ಆ್ಯಪ್ನಗರ

ನಿರೀಕ್ಷೆಯಂತೆ ಸಾಧನೆ ಮಾಡಿದ ವಿದ್ಯಾ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಿರೀಕ್ಷಿಸಿದಂತೆ 619 ಅಂಕಗಳು ಬಂದಿವೆ. ಸಮಾಜ ವಿಜ್ಞಾನದಲ್ಲಿ ಶೇ.100 ಅಂಕಗಳು ಬಾರದಿರುವುದು ಬೇಸರ ತಂದಿದೆ ಎಂದು ತಾಲೂಕಿನ ಟಾಪರ್‌, ನ್ಯೂಟೌನ್‌ ಎಸ್‌ಎವಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ವಿದ್ಯಾ ಹೇಳಿದರು.

Vijaya Karnataka 1 May 2019, 5:00 am
ಭದ್ರಾವತಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಿರೀಕ್ಷಿಸಿದಂತೆ 619 ಅಂಕಗಳು ಬಂದಿವೆ. ಸಮಾಜ ವಿಜ್ಞಾನದಲ್ಲಿ ಶೇ.100 ಅಂಕಗಳು ಬಾರದಿರುವುದು ಬೇಸರ ತಂದಿದೆ ಎಂದು ತಾಲೂಕಿನ ಟಾಪರ್‌, ನ್ಯೂಟೌನ್‌ ಎಸ್‌ಎವಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ವಿದ್ಯಾ ಹೇಳಿದರು.
Vijaya Karnataka Web SMR-30BDVT2


ಫಲಿತಾಂಶದ ಬಳಿಕ 'ಪತ್ರಿಕೆ' ಜತೆಗೆ ಮಾತನಾಡಿ, ಶಾಲೆಯ ಎಲ್ಲ ಶಿಕ್ಷ ಕ, ಶಿಕ್ಷ ಕಿಯರು ನೀಡಿದ ಸಹಕಾರದಿಂದ ಅತ್ಯುತ್ತಮ ಫಲಿತಾಂಶ ಲಭಿಸಿದೆ. ತಂದೆ ಎಂ.ಎಲ್‌.ಮಹಾದೇವ ಮಾಚೇನಹಳ್ಳಿ ಖಾಸಗಿ ಕಂಪನಿಯಲ್ಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಜೆ.ಗೌರಿ ಗೃಹಿಣಿಯಾಗಿದ್ದು, ನನ್ನ ಶಿಕ್ಷ ಣಕ್ಕೆ ದಾರಿದೀಪವಾಗಿದ್ದಾರೆ. ಮುಂದೆ ಚೆನ್ನಾಗಿ ಓದಿ ವೈದ್ಯಕೀಯ ಶಿಕ್ಷಣದಲ್ಲಿ ಸಾಧನೆ ಮಾಡಿ ಪೋಷಕರಿಗೆ ಮತ್ತು ಸಮಾಜಕ್ಕೆ ನೆರವಾಗಬೇಕು ಎಂಬ ಹಂಬಲ ಹೊತ್ತಿದ್ದೇನೆ ಎಂದರು.

ಶಾಲೆಯಲ್ಲಿ ಶಿಕ್ಷ ಕರು ಕಠಿಣವಾದ ವ್ಯಾಸಂಗಕ್ಕೆ ಒತ್ತುಕೊಡುತ್ತಿದ್ದರು. ಅದು ನನಗೆ ಕಷ್ಟದ ಜತೆಗೆ ಇಷ್ಟವೂ ಆಗಿತ್ತು. ಬೆಳಗ್ಗೆ 8.30ರಿಂದ ಸಂಜೆ 5.15ರ ವರೆಗೆ ಶಾಲೆಯಲ್ಲಿ ಕಲಿಯುತ್ತಿದ್ದೆ. ಸಂಜೆ 6.30ಕ್ಕೆ ಮನೆಯಲ್ಲಿ ಓದಲು ಆರಂಭಿಸುತ್ತಿದ್ದೆ. ಮನೆಪಾಠಕ್ಕೆ ಹೋಗುತ್ತಿರಲಿಲ್ಲ. ನನ್ನ ತಾಯಿ ಟಿವಿಯಲ್ಲಿ ಬರುವ ಸೀರಿಯಲ್‌ಗಳನ್ನು ನೋಡುವುದನ್ನು ಬಿಟ್ಟಿದ್ದರು. ತಂದೆ ಶಬ್ದವಿಲ್ಲದೆ ಸ್ಕ್ರಾಲಿಂಗ್‌ನಲ್ಲಿ ಬರುವ ಸುದ್ದಿಗಳನ್ನು ವೀಕ್ಷಿಸುತ್ತಿದ್ದರು. ವ್ಯಾಸಂಗಕ್ಕೆ ಮನೆಯಲ್ಲಿ ತೊಡಕಾಗುತ್ತಿರಲಿಲ್ಲ. ನಿರೀಕ್ಷೆಯಂತೆ 619 ಅಂಕಗಳು ಬಂದಿವೆ. ಸಮಾಜ ವಿಜ್ಞಾನದಲ್ಲಿ ನಿರೀಕ್ಷಿಸಿದ್ದ 100 ಅಂಕಗಳ ಬದಲು 98 ಬಂದಿದೆ. ಈ ಕುರಿತು ಮರು ಎಣಿಕೆಗೆ ಅರ್ಜಿ ಸಲ್ಲಿಸುವ ಆಲೋಚನೆ ಇದೆ ಎಂದರು.

ತಂದೆ ಎಂ.ಎಲ್‌.ಮಹಾದೇವ ಮತ್ತು ತಾಯಿ ಜೆ.ಗೌರಿ ಮಾತನಾಡಿ, ನಮ್ಮ ಮಗಳ ಫಲಿತಾಂಶ ಖುಷಿ ತಂದಿದೆ. ಎಸ್‌ಎವಿ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷ ಣ ಲಭಿಸುತ್ತಿದೆ. ವಿದ್ಯಾಸಂಸ್ಥೆಗೆ ಮತ್ತು ಎಲ್ಲ ಶಿಕ್ಷ ಕರಿಗೆ ಅಭಿನಂದಿಸುವುದಾಗಿ ಹೇಳಿದರು. ಮುಂದೆ ಮಗಳ ಇಚ್ಛೆಯಂತೆ ಓದಿಸಲು ನೆರವಾಗುವುದಾಗಿ ತಿಳಿಸಿದರು.

ಶಾಲಾ ಆಡಳಿತಾಧಿಕಾರಿ ಜಗದೀಶ್‌, ಪ್ರಾಂಶುಪಾಲರಾದ ಡಾ.ಹರಿಣಾಕ್ಷಿ ವಿದ್ಯಾರ್ಥಿನಿಯ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ