ಆ್ಯಪ್ನಗರ

ಕನ್ನಡ ಪುಸ್ತಕಗಳು ಇಂಗ್ಲಿಷ್‌ಗೆ ಭಾಷಾಂತರವಾಗಲಿ

ಆಂಗ್ಲ ಸಾಹಿತ್ಯ ಅಧ್ಯಯನ ಬ್ರಿಟಿಷ್‌ ಸಾಹಿತ್ಯವಲ್ಲ, ಅದು ಜಗತ್ತಿನ ಶ್ರೇಷ್ಠವಾದ ಎಲ್ಲ ಭಾಷೆಯ ಸಾಹಿತ್ಯಗಳ ಅಧ್ಯಯನ ಎಂದು ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.

Vijaya Karnataka 18 May 2019, 5:00 am
ಶಿವಮೊಗ್ಗ: ಆಂಗ್ಲ ಸಾಹಿತ್ಯ ಅಧ್ಯಯನ ಬ್ರಿಟಿಷ್‌ ಸಾಹಿತ್ಯವಲ್ಲ, ಅದು ಜಗತ್ತಿನ ಶ್ರೇಷ್ಠವಾದ ಎಲ್ಲ ಭಾಷೆಯ ಸಾಹಿತ್ಯಗಳ ಅಧ್ಯಯನ ಎಂದು ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.
Vijaya Karnataka Web SMR-17GANESH2


ನಗರದ ಕಟೀಲ್‌ ಅಶೋಕ್‌ ಪೈ ಸ್ಮಾರಕ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರೊಂದಿಗೆ ಆಪ್ತಸಮಾಲೋಚನಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆ ಜ್ಞಾನ ಅನಿವಾರ್ಯ. ಭಾಷೆಯ ಜ್ಞಾನದ ಕೊರತೆಯಿಂದ ಆನೇಕರು ಉತ್ತಮ ಅವಕಾಶದಿಂದ ವಂಚಿತರಾಗಿದ್ದಾರೆ. ಇಂಗ್ಲಿಷನ್ನು ಪ್ರತಿಯೊಬ್ಬರು ಕಲಿಯಬೇಕು. ಆದರೆ, ಕನ್ನಡಕ್ಕೆ ಎಲ್ಲಿಯೂ ಧಕ್ಕೆಯಾಗದಂತೆ ಹಾಗೂ ಪಾಶ್ಚ್ಚಾತ್ಯ ಸಂಸ್ಕೃತಿಗೆ ಮಾರೂ ಹೋಗದೆ ಮಾತೃ ಭಾಷೆ ಉಳಿಸಿಕೊಳ್ಳಬೇಕಿದೆ ಎಂದರು.

ಕನ್ನಡದ ಎಷ್ಟೋ ಮಹಾನ್‌ ಪುಸ್ತಕಗಳು ಇಂಗ್ಲಿಷ್‌ಗೆ ಭಾಷಾಂತರವಾಗಬೇಕಿದೆ. ಇದು ಇಂಗ್ಲಿಷ್‌ ಸಾಹಿತ್ಯ ಅಧ್ಯಯನದಿಂದ ಮಾತ್ರ ಸಾಧ್ಯವಿದೆ. ಇಂದು ಇಂಗ್ಲಿಷ್‌ ಸಾಹಿತ್ಯ ಅಧ್ಯಯನದಿಂದ ಶಿಕ್ಷ ಕನಾಗುವುದಷ್ಟೇ ಅಲ್ಲ, ಭಾಷಾಂತರಗಾರರಿಗೆ ಹೇರಳವಾದ ಅವಕಾಶಗಳು ಮುಕ್ತವಾಗಿದೆ ಎಂದರು.

ಬೆಳ್ತಂಗಡಿ ಯುನಿಕ್‌ ಎಜು ಸ್ಕಿಲ್ಸ್‌ ಕಾಲೇಜು ನಿರ್ದೇಶಕ ಫಾ.ಸಲೀನ್‌ ಮಾತನಾಡಿ, ಮನಃಶಾಸ್ತ್ರ, ಸಮಾಜಕಾರ್ಯ, ಪತ್ರಿಕೋದ್ಯಮ, ಇಂಗ್ಲಿಷ್‌ ಸಾಹಿತ್ಯ ಅಧ್ಯಯನಕ್ಕೆ ಕಟೀಲ್‌ ಅಶೋಕ್‌ ಪೈ ಕಾಲೇಜು ಪೂರಕವಾಗಿದೆ. ಬೀಜ ಮೊಳಕೆಯೊಡೆದು ಉತ್ತಮ ಗಿಡವಾಗಲು ದೊರಕುವ ಭೂಮಿ ಫಲವತ್ತತೆ ಹಾಗೂ ಪರಿಣಿತ ಕೃಷಿಕ ಎಷ್ಟು ಮುಖ್ಯವೋ ಉನ್ನತ ವ್ಯಾಸಂಗಕ್ಕೆ ದೊರಕುವ ಕಾಲೇಜಿನ ವಾತಾವರಣವೂ ಅಷ್ಟೇ ಮುಖ್ಯ ಎಂದರು.

ಕಾಲೇಜು ಪ್ರಾಚಾರ್ಯೆ ಡಾ. ಕೆ.ಸಂಧ್ಯಾ ಕಾವೇರಿ ಅಧ್ಯಕ್ಷ ತೆ ವಹಿಸಿದ್ದರು. ಡಾ.ಎ.ಪೈ.ರಜನಿ, ಮುಕುಂದ ಪೈ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ