ಆ್ಯಪ್ನಗರ

ಆಗುಂಬೆಗಿಂತ ಉಡುಪಿಯಲ್ಲಿ ದಾಖಲೆಯ ಮಳೆ! ಜಾಗತಿಕ ತಾಪಮಾನದ ಪರಿಣಾಮ!

ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಹೆಸರಾಗಿದ್ದ ಶಿವಮೊಗ್ಗ ಜಿಲ್ಲೆತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಈ ಪಟ್ಟವನ್ನು ಉಡುಪಿ ಆಕ್ರಮಿಸಿಕೊಂಡಿದೆ. ಈಗ 'ಕೃಷ್ಣನಗರಿ' ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ.

Vijaya Karnataka Web 16 Jun 2022, 10:05 pm
ಶಿವಮೊಗ್ಗ : ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಹೆಸರಾಗಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಈ ಪಟ್ಟವನ್ನು ಉಡುಪಿ ಆಕ್ರಮಿಸಿಕೊಂಡಿದೆ. ಈಗ 'ಕೃಷ್ಣನಗರಿ' ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕೆಎಸ್‌ಡಿಎಂಎ) ಪ್ರಕಾರ 2015 ಮತ್ತು 2021ರ ನಡುವಿನ ಏಳು ವರ್ಷಗಳಲ್ಲಿ 5 ಬಾರಿ ಉಡುಪಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹೆಚ್ಚು ಮಳೆ ದಾಖಲಾಗಿದೆ.
Vijaya Karnataka Web agumbe


ಅಂಕಿ-ಅಂಶಗಳ ಪ್ರಕಾರ ಉಡುಪಿ ಜಿಲ್ಲೆಯ ಬೈರಂಪಳ್ಳಿಯಲ್ಲಿ 2016ರಲ್ಲಿ ಅತಿ ಹೆಚ್ಚು ಅಂದರೆ 5,916 ಮಿ. ಮೀ. ಮಳೆ ಪಾತವಾಗಿತ್ತು. 2017ರಲ್ಲಿ ಕಾರ್ಕಳ ತಾಲೂಕಿನ ಶಿರಾಳುವಿನಲ್ಲಿ 6,936 ಮಿ. ಮೀ. ಮಳೆ ಬಿದ್ದಿತು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 2016ರಲ್ಲಿ 5,524 ಮಿ.ಮೀ. ಮತ್ತು 2017ರಲ್ಲಿ 5,345 ಮಿ.ಮೀ. ಮಳೆಯೊಂದಿಗೆ ಅಗ್ರಸ್ಥಾನ ಪಡೆದಿತ್ತು. 2019ರಲ್ಲಿ ಉಡುಪಿಯ ಹೆಬ್ರಿ 9,340 ಮಿ. ಮೀ. ಮಳೆಯೊಂದಿಗೆ ಮೊದಲ ಸ್ಥಾನದಲ್ಲಿತ್ತು.

ಶಿವಮೊಗ್ಗದಲ್ಲಿ ಭಾರಿ ಮಳೆಗೆ 40 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ, ಹೆಚ್ಚುವರಿ ಪರಿಹಾರಕ್ಕೆ ಸಿಎಂಗೆ ಮನವಿ: ನಾರಾಯಣ ಗೌಡ

2020ರಲ್ಲಿ ಉಡುಪಿಯ ಇನ್ನಂಜೆಯಲ್ಲಿ 7,988 ಮಿ. ಮೀ. ಮಳೆಯಾಗಿ ಮೊದಲ ಸ್ಥಾನ ಗಳಿಸಿತ್ತು. ಈ ವರ್ಷಗಳಲ್ಲೂ ಆಗುಂಬೆಯಲ್ಲಿ ಬಿದ್ದ ಮಳೆ ಪ್ರಮಾಣ ಕಡಿಮೆಯಾಗಿತ್ತು. ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅರಣ್ಯ ನಾಶ ಮತ್ತು ಏಕ ಕೃಷಿ ತೋಟಗಳು ಹವಾಮಾನ ಬದಲಾವಣೆಗೆ ಪ್ರಮುಖ ಕಾರಣವಾಗಿದೆ. ಅರಣ್ಯನಾಶ, ಜಾಗತಿಕ ತಾಪಮಾನ ಮತ್ತು ಇಂಗಾಲ ಹೊರಸೂಸುವಿಕೆ ಹೆಚ್ಚಳದಂಥ ಅಂಶಗಳು ಇಂದಿನ ಪರಿಸ್ಥಿತಿಗೆ ಕಾರಣಗಳಾಗಿದೆ. ಕಳೆದ ವರ್ಷದಿಂದ ಮಳೆ ಋುತುಗಳಲ್ಲಿ ಹೆಚ್ಚು ಕಡಿಮೆಯಾಗಿದೆ.

ರಾಜ್ಯದಲ್ಲಿ ಭಾರೀ ಮಳೆ ಸಂಭವ : ಹಲವು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್‌ ಘೋಷಣೆ

ಇದು ಪರಿಸರ ಸಮತೋಲನದ ವೈಪರೀತ್ಯದ ಪರಿಣಾಮ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಟಿ. ವಿ. ರಾಮಚಂದ್ರ ಅಭಿಪ್ರಾಯಪಡುತ್ತಾರೆ. ಅರಣ್ಯ ರಕ್ಷಣೆ, ಒತ್ತುವರಿಗೆ ಕಡಿವಾಣ, ನಗರೀಕರಣದ ವ್ಯಾಪಕತೆಯನ್ನು ಕಡಿಮೆ ಮಾಡುವುದರಿಂದ ಮಳೆ ಋುತುವಿನ ಏರಿಳಿತಗಳನ್ನು ಕಡಿಮೆ ಮಾಡಬಹುದು ಎಂಬುದು ಅವರ ಅಭಿಮತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ