ಆ್ಯಪ್ನಗರ

ಇಬ್ಬರು ಮೆಗ್ಗಾನ್‌ಗೆ, ಆದೇಶ

ಹೋಂ ಕ್ವಾರಂಟೈನ್‌ನಲ್ಲಿಇದ್ದ ಇಬ್ಬರು ವ್ಯಕ್ತಿಗಳು ತಮ್ಮ ಜಾಗ ಬದಲಿಸಿದ ಕಾರಣಕ್ಕೆ ಅವರಿಬ್ಬರಿಗೂ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಬೇಕೆಂದು ತಹಸೀಲ್ದಾರ್‌ ಗುರುವಾರ ಆದೇಶಿಸಿದ್ದಾರೆ.

Vijaya Karnataka 4 Apr 2020, 5:00 am
ಶಿಕಾರಿಪುರ: ಹೋಂ ಕ್ವಾರಂಟೈನ್‌ನಲ್ಲಿಇದ್ದ ಇಬ್ಬರು ವ್ಯಕ್ತಿಗಳು ತಮ್ಮ ಜಾಗ ಬದಲಿಸಿದ ಕಾರಣಕ್ಕೆ ಅವರಿಬ್ಬರಿಗೂ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಬೇಕೆಂದು ತಹಸೀಲ್ದಾರ್‌ ಗುರುವಾರ ಆದೇಶಿಸಿದ್ದಾರೆ.
Vijaya Karnataka Web violation of the quarantine two people to meghan order
ಇಬ್ಬರು ಮೆಗ್ಗಾನ್‌ಗೆ, ಆದೇಶ


ತಾಲೂಕಿನ ಹಳೇಗೊದ್ದನಕೊಪ್ಪ ಗ್ರಾಮದ ದೀಪಾ ಕೋಂ ನಾಗೇಶ್‌ ಅವರು ಕಳೆದ ತಿಂಗಳ 24ರಿಂದ ಹೋಂ ಕ್ವಾರಂಟೈನ್‌ಗೆ ಒಳಪಟ್ಟಿದ್ದರು. ಗ್ರಾಮ ಮಟ್ಟದ ಕಾರ‍್ಯಪಡೆ ಕಾರ‍್ಯಕರ್ತರು ಬುಧವಾರ ಪರಿಶೀಲನೆಗೆ ತೆರಳಿದಾಗ ಅವರು ಭದ್ರಾವತಿ ತಾಲೂಕಿನ ಕಲ್ಲಿಹಾಳ ಗ್ರಾಮಕ್ಕೆ ತೆರಳಿರುವುದು ಬೆಳಕಿಗೆ ಬಂದಿದೆ.

ಮತ್ತೊಂದು ಪ್ರಕರಣದಲ್ಲಿಹೊಸಗೊದ್ದನಕೊಪ್ಪದ ದೇವಿಬಾಯಿ ಕೋಂ ಗೋವಿಂದನಾಯ್ಕ ಅವರು ಕಳೆದ ತಿಂಗಳ 31ಕ್ಕೆ ಹೋಂ ಕ್ವಾರಂಟೈನ್‌ಗೆ ಒಳಪಟ್ಟಿದ್ದರು. ಬುಧವಾರ ಪರಿಶೀಲನೆ ಸಂದರ್ಭ ಅವರು ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದ ಮನೆಗೆ ತೆರಳಿದ್ದು ಗಮನಕ್ಕೆ ಬಂದಿದೆ.

ಎರಡೂ ಪ್ರಕರಣ ಕುರಿತು ಪರಿಶೀಲಿಸಿದ ತಹಸೀಲ್ದಾರ್‌ ಎಂ.ಪಿ.ಕವಿರಾಜ್‌, ಇಬ್ಬರನ್ನೂ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸುವಂತೆ ವೃತ್ತ ನಿರೀಕ್ಷಕರಿಗೆ ಆದೇಶ ನೀಡಿದ್ದಾರೆ.

ಇಬ್ಬರ ವಿರುದ್ಧ ಕ್ರಮಕ್ಕೆ ಪತ್ರ:
ಶಿರಾಳಕೊಪ್ಪ: ಪಟ್ಟಣದ ಇಬ್ಬರು ನಿವಾಸಿಗಳು ಹೋಂ ಕ್ವಾರಂಟೈನ್‌ಗೆ ಒಳಪಟ್ಟಿದ್ದರೂ ಎಲ್ಲೆಂದರಲ್ಲಿತಿರುಗಾಡುತ್ತಿದ್ದು ಅವರ ವಿರುದ್ಧ ಸೂಕ್ತಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ಪೊಲೀಸ್‌ ಇಲಾಖೆಗೆ ಸೂಚಿಸಿದ್ದಾರೆ.

ದೇವರಾಜ್‌ ಅರಸ್‌ ಬಡಾವಣೆ ನಿವಾಸಿಗಳಾದ ರಿಯಾಜ್‌, ಫಯಾಜ್‌ ಇಬ್ಬರೂ ಕೇರಳದಿಂದ ಕಳೆದ ತಿಂಗಳು 10, 23ರಂದು ಪಟ್ಟಣಕ್ಕೆ ಆಗಮಿಸಿದ್ದರು. ಅವರಿಗೆ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು, ಗುರುವಾರ ಪರಿಶೀಲನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿದಾಗ ಅವರಿಬ್ಬರೂ ಸದರಿ ವಿಳಾಸದಲ್ಲಿಇರಲಿಲ್ಲ. ಅವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್‌ ಇಲಾಖೆಗೆ ಮುಖ್ಯಾಧಿಕಾರಿ ಪತ್ರ ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ