ಆ್ಯಪ್ನಗರ

ಮಳೆ,ಗಾಳಿಗೆ ದೇಗುಲ ಮೇಲೆ ಬಿದ್ದ ಮರ

ಸುತ್ತಮುತ್ತಲ ವ್ಯಾಪ್ತಿಯಲ್ಲಿಗುರುವಾರ ಮಳೆ ಜತೆಗೆ ಗಾಳಿ ಬೀಸಿದ ಕಾರಣ ಕೆಲವೆಡೆ ಮರಗಳು ಬಿದ್ದ ಘಟನೆ ನಡೆದಿದೆ. ಯಡೇಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಸವನಹೊಂಡದ ಭಂಗೀಭೂತಪ್ಪನ ದೇಗುಲ ಕಟ್ಟಡದ ಮೇಲೆ ಆಲದ ಮರ ಉರುಳಿ ಬಿದ್ದು ಕಟ್ಟಡ ಭಾಗಶಃ ಜಖಂ ಆಗಿದೆ.

Vijaya Karnataka 7 Sep 2019, 5:00 am
ಆನಂದಪುರಂ: ಸುತ್ತಮುತ್ತಲ ವ್ಯಾಪ್ತಿಯಲ್ಲಿಗುರುವಾರ ಮಳೆ ಜತೆಗೆ ಗಾಳಿ ಬೀಸಿದ ಕಾರಣ ಕೆಲವೆಡೆ ಮರಗಳು ಬಿದ್ದ ಘಟನೆ ನಡೆದಿದೆ. ಯಡೇಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಬಸವನಹೊಂಡದ ಭಂಗೀಭೂತಪ್ಪನ ದೇಗುಲ ಕಟ್ಟಡದ ಮೇಲೆ ಆಲದ ಮರ ಉರುಳಿ ಬಿದ್ದು ಕಟ್ಟಡ ಭಾಗಶಃ ಜಖಂ ಆಗಿದೆ.
Vijaya Karnataka Web tree that fell on the shrine for rain and wind
ಮಳೆ,ಗಾಳಿಗೆ ದೇಗುಲ ಮೇಲೆ ಬಿದ್ದ ಮರ

ಯಡೇಹಳ್ಳಿಯ ರಾಷ್ಟ್ರೀಯ ಹೆದ್ದಾರಿ 206ರಿಂದ ಹೊಸನಗರ ಸಂಪರ್ಕಿಸುವ ರಸ್ತೆಯಲ್ಲಿಸುಮಾರು 1.5 ಕಿ.ಮೀ ದೂರದಲ್ಲಿಭಂಗೀ ಭೂತಪ್ಪನ ದೇವಾಲಯವಿದೆ. ಚಿಕ್ಕ ಗುಡಿಯಂತಿದ್ದ ಈ ದೇವಾಲಯ ಜೀರ್ಣೋದ್ಧಾರಗೊಳಿಸಿ 2005 ರ ಸುಮಾರಿನಲ್ಲಿಆಕರ್ಷಕ ಕಟ್ಟಡ ನಿರ್ಮಿಸಲಾಗಿತ್ತು. ದೇವರ ಗುಡಿಗೆ ಹೊಂದಿಕೊಂಡಂತೆ ದೊಡ್ಡ ಆಲದ ಮರವಿತ್ತು. ಮರದಲ್ಲಿಯಕ್ಷ ದೇವತೆ ಇತ್ಯಾದಿ ಪರಿವಾರ ದೇವರ ಆವಾಸ ಇರುವುದರಿಂದ ಮರ ಕಡಿಯದಂತೆ ಅಷ್ಟಮಂಗಳ ಪ್ರಶ್ನಾ ಚಿಂತನದಲ್ಲಿವ್ಯಕ್ತವಾಗಿತ್ತು. ಇದರಿಂದ ದೇವಾಲಯ ಸಮಿತಿಯವರು ಮರವನ್ನು ಯಥಾ ಸ್ಥಿತಿಯಲ್ಲಿಉಳಿಸಿಕೊಂಡಿದ್ದರು. ಹೆದ್ದಾರಿಗೆ ಹೊಂದಿಕೊಂಡಂತೆ ದೇವರ ಆಲಯ ಮತ್ತು ಮರವಿತ್ತು. ಈ ದೇವರಿಗೆ ಬೀಡಿ, ಸಿಗರೇಟು, ತಂಬಾಕು, ಭಂಗೀ ಇತ್ಯಾದಿ ಮಾದಕ ಪದಾರ್ಥವನ್ನು ಹರಕೆಯಾಗಿ ಸಮರ್ಪಿಸವ ಪದ್ಧತಿಯಿದೆ. ಇದರಿಂದಾಗಿ ಈ ದೇವಾಲಯಕ್ಕೆ ಭಂಗೀಭೂತಪ್ಪನ ದೇವಾಲಯ ಎಂಬ ಹೆಸರಿದೆ. ಈ ರಸ್ತೆಯಲ್ಲಿಸಂಚರಿಸುವ ವಾಹನ ಚಾಲಕರು ಇಲ್ಲಿನಿಲ್ಲಿಸಿ ಬೀಡಿ ಅರ್ಪಿಸಿ ಮುಂದಕ್ಕೆ ತೆರಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ