ಆ್ಯಪ್ನಗರ

ಗಂಗಾಮತ ಸಮಾಜಕ್ಕೆ ಟಿಕೇಟ್‌ಗೆ ಆಗ್ರಹ

ಲೋಕಸಭಾ ಚುನಾವಣೆಯಲ್ಲಿ ಗಂಗಾಮತ, ಕೋಲಿ, ಮೊಗವೀರ ಸಮಾಜದ ಪ್ರಮುಖರಿಗೆ ರಾಜಕೀಯ ಪಕ್ಷ ಗಳು ಟಿಕೇಟ್‌ ನೀಡಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂದು ಕರ್ನಾಟಕ ವಿಕಾಸಸಭಾ ಸಂಘಟನಾ ಸೇವಾ ಸೈನಿಕರು ಸಂಘಟನೆಯ ರಾಜ್ಯ ಪ್ರಮುಖ ಬಿ.ಡಿ.ರವಿಕುಮಾರ್‌ ಒತ್ತಾಯಿಸಿದ್ದಾರೆ.

Vijaya Karnataka 12 Mar 2019, 5:00 am
ಸಾಗರ : ಲೋಕಸಭಾ ಚುನಾವಣೆಯಲ್ಲಿ ಗಂಗಾಮತ, ಕೋಲಿ, ಮೊಗವೀರ ಸಮಾಜದ ಪ್ರಮುಖರಿಗೆ ರಾಜಕೀಯ ಪಕ್ಷ ಗಳು ಟಿಕೇಟ್‌ ನೀಡಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂದು ಕರ್ನಾಟಕ ವಿಕಾಸಸಭಾ ಸಂಘಟನಾ ಸೇವಾ ಸೈನಿಕರು ಸಂಘಟನೆಯ ರಾಜ್ಯ ಪ್ರಮುಖ ಬಿ.ಡಿ.ರವಿಕುಮಾರ್‌ ಒತ್ತಾಯಿಸಿದ್ದಾರೆ.
Vijaya Karnataka Web urging for mp ticket to gangamatha
ಗಂಗಾಮತ ಸಮಾಜಕ್ಕೆ ಟಿಕೇಟ್‌ಗೆ ಆಗ್ರಹ


ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 39 ಉಪಜಾತಿಗಳನ್ನು ಒಳಗೊಂಡ ಗಂಗಾಮತ ಸಮಾಜವನ್ನು ಎಲ್ಲ ರಾಜಕೀಯ ಪಕ್ಷ ಗಳು ಮತಬ್ಯಾಂಕ್‌ ಆಗಿ ಮಾತ್ರ ಬಳಸಿಕೊಳ್ಳುತ್ತಲಿವೆ. ರಾಜಕೀಯ ಸ್ಥಾನಮಾನ ಕೊಡುವ ಸಂದರ್ಭ ನಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ದೂರಿದರು.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ನಮ್ಮ ಜನಾಂಗದ ಮುಖಂಡರಾದ ಯಸ್ಪಾಲ್‌ ಸುವರ್ಣ ಅವರು ಅನೇಕ ವರ್ಷಗಳಿಂದ ಬಿಜೆಪಿ ಸಂಘಟಿಸುವ ಕೆಲಸ ಮಾಡುತ್ತಿದ್ದು, ಪಕ್ಷ ವಹಿಸಿದ ಬೇರೆಬೇರೆ ಜವಾಬ್ದಾರಿಗಳನ್ನು ಮುತುವರ್ಜಿಯಿಂದ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಇರುವುದರಿಂದ ಅವರು ಮೈತ್ರಿ ಪಕ್ಷ ದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯಸ್ಪಾಲ್‌ ಸುವರ್ಣ ಅವರಿಗೆ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಗಂಗಾಮತ ಸಮಾಜ ಬಾಂಧವರಿಗೆ ಈತನಕ ಯಾವುದೇ ಪಕ್ಷ ಗಳು ಸಾಮಾಜಿಕ ನ್ಯಾಯ ಕಲ್ಪಿಸಿಲ್ಲ. ನಿಗಮ ಮಂಡಳಿ ಸ್ಥಾಪಿಸಿದರೂ ನಮಗೆ ಕೊಡುವ ಅನುದಾನ ತೀರ ಕಡಿಮೆ ಇರುತ್ತದೆ. ನಿಗಮ ಮಂಡಳಿಗಳಿಗೆ ಆಯ್ಕೆ ಮಾಡುವ ಸಂದರ್ಭ ನಮ್ಮನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂದು ಹಿಂದಿನಿಂದಲೂ ಹೋರಾಟ ನಡೆದಿದೆ. ಅದರೆ ಈತನಕ ನಮ್ಮ ಬೇಡಿಕೆ ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಕಾಸ ಸಭಾ ಸಂಘಟನಾ ರಾಜ್ಯಾದ್ಯಂತ ಸಮುದಾಯವನ್ನು ಸಂಘಟಿಸುವ ಜತೆಗೆ ಅಗತ್ಯ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಸೇರಿದಂತೆ ಅನೇಕ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.

ಸೊರಬ ತಾಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ, ಹೊಸನಗರ ತಾಲೂಕು ಗಂಗಾಮತಸ್ಥ ಸಮಾಜದ ಮುಖಂಡ ಮಂಜುನಾಥ ಬ್ಯಾಣದ್‌, ವೆಂಕಟೇಶ್‌ ಚಂದಳ್ಳಿ ಆನಂದಪುರಂ ಇದ್ದರು.


ಗುಲ್ಬರ್ಗ, ಉಡುಪಿ, ಮಂಗಳೂರು, ವಿಜಯಪುರ, ಹಾವೇರಿ, ಮಂಡ್ಯ, ಯಾದಗಿರಿ, ರಾಯಚೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಂಗಾಮತಸ್ಥ ಸಮಾಜ ಬಾಂಧವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ನಮ್ಮ ಜನಾಂಗ ಬಾಂಧವರದ್ದು ಸುಮಾರು 3ಲಕ್ಷ ಮತಗಳಿವೆ. ಆದರೆ ಚುನಾವಣೆ ಸಂದರ್ಭ ಟಿಕೇಟ್‌ ನೀಡಲು ಯಾವುದೆ ರಾಜಕೀಯ ಪಕ್ಷ ಗಳು ಆಸಕ್ತಿ ತೋರಿಸುತ್ತಿಲ್ಲ. ಇದರಿಂದ ಗಂಗಾಮತ, ಕೋಲಿ, ಮೊಗವೀರ ಸೇರಿದಂತೆ 39 ಉಪ ಜಾತಿಗಳನ್ನು ಹೊಂದಿರುವ ನಮ್ಮ ಸಮುದಾಯ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವಂತೆ ಆಗಿದೆ. ಮೀಸಲು ಕ್ಷೇತ್ರ ಹೊರತುಪಡಿಸಿ ನಮ್ಮ ಜನಾಂಗ ಬಾಂಧವರು ಹೆಚ್ಚು ಇರುವ ಕಡೆ ನಮ್ಮವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು.

-ಬಿ.ಡಿ.ರವಿಕುಮಾರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ