ಆ್ಯಪ್ನಗರ

‘ರೈತರಿಗೆ ಉದ್ಯೋಗ ಖಾತ್ರಿ ವರದಾನ ’

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ರೈತರಿಗೆ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿಕೊಳ್ಳಲು ವರದಾನವಾಗಿದೆ ಎಂದು ಯಡೇಹಳ್ಳಿ ಗ್ರಾ.ಪಂ.ಸದಸ್ಯ ಶೌಕತ್‌ ಅಲಿ ತಿಳಿಸಿದರು.

Vijaya Karnataka 24 Dec 2018, 5:00 am
ಆನಂದಪುರಂ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ರೈತರಿಗೆ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿಕೊಳ್ಳಲು ವರದಾನವಾಗಿದೆ ಎಂದು ಯಡೇಹಳ್ಳಿ ಗ್ರಾ.ಪಂ.ಸದಸ್ಯ ಶೌಕತ್‌ ಅಲಿ ತಿಳಿಸಿದರು.
Vijaya Karnataka Web SMR-22ANPP2


ಅವರು ಬುಧವಾರ ಯಡೇಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕೆಂಜಗಾಪುರ ದೇವಾಲಯ ರಸ್ತೆಯಲ್ಲಿರುವ ಹೊಟ್ಟಿನಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಈ ಕಾಮಗಾರಿಗೆ ಸುಮಾರು 4ಲಕ್ಷ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗಿದೆ. ಈ ಕೆರೆ ಹೂಳೆತ್ತಿ ಅಭಿವೃದ್ಧಿ ಪಡಿಸುವುದರಿಂದ ಈ ಭಾಗದ ರೈತರ ಸುಮಾರು 25 ಏಕರೆಗೂ ಅಧಿಕ ಭೂಮಿಗೆ ನೀರಾವರಿ ಸೌಲಭ್ಯ ದೊರೆಯುತ್ತದೆ. ಅಲ್ಲದೇ ಕೆರೆಯಲ್ಲಿ ನೀರು ತುಂಬಿಕೊಂಡರೆ ಸುತ್ತ-ಮುತ್ತಲ ಭಾಗದ ತೆರೆದ ಬಾವಿಗಳ ಅಂತರ್ಜಲ ವೃದ್ಧಿಯಾಗುತ್ತದೆ. ಈ ಕಾಮಗಾರಿಗೆ ನಿತ್ಯ 25 ರಿಂದ 30 ಜನರು ಕೂಲಿ ನಿರ್ವಹಿಸಲಿದ್ದಾರೆ ಎಂದರು. ಯಡೇಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಉಮೇಶ್‌, ಜಿ.ಪಂ.ಎಂಜಿನಿಯರ್‌ ಅರ್ಜುನ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ