಗುಂದ ಉತ್ಸವಕ್ಕೆ ಹಲವು ಬಗೆಯ ಸಿದ್ಧತಾ ಕಾರ್ಯಗಳು ಬಿರುಸಿನಿಂದ ಸಾಗಿವೆ.
Vijaya Karnataka Web WHATSAPP IMAGE 2019-11-15 AT 81201 PM082917

ನ.18ರಂದು ಸಂಜೆ ಇದೇ ಮೊದಲ ಬಾರಿಗೆ ಲಕ್ಷ ದೀಪೋತ್ಸವ ನಡೆಯಲಿದೆ. ಸ್ಥಳೀಯ ಗ್ರಾಮಸ್ಥರು, ಭಕ್ತರು ಉತ್ಸವದ ಸಿದ್ಧತಾ ಕಾರ್ಯದಲ್ಲಿತೊಡಗಿ ಕೊಂಡಿದ್ದಾರೆ. ಶ್ರೀಉಮಾಮಹೇಶ್ವರ ದೇವಾಲಯದ ಎಡ ಭಾಗ ದಲ್ಲಿರುವ ಶ್ರೀಲಕ್ಷಿತ್ರ್ಮೕ ಗಣಪತಿ ದೇವಾ ಲಯಕ್ಕೆ ಅಭಿಮುಖವಾಗಿ ಹೆಡ್ತ್ರಿ ಬಸವರಾಜ ಗೌಡರ ಬ್ಯಾಣದ ಅಂಚಿನಲ್ಲಿಮುಖ್ಯ ವೇದಿಕೆ ನಿರ್ಮಿಸಲಾಗಿದೆ.
ಉಮಾಮಹೇಶ್ವರ,ಮಹಿಷಮರ್ಧಿ ನಿ,ವೀರಭದ್ರ, ಲಕ್ಷಿತ್ರ್ಮೕಗಣಪತಿ ದೇವಾಲಯ ಹಾಗೂ ದೇವರ ಕಾಡಿಗೆ ಅಭಿಮುಖ ವಾಗಿರುವ ಈ ವೇದಿಕೆಯನ್ನು ಸಾಕಷ್ಟು ವಿಶಾಲವಾಗಿ ನಿರ್ಮಿಸಲಾಗಿದೆ.
ಗೋಶಾಲೆ ಬಲಭಾಗದಲ್ಲಿಭೋಜನಾಲಯ, ಮುಖ್ಯ ವೇದಿಕೆ ಹಿಂಭಾಗದ ಕೆಳಗಿನ ಬ್ಯಾಣದಲ್ಲಿವ್ಯಾಪಾರ ವಹಿವಾಟು ಸ್ಟಾಲ್‌ಗಳು ತಲೆ ಎತ್ತಿವೆ. ಹೊಸಗುಂದದ ಮುಖ್ಯ ದ್ವಾರದಿಂದ ದೇವಾಲಯದ ವರೆಗೆ, ಉಮಾಮಹೇಶ್ವರ ದೇವಾಲಯದಿಂದ ಶ್ರೀಕಂಚಿಕಾಳಮ್ಮ ದೇಗುಲ ದವರೆಗೆ ರಸ್ತೆಯ ಇಕ್ಕೆಲಗಳಿಗೆ ವಿದ್ಯುತ್‌ ದೀಪಾ ಲಂಕಾರ, ಗೋಪುರ ದವರೆಗೆ, ಪುಷ್ಕ ರಣಿಯ ಸುತ್ತ ಹಾಗೂ ಅದಕ್ಕೆ ಹೊಂದಿ ಕೊಂಡಿರುವ ಧರೆಗೂ ಸಹ ವಿಶೇಷ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.
ಮುಖ್ಯ ಪ್ರವೇಶದ್ವಾರದ ಸಮೀಪ ವಾಹನಗಳ ಪಾರ್ಕಿ ಂಗ್‌ ವ್ಯವಸ್ಥೆ, ಆಗಮಿಸಿದವರಿಗೆಲ್ಲಶುದ್ಧ ಕುಡಿ ಯುವ ನೀರಿ ನ ವ್ಯವಸ್ಥೆ, ಎಲ್ಲದೇವರ ಆಲಯ ದಲ್ಲೂದಿನವಿಡೀ ದರ್ಶನ ಮತ್ತು ಪ್ರಸಾದ ವಿತರಣೆ, ಸಭಾ ಕಾರ್ಯಕ್ರಮ ವೀಕ್ಷಣೆಗೆ ಆಸನ ವ್ಯವಸ್ಥೆ, ಮಧ್ಯಾಹ್ನ ಮತ್ತು ರಾತ್ರಿ ಭೋಜನ ವ್ಯವಸ್ಥೆಗೆ ಸಿದ್ಧತೆ ಪೂರ್ಣಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ