ಆ್ಯಪ್ನಗರ

ಧಾರ್ಮಿಕ ಸಂಸ್ಥೆ ಆಡಳಿತದಲ್ಲಿ ಸರಕಾರದ ಹಸ್ತಕ್ಷೇಪ ಸಲ್ಲದು

ಶ್ರೀಕ್ಷೇತ್ರ ಕೂಡಲಿ ಶೃಂಗೇರಿ ಮಹಾಸಂಸ್ಥಾನಂ ಸಮಾಜದ ಹಿತಕ್ಕಾಗಿ ಸೇವೆ ಸಲ್ಲಿಸುತ್ತಿರುವ ಮಠವಾಗಿದ್ದು, ಇಂತಹ ಧಾರ್ಮಿಕ ಸಂಸ್ಥೆಯ ಆಡಳಿತದ ವಿಷಯದಲ್ಲಿ ಸರಕಾರವು ಅನಗತ್ಯವಾಗಿ ಮಧ್ಯ ಪ್ರವೇಶಿಸಬಾರದು ಎಂದು ಡಾ.ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಹೇಳಿದರು.

Vijaya Karnataka 9 Dec 2018, 5:00 am
ಹೊಳೆಹೊನ್ನೂರು(ಶಿವಮೊಗ್ಗ):ಶ್ರೀಕ್ಷೇತ್ರ ಕೂಡಲಿ ಶೃಂಗೇರಿ ಮಹಾಸಂಸ್ಥಾನಂ ಸಮಾಜದ ಹಿತಕ್ಕಾಗಿ ಸೇವೆ ಸಲ್ಲಿಸುತ್ತಿರುವ ಮಠವಾಗಿದ್ದು, ಇಂತಹ ಧಾರ್ಮಿಕ ಸಂಸ್ಥೆಯ ಆಡಳಿತದ ವಿಷಯದಲ್ಲಿ ಸರಕಾರವು ಅನಗತ್ಯವಾಗಿ ಮಧ್ಯ ಪ್ರವೇಶಿಸಬಾರದು ಎಂದು ಡಾ.ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಹೇಳಿದರು.
Vijaya Karnataka Web BNG-SMG-0812-2-15-8GAN2


ಪಟ್ಟಣ ಸಮೀಪದ ಶ್ರೀಕ್ಷೇತ್ರ ಕೂಡಲಿಯ ಶೃಂಗೇರಿ ಮಹಾಸಂಸ್ಥಾನಂ ಆವರಣದಲ್ಲಿ ಶನಿವಾರ ನಡೆದ ತಮ್ಮ ವರ್ಧಂತಿ ಮಹೋತ್ಸವ ಕಾರ‍್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಕೂಡಲಿ ಪವಿತ್ರ ನದಿ ತುಂಗಾ ಹಾಗೂ ಭದ್ರಾ ಸಂಗಮ ಸ್ಥಳವಾಗಿದೆ. ಋುಷಿಮುನಿಗಳ ತಪೋಭೂಮಿಯಾಗಿದ್ದು ಸುತ್ತಲು ಹಚ್ಚಹಸಿರಿನ ಪ್ರಕೃತಿತಾಣವಿದೆ. ಪುರಾತನ ದೇವಾಲಯಗಳ ನಯನ ಮನೋಹರ ಗ್ರಾಮ. ಎರಡು ಪ್ರಮುಖ ಮಠಗಳ ಸಾನ್ನಿಧ್ಯ ಇರುವಂತಹ ಇಂತಹ ಅಪರೂಪದ ಸ್ಥಳವನ್ನು ಸರಕಾರಗಳು ಪೂರ್ಣವಾಗಿ ಅಭಿವೃದ್ಧಿಗೊಳಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕು. ಶ್ರೀಕ್ಷೇತ್ರದಲ್ಲಿ ನಿರ್ಮಾಣ ಹಂತದಲ್ಲಿರುವ ಶಾರದಾದೇವಿಯ ದೇವಾಲಯ ಪೂರ್ಣಗೊಳ್ಳಲು ಎಲ್ಲರು ಸಹಕಾರ ನೀಡಬೇಕು ಎಂದರು.

ಇದಕ್ಕೂ ಮುನ್ನಾ ಶಾರದಮ್ಮ ಹಾಗೂ ವಿದ್ಯಾರಣ್ಯರಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು. ಬಳಿಕ ನವಗ್ರಹ ಹಾಗೂ ಮೃತ್ಯುಂಜಯ ಹೋಮ ನಡೆಯಿತು. ಚಂದ್ರಶೇಖರ್‌, ವಿದ್ವಾನ್‌ ಸೀತಾರಾಮ್‌ ಉಡುಪ, ರಾಘು ಭಟ್‌, ಮುರಳಿ ಭಟ್‌, ದತ್ತಣ್ಣ, ಕೆ.ಎನ್‌.ರಾಜಾರಾಮ್‌, ಶ್ರೀನಿವಾಸ ಅಯ್ಯರ್‌, ರಮೇಶ್‌ ಹುಲಿಮನಿ, ವೆಂಕಟಸುಬ್ಬು ಮೋಕ್ಷ ಗುಂಡಂ ಸೇರಿದಂತೆ ನೂರಾರು ಶಿಷ್ಯ ಹಾಗೂ ಭಕ್ತರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ