ಆ್ಯಪ್ನಗರ

ಸುಧಾರಿತ ರೋಗ ನಿಯಂತ್ರಕ ಔಷಧ ಬಳಸಿ

ಅಡಕೆ ಮರದ ಬುಡಕ್ಕೆ ಮಾತ್ರೆಗಳನ್ನು ಹಾಕಿ ರೋಗ ಬರದಂತೆ ಅಡಕೆ ಬೆಳೆಯ ಕೊಳೆರೋಗ ನಿಯಂತ್ರಣಕ್ಕೆ ಹೊಸ ಆವಿಷ್ಕಾರ ನಡೆಯುತ್ತಿದೆ. 2ವರ್ಷದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಅಡಕೆ ಕೃಷಿ ಸಂಶೋಧನಾ ಕೇಂದ್ರ ವಿಜ್ಞಾನಿ ಡಾ.ಎಚ್‌.ನಾರಾಯಣಸ್ವಾಮಿ ಹೇಳಿದರು.

Vijaya Karnataka 4 Jul 2019, 5:00 am
ತ್ಯಾಗರ್ತಿ: ಅಡಕೆ ಮರದ ಬುಡಕ್ಕೆ ಮಾತ್ರೆಗಳನ್ನು ಹಾಕಿ ರೋಗ ಬರದಂತೆ ಅಡಕೆ ಬೆಳೆಯ ಕೊಳೆರೋಗ ನಿಯಂತ್ರಣಕ್ಕೆ ಹೊಸ ಆವಿಷ್ಕಾರ ನಡೆಯುತ್ತಿದೆ. 2ವರ್ಷದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಅಡಕೆ ಕೃಷಿ ಸಂಶೋಧನಾ ಕೇಂದ್ರ ವಿಜ್ಞಾನಿ ಡಾ.ಎಚ್‌.ನಾರಾಯಣಸ್ವಾಮಿ ಹೇಳಿದರು.
Vijaya Karnataka Web SMR-3tgt1


ಸಾಗರ ತಾಲೂಕು ಉಳ್ಳೂರಿನ ಸಿಗಂದೂರೇಶ್ವರಿ ಎಜುಕೇಶನಲ್‌ ಟ್ರಸ್ಟ್‌, ಸಾಗರಗಂಗೋತ್ರಿ ಶಿಕ್ಷ ಣ ಮಹಾವಿದ್ಯಾಲಯ ಹಾಗೂ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ ನವಿಲೆ ಸಹಯೋಗದಲ್ಲಿ ಅಡಕೆ ಕೃಷಿ ಮತ್ತು ಸಂರಕ್ಷ ಣೆ ಕುರಿತು ಮಂಗಳವಾರ ವಿಶೇಷ ಉಪನ್ಯಾಸ ನೀಡಿದರು. ಅಡಕೆ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಸಾಂಪ್ರದಾಯಿಕ ಬೆಳೆಯಾಗಿದೆ. ಮಳೆಗಾಲದಲ್ಲಿ ಕೊಳೆರೋಗದಿಂದ ಅಡಕೆಗೆ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಸುಧಾರಿತ ರೋಗನಿಯಂತ್ರಕ ಔಷಧ ಬಳಸಬೇಕು. ಸೂಕ್ತ ತಳಿ ಆಯ್ಕೆಮಾಡಿಕೊಂಡು ತೋಟ ನಿರ್ಮಿಸಬೇಕೆಂದರು.

ರಾಜ್ಯದಲ್ಲಿ ಅನೇಕ ಅಡಕೆ ತಳಿಗಳಿದ್ದು ದಶಾವರಿ, ಮೋಹಿತ್‌ನಗರ್‌, ಮಂಗಳ, ಸ್ವರ್ಣಮಂಗಳ, ಸುಮಂಗಲಾ ಹಾಗೂ ಇನ್ನೂ ಮುಂತಾದ ಹೊಸಾ ತಳಿ ಪರಿಚಯಿಸಲಾಗುತ್ತಿದೆ. ಆಯಾ ಪ್ರದೇಶಕ್ಕನುಗುಣವಾದ ಅಡಕೆ ತಳಿ ಬೆಳೆಯಲಾಗುತ್ತಿದೆ. ಮಲೆನಾಡಿನ ದಶಾವರಿ ಕೆಂಪಡಕೆ ಉತ್ಕೃಷ್ಟÜ ತಳಿಯಾಗಿದ್ದು, ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದರು. ಕಾಫಿ, ಏಲಕ್ಕಿ, ಕಾಳುಮೆಣಸು, ಬಾಳೆ, ಜಾಯಿಕಾಯಿ, ಲವಂಗ ಹಾಗೂ ಸೌತೆಕಾಯಿ, ಚೌಳಿಕಾಯಿಗಳನ್ನು ಉಪಬೆಳೆಯಾಗಿ ಬೆಳೆಯಬಹುದು ಎಂದರು

ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆ ಅಧ್ಯಕ್ಷ ಎನ್‌. ಕೃಷ್ಣಮೂರ್ತಿ ಬಿಳೆಗಲ್ಲೂರು ಮಾತನಾಡಿ, ದೇಶದಲ್ಲಿ ಶೇ70ರಷ್ಟು ಜನ ಕೃಷಿಕರಿದ್ದು, ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದರು. ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಬಳಸುತ್ತಿರುವ ಬೋರ್ಡೋ ದ್ರಾವಣ ತಯಾರಿಕೆ ಕುರಿತು ಪ್ರಾತ್ಯಕ್ಷಿಕೆ ನಡೆಸಲಾಯಿತು. ಕಾಲೇಜು ಪ್ರಾಚಾರ್ಯ ಡಾ.ಎಂ.ಎಸ್‌.ಪ್ರಶಾಂತ್‌ ಅಧ್ಯಕ್ಷ ತೆ ವಹಿಸಿದ್ದರು. ಗ್ರಾ.ಪಂ.ಕಾರ‍್ಯದರ್ಶಿ ಉಮೇಶ್‌, ಪ್ರಗತಿಪರ ಕೃಷಿಕರಾದ ಶಶಿಕುಮಾರ್‌, ಕೃಷ್ಣಮೂರ್ತಿ ನಂದೀತಳೆ, ಚಂದ್ರಪ್ಪ ಉಳ್ಳೂರು, ಉಪನ್ಯಾಸಕರಾದ ಎಂ.ಕೆ.ಕೃಷ್ಣಮೂರ್ತಿ, ಚಂದ್ರಶೇಖರ್‌ ಕಾಂಜನ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ